ಮಂಗಳೂರಿನ ಸಸಿಹಿತ್ಲು ಬೀಚ್ನಲ್ಲಿ ದರೋಡೆ ಮತ್ತು ಕಿರುಕುಳ

ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ವಿಧಾನಸಭಾ ಕ್ಷೇತ್ರದ ಹಳೆಯಂಗಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಸಿಹಿತ್ಲು ಬೀಚ್ನಲ್ಲಿ ಪ್ರವಾಸೋದ್ಯಮದ ಯಾವುದೇ ಸೂಚನಾ ಫಲಕವಿಲ್ಲದೆ
ಪ್ರವಾಸಿಗರಿಗೆ ತಲಾ ೨೦ (20) ರೂಪಾಯಿ ಶುಲ್ಕ ವಿಧಿಸಿ ಇದರ ಬಗ್ಗೆ ಪ್ರೆಶ್ನಿಸಿದರೆ ಅವ್ಯಾಚ ಪದಗಳಿಂದ ನಿಂದಿಸಿ ಗೂಂಡಾ ಗಿರಿ ಪ್ರದರ್ಶಿಸುತಿರುವುದು ಪ್ರವಾಸಿಗರಿಗೆ ಇರಿಸುಮುರುಸು
ಉಂಟಾಗುವಂತೆ ಮಾಡಿದೆ..ಯಾವುದೇ ಮೂಲ ಸೌಕರ್ಯವಿಲ್ಲದೆ ಕನಿಷ್ಠ ಪಕ್ಷ ಕುಡಿಯುವ ನೀರು ಅಥವಾ ಕುಳಿತುಕೊಳ್ಳಲು ಬೆಂಚಿನ ವ್ಯವಸ್ಥೆ ಮಾಡದೆ ಈ ರೀತಿ ದೋಚುತ್ತಿರುವುದರ ಬಗ್ಗೆ
ಪ್ರವಾಸಿಗರು ನೋವನ್ನು ವ್ಯಕ್ತ ಪಡಿಸಿದ್ದು.
ಇಂಥಹ ಚಟುವಟಿಕೆಗಳಿಂದ ಜಿಲ್ಲೆಯ ಜನರು ತಲೆತಗ್ಗಿಸುವಂತಾಗಿರುವುದು ಮಾತ್ರ ಸುಳ್ಳಲ್ಲ. ಇನ್ನಾದರೂ
ಪ್ರವಾಸೋದ್ಯಮ ಇಲಾಖೆ , ಜಿಲ್ಲಾಡಳಿತ ಇದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ.

