Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

“ಚಿಕ್ಕಬಳ್ಳಾಪುರದಲ್ಲಿ ಜಾತಿ ಗಣತಿ ಸಮೀಕ್ಷೆಗೆ ಭರ್ಜರಿ ತಾಲೀಮು – 2,982 ಗಣತಿದಾರರು ಸಜ್ಜು”

Spread the love

ಚಿಕ್ಕಬಳ್ಳಾಪುರ: ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ(ಜಾತಿ ಗಣತಿ) ನಡೆಸಲು ಭರ್ಜರಿ ತಾಲೀಮು ನಡೆಸುತ್ತಿದೆ. ಈಗಾಗಲೇ ಜಿಲ್ಲಾದ್ಯಂತ ಮನೆಗಳ ಜಿಯೋ ಟ್ಯಾಗಿಂಗ್‌ ಮಾಡುವ ಕಾರ್ಯ ನಡೆಯುತ್ತಿದ್ದು, ಇದರೊಟ್ಟಿಗೆ ಮಾಸ್ಟರ್‌ ಟ್ರೈನರ್‌ಗಳ ತರಬೇತಿ ಮುಕ್ತಾಯಗೊಂಡಿದೆ. ಮತ್ತೊಂದೆಡೆ ಗಣತಿದಾರರು ಮತ್ತು ಮೇಲ್ವಿಚಾರಕ ಹೆಸರು ಅಂತಿಮವಾಗಿದ್ದು, ಸೆ.19 ರೊಳಗೆ ಅವರಿಗೂ 2 ಸುತ್ತಿನ ತರಬೇತಿ ನೀಡಲು ಜಿಲ್ಲಾಡಳಿತ ಸೂಚನೆ ನೀಡಿದೆ.

ಆ.23ರಿಂದಲೇ ಪೂರ್ವತಯಾರಿ ಪ್ರಕ್ರಿಯೆ ನಡೆದಿದ್ದು, ಸೆ.22ರಿಂದ ಜಾತಿಗಣತಿ ಅಧಿಕೃತವಾಗಿ ಆರಂಭವಾಗಿ ಸರಕಾರಿ ಶಾಲೆಗಳ ರಜೆ ಮುಗಿಯುವುದರೊಳಗೆ ಅಂದರೆ ಅ.7ರೊಳಗೆ ಜಾತಿಗಣತಿ ಪೂರ್ಣಗೊಳಿಸಲು ಜಿಲ್ಲಾಡಳಿತ ಸಜ್ಜಾಗಿದೆ. ಮತ್ತೊಂದೆಡೆ ಬೆಸ್ಕಾಂ ವಿದ್ಯುತ್‌ ಮೀಟರ್‌ ರೀಡರ್‌ಗಳು ಎಲ್ಲ ಮನೆಗಳನ್ನು ಜಿಯೋಟ್ಯಾಗಿಂಗ್‌ ಮಾಡುವ ಕಾರ್ಯ ಅಂತಿಮ ಹಂತದಲ್ಲಿದ್ದು, ಸೆ.22ರೊಳಗೆ ಜಿಯೋ ಟ್ಯಾಗ್‌ ಮಾಡಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.


ಭರ್ಜರಿ ತಾಲೀಮು:

ಸಮೀಕ್ಷೆ ಕಾರ್ಯವನ್ನು ದಸರಾ ರಜೆ ಅವಧಿಯಲ್ಲಿ ಸೆ.22ರಿಂದ ಅ.7ರ ವರೆಗೆ ನಡೆಸುವ ಗುರಿ ಹೊಂದಲಾಗಿದೆ. ಸಮೀಕ್ಷೆ ಹಿಂದುಳಿದ ವರ್ಗಗಳು ಮತ್ತು ಇತರ ಎಲ್ಲಾ ಜನರ ದತ್ತಾಂಶಗಳನ್ನು ಸಂಗ್ರಹಿಸುವುದು ಮಾತ್ರವಲ್ಲ, ಅಂದಾಜು 7 ಕೋಟಿ ಜನರಿಗೆ ಸರಕಾರಿ ಇಲಾಖೆಗಳಿಂದ ಪ್ರಾರಂಭಿಸಲಾಗಿರುವ ಹಾಗೂ ಮುಂದೆ ಪ್ರಾರಂಭಿಸಲಿರುವ ಎಲ್ಲಾ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಬಳಸಬಹುದಾದ ಉಪಯುಕ್ತ ದತ್ತಾಂಶ ಸಿಗಲಿದೆ. ಹೀಗಾಗಿ ಈ ಬಾರಿಯ ಸಮೀಕ್ಷೆಯನ್ನು ವ್ಯವಸ್ಥಿತವಾಗಿ ನಡೆಸಲು ಎಲ್ಲತಯಾರಿ ನಡೆದಿದೆ.

