ಉತ್ತರ ಭಾರತದಲ್ಲಿ ಭಾರೀ ಭೂಕಂಪ: ಅಸ್ಸಾಂನಿಂದ ದೆಹಲಿವರೆಗೆ ನಡುಗಿದ ಭೂಮಿ

ಮೋರಿಗಾಂವ್: ಇಂದು ಬೆಳಗಿನ ಜಾವ 2:25 ಕ್ಕೆ ಅಸ್ಸಾಂನಮೋರಿಗಾಂವ್‌ನಲ್ಲಿ 5.0 ತೀವ್ರತೆಯ ಭೂಕಂಪ ಸಂಭವಿಸಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಪ್ರಕಾರ, ಭೂಕಂಪದ ಕೇಂದ್ರಬಿಂದು ಮೋರಿಗಾಂವ್ ಆಗಿತ್ತು. ಆದರೆ ಅಸ್ಸಾಂ ಹೊರತುಪಡಿಸಿ, ಮೇಘಾಲಯ, ಪಶ್ಚಿಮ ಬಂಗಾಳ, ಬಿಹಾರ ಮತ್ತು ದೆಹಲಿ-ಎನ್‌ಸಿಆರ್ ವರೆಗೆ ಕಂಪನದ ಅನುಭವವಾಯಿತು. ಮಧ್ಯರಾತ್ರಿಯ ನಂತರ ಸಂಭವಿಸಿದ ಈ ಭೂಕಂಪಗಳಿಂದಾಗಿ ಜನರು ಭಯಭೀತರಾಗಿ ಮನೆಗಳಿಂದ ಹೊರಗೆ ಓಡಿ ಬಂದರು.

ಅಸ್ಸಾಂನ ಹಲವು ಜಿಲ್ಲೆಗಳಲ್ಲಿ ಭೂಕಂಪದ ಪರಿಣಾಮ ಕಂಡುಬಂದಿದೆ. ಗುವಾಹಟಿ, ನಾಗಾಂವ್ ಮತ್ತು ತೇಜ್‌ಪುರದಲ್ಲಿ ಜನರು ಕಂಪನದ ಅನುಭವಕ್ಕೆ ಒಳಗಾದರು. “ನಡುಕ ಎಷ್ಟು ಪ್ರಬಲವಾಗಿತ್ತೆಂದರೆ ನಮಗೆ ಎಚ್ಚರವಾದಾಗ ಫ್ಯಾನ್‌ಗಳು ಮತ್ತು ಕಿಟಕಿಗಳು ಅಲುಗಾಡಲು ಪ್ರಾರಂಭಿಸಿದವು” ಎಂದು ಅನೇಕ ಜನರು ಸಾಮಾಜಿಕ ಮಾಧ್ಯಮದಲ್ಲಿ ಬರೆದಿದ್ದಾರೆ. ಕೆಲವು ಪ್ರದೇಶಗಳಲ್ಲಿ ಜನರು ತಮ್ಮ ಮನೆಗಳಿಂದ ಹೊರಬಂದಿದ್ದಾರೆ. ಇನ್ನು ಭೂಕಂಪನದಿಂದ ಯಾವುದೇ ದೊಡ್ಡ ನಷ್ಟವಾದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.