Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

Maruti Suzuki Cars: ₹62,000 ವರೆಗೆ ಬೆಲೆ ಏರಿಕೆ – ಏಪ್ರಿಲ್ 8ರಿಂದ ಹೊಸ ದರಗಳು ಜಾರಿಗೆ

Spread the love

ಕಾರು ಖರೀದಿ ಮಾಡುವುದು ಪ್ರತಿಯೊಬ್ಬರು ಕನಸು. ಆದರೆ, ಇತ್ತೀಚಿನ ಬೆಲೆ ಏರಿಕೆ ಖರೀದಿ ಮಾಡಲು ಹಿಂದು ಮುಂದು ನೋಡುವಂತೆ ಮಾಡುತ್ತದೆ. ಈ ನಡುವೆ ಅತ್ಯಂತ ಅಗ್ಗದ ದರದಲ್ಲಿ ಅತ್ಯುತ್ತಮ ಫೀಚರ್ಸ್‌ ಆಯ್ಕೆಯ ಕಾರುಗಳನ್ನು ಪರಿಚಯಿಸುತಿದ್ದ ಮಾರುತಿ ಸುಜುಕಿ (Maruti Suzuki Cars)ಇದೀಗ ತನ್ನ ಎಲ್ಲಾ ರೀತಿಯ ಕಾರುಗಳ ಬೆಲೆಯನ್ನು ಏರಿಕೆ ಮಾಡಲಿದೆ.

ಹೌದು, ದೇಶದ ಅತಿದೊಡ್ಡ ಕಾರು ತಯಾರಕ ಮಾರುತಿ ಸುಜುಕಿ ಇಂಡಿಯಾ ಇತ್ತೀಚೆಗೆ ತನ್ನ ಪ್ರಯಾಣಿಕ ವಾಹನಗಳ (ಪಿವಿ) ಬೆಲೆಗಳನ್ನು ಏಪ್ರಿಲ್ 8 ರಿಂದ ಜಾರಿಗೆ ಬರುವಂತೆ ರೂ. 62,000 ದವರೆಗೆ ಹೆಚ್ಚಿಸುವುದಾಗಿ ಮಾಹಿತಿ ನೀಡಿದೆ. ಹೆಚ್ಚುತ್ತಿರುವ ಇನ್‌ಪುಟ್ ವೆಚ್ಚಗಳು, ಕಾರ್ಯಾಚರಣೆಯ ವೆಚ್ಚಗಳು, ನಿಯಂತ್ರಕ ಬದಲಾವಣೆಗಳು ಮತ್ತು ವೈಶಿಷ್ಟ್ಯ ಸೇರ್ಪಡೆಗಳು ಸೇರಿದಂತೆ ಹಲವಾರು ಅಂಶಗಳಿಂದಾಗಿ ಬೆಲೆ ಏರಿಕೆಯಾಗಿದೆ ಎಂದು ಕಂಪನಿಯು ತಿಳಿಸಿದೆ.

ಏಪ್ರಿಲ್ 8, 2025 ರಿಂದ ಕಾರುಗಳ ಬೆಲೆಗಳನ್ನು ಹೆಚ್ಚಿಸಲು ಮುಂದಾಗಿದ್ದು, ವೆಚ್ಚವನ್ನು ಅತ್ಯುತ್ತಮವಾಗಿಸಲು ಮತ್ತು ಗ್ರಾಹಕರ ಮೇಲಿನ ಪರಿಣಾಮವನ್ನು ಕಡಿಮೆ ಮಾಡಲು ಕಂಪನಿಯು ಬದ್ಧವಾಗಿದ್ದರೂ, ಹೆಚ್ಚಿದ ಕೆಲವು ವೆಚ್ಚಗಳನ್ನು ಮಾರುಕಟ್ಟೆಗೆ ವರ್ಗಾಯಿಸಲು ಕಂಪನಿಯು ನಿರ್ಬಂಧಿತವಾಗಿದೆ ಎಂದು ಕಂಪನಿಯು ನಿಯಂತ್ರಕ ಫೈಲಿಂಗ್‌ನಲ್ಲಿ ಉಲ್ಲೇಖ ಮಾಡಲಾಗಿದೆ.

ಕಂಪನಿಯು ಗ್ರ್ಯಾಂಡ್ ವಿಟಾರಾ, ಈಕೊ, ವ್ಯಾಗನ್‌ಆರ್, ಎರ್ಟಿಗಾ, ಎಕ್ಸ್‌ಎಲ್ 6, ಡಿಜೈರ್ ಟೂರ್ ಎಸ್, ಮತ್ತು ಫ್ರಾಂಕ್ಸ್ ಸೇರಿದಂತೆ ಮಾದರಿಗಳ ಬೆಲೆ ಏರಿಕೆಯನ್ನು ಜಾರಿಗೆ ತರಲಿದೆ. ಇದಕ್ಕೂ ಮೊದಲು, ಮಾರುತಿ ಸುಜುಕಿ ಜನವರಿ 2025 ರಲ್ಲಿ ಕಾರುಗಳ ಬೆಲೆಗಳನ್ನು 4% ವರೆಗೆ ಹೆಚ್ಚಿಸಿದೆ. ಇದಲ್ಲದೆ, ಕಳೆದ ತಿಂಗಳು, ಹುಂಡೈ ಮೋಟಾರ್ ಇಂಡಿಯಾ, ಟಾಟಾ ಮೋಟಾರ್ಸ್, ಮಹೀಂದ್ರಾ ಮತ್ತು ಮಹೀಂದ್ರಾ ಮತ್ತು ಕಿಯಾ ಇಂಡಿಯಾ ಸಹ ಏಪ್ರಿಲ್ 2025 ರಲ್ಲಿ ತಮ್ಮ ಕಾರುಗಳ ಬೆಲೆಗಳನ್ನು ಹೆಚ್ಚಿಸುವುದಾಗಿ ಘೋಷಿಸಿವೆ.

