Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ರೋಗಿಯೊಂದಿಗೆ ಆಸ್ತಿಗಾಗಿ ಮದುವೆ- ಪ್ರಿಯಕರನೊಂದಿಗೆ ಸೇರಿ ಪತಿಯ ಕೊಂದ ರೀನಾ

Spread the love

ಡೆಹ್ರಾಡೂನ್‌: ಪ್ರೀತಿಗೆ ಕಣ್ಣಿಗೆ ಕಾಣಲ್ಲ ಅಂತಾರೆ ನಿಜ, ಆದ್ರೆ ಕೆಲವೊಮ್ಮೆ ಪ್ರೀತಿಗೆ ಹೃದಯವೂ ಇರೋದಿಲ್ಲ, ಅದು ತನ್ನ ಪ್ರೇಮಿಯನ್ನ ಬಿಟ್ಟು ಉಳಿದವರಿಗಾಗಿ ಕಲ್ಲಿನಷ್ಟೇ ಕಠೋರವಾಗಿರುತ್ತೆ. ಇದಕ್ಕೆ ಉತ್ತರಾಖಂಡದ ಪ್ರಕರಣವೇ ಸಾಕ್ಷಿಯಾಗಿದೆ. ಇತ್ತೀಚೆಗಷ್ಟೇ ಮೇಘಾಲಯದ ಹನಿಮೂನ್‌ ಪ್ರಕರಣ ಇಡೀ ದೇಶಾದ್ಯಂತ ಸದ್ದು ಮಾಡಿತ್ತು. ಇದೀಗ ಅಂತಹದ್ದೇ ಪ್ರಕರಣ ಉತ್ತರಾಖಂಡದ ಕೋಟ್‌ದ್ವಾರದಲ್ಲಿ ನಡೆದಿದೆ. ಹೌದು. ಕೋಟ್‌ದ್ವಾರದ ದುಗಡ್ಡ ಮಾರ್ಗದ ರಸ್ತೆ ಬದಿಯಲ್ಲಿ ಇದೇ ಜೂನ್‌ 5ರಂದು ಅಪರಿಚಿತ ಶವವೊಂದು ಪತ್ತೆಯಾಗಿತ್ತು.

ಆತನನ್ನ ದೆಹಲಿ ನಿವಾಸಿ ರವೀಂದ್ರ ಕುಮಾರ್‌ ಎಂದು ಗುರುತಿಸಲಾಗಿತ್ತು. ಈ ಸಂಬಂಧ ನಿಗೂಢ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು (Uttarakhand Police) ಕೊನೆಗೂ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೊಲೆಯ ಸೂತ್ರಧಾರಿ ಆತನ ಪತ್ನಿ ರೀನಾ ಸಿಂಧು (34) ಹಾಗೂ ಪ್ರಿಯಕರ ಪಾರಿತೋಷ್‌ ಅನ್ನೋದು ಗೊತ್ತಾಗಿದೆ. ಬಳಿಕ ಇಬ್ಬರನ್ನು ಬಂಧಿಸಲಾಗಿದೆ. ಆದ್ರೆ ಈ ಇಬ್ಬರು ಕೊಲೆ ಮಾಡಿದ್ದು ಹೇಗೆ? ಬಳಿಕ ಪ್ರಕರಣ ಮುಚ್ಚಿಹಾಕಲು ಏನೆಲ್ಲಾ ಪ್ರಯತ್ನ ಮಾಡಿದ್ರೂ? ಅನ್ನೋ ರೋಚಕ ಕಥೆ.