ತರಬೇತಿಗೆ ಸೂಚನೆ:

ಜಿಲ್ಲೆಯಲ್ಲಿ ಸುಮಾರು 3,70,000 ಮನೆಗಳಿದ್ದು, ಪ್ರತಿ 150 ಮನೆಗಳಿಗೆ ಒಬ್ಬ ಗಣಿತಿದಾರರಂತೆ 2,982 ಗಣತಿದಾರರನ್ನು ಅಂತಿಮಗೊಳಿಸಿದ್ದು, 158 ಮಂದಿಯನ್ನು ಗಣತಿ ಮೇಲ್ವಿಚಾರಕರಾಗಿ ನೇಮಿಸಲಾಗಿದೆ. ಎಲ್ಲ ಶಿಕ್ಷಕರಿಂದಲೇ ಜಾತಿಗಣತಿ ನಡೆಸಲು ನಿರ್ಧರಿಸಿದ್ದು, ಈಗಾಗಲೇ ಪಟ್ಟಿ ಸಿದ್ಧಪಡಿಸಿ ಸೆ.19ರೊಳಗೆ ಎಲ್ಲತರಬೇತಿ ಪೂರ್ಣಗೊಳಿಸಲು ಜಿಲ್ಲಾಡಳಿತ ಆಯಾ ತಾಲೂಕು ಆಡಳಿತಗಳಿಗೆ ಆದೇಶ ನೀಡಿದೆ.

ಮತ್ತೊಂದೆಡೆ, ಶಾಲಾ ಅವಧಿಯಲ್ಲಿ ಶಿಕ್ಷಕರನ್ನು ಅನ್ಯ ಕಾರ್ಯಗಳಿಗೆ ಬಳಸಿಕೊಳ್ಳಬಾರದು ಎಂಬ ನಿಯಮ ಜಾರಿ ಇರುವುದು ಧರ್ಮಸಂಕಟವಾಗಿ ಪರಿಣಮಿಸಿದೆ. ಅಲ್ಲದೆ, ವಿದ್ಯಾರ್ಥಿಗಳಿಗೆ ಪರೀಕ್ಷೆ ಬೇರೆ ಇದೆ. ಇನ್ನು ಕೆಲವೆಡೆ ಶಿಕ್ಷಕರ ದಿನಾಚರಣೆ ಹಮ್ಮಿಕೊಂಡಿದ್ದು ಗಣತಿದಾರರಿಗೆ ತರಬೇತಿ ನೀಡುವುದು ಈಗ ಸವಾಲಾಗಿದೆ. ಸೆ.22ರೊಳಗೆ ಗಣತಿದಾರರ ಸಮೀಕ್ಷೆಗೆ ಸಿದ್ಧವಾಗಬೇಕಾದ ಅನಿವಾರ್ಯತೆ ಇದ್ದು, ಸಮಯ ಹೊಂದಾಣಿಕೆ ಮಾಡಿಕೊಂಡು ತರಬೇತಿ ನೀಡಬೇಕಾದ ಅನಿವಾರ್ಯತೆ ಎದುರಾಗಿದೆ.

ಈಗಾಗಲೇ ಜಿಪಂ ಸಭಾಂಗಣದಲ್ಲಿ ರಾಜ್ಯ ಮಟ್ಟದ ಮಾಸ್ಟರ್‌ ಟ್ರೈನರ್‌ಗಳಿಂದ 50 ಜಿಲ್ಲಾಮಟ್ಟದ ಮಾಸ್ಟರ್‌ ಟ್ರೈನರ್‌ಗಳಿಗೆ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿತ್ತು. ಸಮೀಕ್ಷಾ ಕಾರ್ಯ ರಾಜ್ಯಾದ್ಯಂತ ಏಕಕಾಲಕ್ಕೆ ನಡೆಯಲಿದ್ದು, ಅದರಂತೆ ಜಿಲ್ಲೆಯಲ್ಲೂನಡೆಯಲಿದೆ. ಈ ಕಾರ್ಯಾಗಾರದಲ್ಲಿತರಬೇತಿ ಪಡೆಯುವ 50 ಮಾಸ್ಟರ್‌ ಟ್ರೈನರ್‌ಗಳಿಂದ ತಾಲೂಕು ಮಟ್ಟದಲ್ಲಿಮೇಲ್ವಿಚಾರಕರಿಗೆ ಮತ್ತು ಗಣತಿದಾರರಿಗೆ 2 ಸುತ್ತಿನ ತರಬೇತಿ ಕಾರ್ಯಾಗಾರಗಳನ್ನು ನಡೆಸಲಿದ್ದಾರೆ.