ಬೆಲೆ ಏರಿಕೆ ಎಷ್ಟು?

ಮಾರುತಿ ಸುಜುಕಿಯ ಅತ್ಯಧಿಕ ಬೆಲೆ ಏರಿಕೆ ಗ್ರ್ಯಾಂಡ್ ವಿಟಾರಾದಲ್ಲಿ ಇದೆ. ಅಂದರೆ ಕಂಪನಿಯು ಕಾರಿನ ಬೆಲೆಯನ್ನು 62,000 ರೂ.ಗಳವರೆಗೆ ಹೆಚ್ಚಿಸಲಿದೆ. ಇದಲ್ಲದೆ, ಈಕೋ 22,500 ರೂ.ಗಳವರೆಗೆ ಬೆಲೆ ಏರಿಕೆಯೊಂದಿಗೆ ಎರಡನೇ ಸ್ಥಾನದಲ್ಲಿದೆ. ಪ್ರಸ್ತುತ, ಗ್ರ್ಯಾಂಡ್ ವಿಟಾರಾ ದೆಹಲಿಯ ಎಕ್ಸ್ ಶೋ ರೂಂನಲ್ಲಿ 11.19 ಲಕ್ಷದಿಂದ 20.09 ಲಕ್ಷ ರೂ.ಗಳವರೆಗೆ ಬೆಲೆ ನಿಗದಿಪಡಿಸಲಾಗಿದೆ. ಇದೇ ಸಮಯದಲ್ಲಿ, ಈಕೋ ಬೆಲೆ 5.44 ಲಕ್ಷ ರೂ.ಗಳಿಂದ 6.70 ಲಕ್ಷ ರೂ.ಗಳವರೆಗೆ, ಎಕ್ಸ್ ಶೋ ರೂಂ ಬೆಲೆಯಲ್ಲಿ ಲಭ್ಯ ಇದೆ.

ಬೆಲೆ ಹೆಚ್ಚಳದ ವಿವರ

ಗ್ರ್ಯಾಂಡ್ ವಿಟಾರಾ ₹62,000
ಇಕೋ ₹22,500
ವ್ಯಾಗನ್ ಆರ್ ₹14,000
ಎರ್ಟಿಗಾ ₹12,500
XL6 ₹12,500
ಡಿಜೈರ್ ಟೂರ್ ಎಸ್ ₹3,000
ಫ್ರಾಂಕ್ಸ್ ₹2,500
ಪ್ರಸ್ತುತ, ಮಾರುತಿ ಸುಜುಕಿ ತನ್ನ ಹೊಸ ಕಾರುಗಳನ್ನು ಎರಡು ಮಾರ್ಗದಲ್ಲಿ ಮಾರಾಟ ಮಾಡುತ್ತದೆ. ಅದುವೇ ನೆಕ್ಸಾ ಮತ್ತು ಅರೆನಾ ಮಳಿಗೆಗಳು. ನೆಕ್ಸಾ ಮಳಿಗೆಗಳು ಇಗ್ನಿಸ್, ಬಲೆನೊ, ಸಿಯಾಜ್, ಫ್ರಾಂಕ್ಸ್, ಗ್ರ್ಯಾಂಡ್ ವಿಟಾರಾ, ಜಿಮ್ನಿ, ಎಕ್ಸ್‌ಎಲ್ 6 ಮತ್ತು ಇನ್ವಿಕ್ಟೊದಂತಹ ಪ್ರೀಮಿಯಂ ಮಾದರಿಗಳನ್ನು ನೀಡುತ್ತವೆ. ಅರೆನಾ ಮಳಿಗೆಗಳು ಆಲ್ಟೊ ಕೆ 10, ಎಸ್-ಪ್ರೆಸ್ಸೊ, ಸೆಲಿಯೊ, ಈಕೊ, ವ್ಯಾಗನ್‌ಆರ್, ಸ್ವಿಫ್ಟ್, ಡಿಜೈರ್, ಬ್ರೆಝಾ ಮತ್ತು ಎರ್ಟಿಗಾ ಸೇರಿದಂತೆ ಹೆಚ್ಚು ಕೈಗೆಟುಕುವ ಮಾದರಿಗಳನ್ನು ಮಾರಾಟ ಮಾಡುತ್ತವೆ.


Spread the love
Share:

administrator

Leave a Reply

Your email address will not be published. Required fields are marked *