ಧರ್ಮಸ್ಥಳಕ್ಕೆ ಬೃಹತ್ ಘಂಟೆ ಕಾಣಿಕೆ – ಡಿ. ವೀರೇಂದ್ರ ಹೆಗ್ಗಡೆಯವರಿಂದ ಉದ್ಘಾಟನೆ

ಧರ್ಮಸ್ಥಳ ಕ್ಷೇತ್ರಕ್ಕೆ ಬೃಹತ್ ಘಂಟೆ ಕೊಡುಗೆ; ಧರ್ಮಾಧಿಕಾರಿಗಳಿಂದ ಉದ್ಘಾಟನೆ.

ಧರ್ಮಸ್ಥಳ : ಬೆಂಗಳೂರಿನ ಉದ್ಯಮಿ ಕೆ.ಎಸ್. ದಿನೇಶ್ ಮತ್ತು ಪತ್ನಿ ಪಿ. ಸುನೀತಾ ಧರ್ಮಸ್ಥಳದ ಭಕ್ತರಾಗಿದ್ದು, ದೇವಸ್ಥಾನಕ್ಕೆ ಕಾಣಿಕೆಯಾಗಿ ಅರ್ಪಿಸಿದ್ದಾರೆ.
ಈ ಬೃಹತ್ ಘಂಟೆಯನ್ನು ಬುಧವಾರ ಶಿವರಾತ್ರಿಯ ಶುಭಾವಸರದಲ್ಲಿ ಧರ್ಮಸ್ಥಳದಲ್ಲಿ ಅಣ್ಣಪ್ಪಸ್ವಾಮಿ ಬೆಟ್ಟದ ಎದುರು ನಿರ್ಮಿಸಿದ ನೂತನ ಮಂಟಪದಲ್ಲಿ ಧರ್ಮಾಧಿಕಾರಿಗಳಾದ ಡಿ. ವೀರೇಂದ್ರ ಹೆಗ್ಗಡೆ ಉದ್ಘಾಟಿಸಿದರು.
ಈ ಸಂದರ್ಭ ಕೆ ಎಸ್ ದಿನೇಶ್ ಕುಟುಂಬಿಕರು, ಭಕ್ತರು ಉಪಸ್ಥಿತರಿದ್ದರು. 5 ಕ್ವಿಂಟಾಲ್ ತೂಕದ ಈ ಗಂಟೆಯನ್ನು ಲಕ್ನೋದಲ್ಲಿ 20 ದಿನಗಳಲ್ಲಿ ನಿರ್ಮಾಣ ಮಾಡಲಾಗಿದೆ. ಕಲ್ಲಿನ ವೃತ್ತ ಹಾಗೂ ಕಂಬದಿಂದ ಘಂಟೆಯನ್ನು ಜೋಡಣೆ ಮಾಡಲಾಗಿದ್ದು, ಇದಕ್ಕೆ ಒಟ್ಟು 10 ಲಕ್ಷ ರೂಪಾಯಿ ವೆಚ್ಚ ತಗುಲಿದೆ.