ಜಿಲ್ಲೆಯಲ್ಲಿ ಸದ್ಯ ಗಣತಿದಾರರು ಮತ್ತು ಮೇಲ್ವಿಚಾರಕರು ಸೇರಿದಂತೆ 3,140 ಮಂದಿಯನ್ನು ಜಾತಿಗಣತಿಗೆ ನೇಮಿಸಲಾಗಿದೆ. ಒಟ್ಟು 2,982 ಗಣತಿದಾರರು, 158 ಮೇಲ್ವಿಚಾರಕರು ಸೇರಿ ಜಾತಿಗಣತಿಯಲ್ಲಿ3,140 ಮಂದಿ ಭಾಗಿಯಾಗಲಿದ್ದಾರೆ. ಇವರಿಗೆ ತರಬೇತಿ ನೀಡಲು ಒಟ್ಟು 50 ಮಂದಿ ಮಾಸ್ಟರ್‌ ಟ್ರೈನರ್‌ಗಳನ್ನು ನೇಮಿಸಲಾಗಿದೆ. ಸೆ.22ರೊಳಗೆ ತರಬೇತಿ ಮುಗಿಸಿ ಇವರೆಲ್ಲರೂ ಏಕಕಾಲದಲ್ಲಿಜಾತಿಗಣತಿಯಲ್ಲಿತೊಡಬೇಕಿದೆ. ಇತ್ತೀಚೆಗೆ ಪರಿಶಿಷ್ಟ ಜಾತಿ ಗಣತಿ ನಡೆದಿದ್ದು, ಅಲ್ಲಿಕೆಲವು ದೋಷಗಳು ಆಗಿದ್ದವು. ಅವೆಲ್ಲನ್ನು ಈ ಬಾರಿಯ ಸಮೀಕ್ಷೆಯಲ್ಲಿಸರಿಪಡಿಸಲು ನಿರ್ಧರಿಸಲಾಗಿದೆ. ಹೀಗಾಗಿ ಈ ಬಾರಿಯ ಜಾತಿಗಣತಿ ಸಾಕಷ್ಟು ಕುತೂಹಲ ಕೆರಳಿಸುವಂತೆ ಮಾಡಿದೆ.

ಈಗಾಗಲೇ ಜಾತಿಗಣತಿ ಸಮೀಕ್ಷೆ ಸಂಬಂಧ ರಾಜ್ಯ ಮಟ್ಟದ ಮಾಸ್ಟರ್‌ ಟ್ರೈನರ್‌ಗಳಿಂದ 50 ಜಿಲ್ಲಾಮಟ್ಟದ ಮಾಸ್ಟರ್‌ ಟ್ರೈನರ್‌ಗಳಿಗೆ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿದೆ. ಸಮೀಕ್ಷಾ ಕಾರ್ಯ ರಾಜ್ಯಾದ್ಯಂತ ಏಕಕಾಲದಲ್ಲಿ ನಡೆಯಲಿದ್ದು, ಅದರಂತೆ ಜಿಲ್ಲಾಮಟ್ಟದ ಮಾಸ್ಟರ್‌ ಟ್ರೈನರ್‌ಗಳಿಗೆ ತರಬೇತಿ ನೀಡಲಾಗಿದೆ. ತಾಲೂಕು ಮಟ್ಟದಲ್ಲೂ ನಿಗದಿತ ಅವಧಿಯೊಳಗೆ ಗಣತಿದಾರರು ಮತ್ತು ಮೇಲ್ವಿಚಾರಕರಿಗೆ ತರಬೇತಿ ನೀಡಲು ಸೂಚನೆ ನೀಡಲಾಗಿದೆ ಎಂದಿದ್ದಾರೆ ಮುನಿರತ್ನಮ್ಮ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ


Spread the love
Share:

administrator

Leave a Reply

Your email address will not be published. Required fields are marked *