ರೀನಾ ಸಿಂಧು ಯಾರು?
34 ವರ್ಷದ ರೀನಾ ಸಿಂಧು (Rina Sindhu) ಕೊಲೆಯಾದ ರವೀಂದ್ರ ಕುಮಾರ್‌ ಪತ್ನಿ. ಇಬ್ಬರು ಮೊರಾದಾಬಾದ್‌ನ ರಾಮಗಂಗಾ ಪ್ರದೇಶದಲ್ಲಿ ವಾಸಿಸುತ್ತಿದ್ದರು. 2ನೇ ಆರೋಪಿಯೂ ಆಗಿರುವ ರೀನಾಳ ಪ್ರಿಯಕರ ಪರಿತೋಷ್ ಕುಮಾರ್ ಬಿಜ್ನೋರ್ ಜಿಲ್ಲೆಯ ಥಾನಾ ನಗಿನಾದ ಸರೈಪುರೈನಿ ಗ್ರಾಮದ ನಿವಾಸಿ. ರೀನಾ – ರವೀಂದ್ರ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಶವ ಇಟ್ಕೊಂಡು ಕಾರಿನಲ್ಲೇ ಸುತ್ತಾಟ..
ತಮ್ಮಿಬ್ಬರ ಸರಸಕ್ಕೆ ಅಡ್ಡಿಯಾಗುತ್ತಾನೆಂದು ತಿಳಿದ ಪತ್ನಿ ರೀನಾ ಸಿಂಧು ಪ್ರಿಯಕರ ಪಾರಿತೋಷ್‌ ಜೊತೆಗೆ ಸೇರಿಕೊಂಡು ಕೊಲೆಗೆ ಸಂಚು ರೂಪಿಸಿದ್ದಳು ಅನ್ನೋದು ತನಿಖೆಯಲ್ಲಿ ತಿಳಿದುಬಂದಿದೆ. ಇಬ್ಬರು ಸೇರಿ ರವೀಂದ್ರನಿಗೆ ಮದ್ಯ ಕುಡುಸಿ ಬಳಿಕ ಸಲಾಕೆಯಿಂದ (ಕಬ್ಬಿಣದ ಸರಳು) ಚುಚ್ಚಿ ಕೊಂಡಿದ್ದಾರೆ. ಬಳಿಕ ಕಾರಿನಲ್ಲೇ ಶವ ಇಟ್ಕೊಂಡು ಬಹಳಷ್ಟು ಸಮಯ ಸುತ್ತಾಡಿದ ನಂತರ ಬಿಜ್ನೋರ್‌ನ ಕೋಟ್‌ದ್ವಾರಕ್ಕೆ ತಂದು ರಸ್ತೆ ಬದಿ ಎಸೆದು ಹೋಗಿದ್ದಾರೆ. ಬಳಿಕ ನೋಯ್ಡಾದಿಂದಲೇ ಪರಾರಿಯಾಗಿದ್ದಾರೆ. ದುರಾಸೆ,

ಅಕ್ರಮ ಸಂಬಂಧವೇ ಕೊಲೆಗೆ ಕಾರಣ
ವಿಚಾರಣೆ ಸಮಯದಲ್ಲಿ ರೀನಾಳಿಗೆ ಆಸ್ತಿ ಮೇಲಿನ ಆಸೆ ಹಾಗೂ ಅಕ್ರಮ ಸಂಬಂಧವೇ ಕೊಲೆಗೆ ಕಾರಣ ಅನ್ನೋದು ಗೊತ್ತಾಗಿದೆ. ಕೊಲೆಯಾದ ಪತಿ ರವೀಂದ್ರಗೆ ಮೊರಾದಾಬಾದ್‌ನಲ್ಲಿ ದೊಡ್ಡ ಬಂಗಲೆ ಇತ್ತು. ಅದನ್ನ ಮಾರಾಟ ಮಾಡಲು ಮುಂದಾಗಿದ್ದ. ಆದ್ರೆ ರೀನಾ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಳು. ಆದ್ರೆ ರವೀಂದ್ರ ಹಠದಿಂದ ಹಿಂದೆ ಸರಿಯಲಿಲ್ಲ. ಇದೇ ಸಮಯಕ್ಕೆ ಫಿಸಿಯೋಥೆರಪಿಗಾಗಿ ಮನೆ ಬಳಿ ಬಂದಿದ್ದ ರೋಹಿ ಪಾರಿತೋಷ್‌ನನ್ನ ರೀನಾ ಭೇಟಿಯಾದಳು. ಇಬ್ಬರ ನಡುವೆ ಸ್ನೇಹ ಬೆಳೆದು ಪ್ರೀತಿಗೆ ತಿರುಗಿತ್ತು. ಈ ಅಕ್ರಮ ಸಂಬಂಧಕ್ಕೂ ಅಡ್ಡಿಯಾಗಿದ್ದನೆಂದು ಇಬ್ಬರೂ ಸೇರಿ ರವೀಂದ್ರನನ್ನ ಮುಗಿಸಲು ಸ್ಕೆಚ್‌ ಹಾಕಿದ್ರು.

ಕೊಂದಿದ್ದು ಯಾವಾಗ?
ಇದೇ ಮೇ 31ರಂದು ರೀನಾ, ತನ್ನ ಪತಿ ರವೀಂದ್ರನನ್ನ ಬಿಜ್ನೋರ್‌ನ ನಗೀನಾದಲ್ಲಿರುವ ಪಾರಿತೋಷ್‌ ಮನೆಗೆ ಕರೆದಿದ್ದಳು. ಬಳಿಕ ನಾಟಕವಾಡಿ ಮದ್ಯ ಕುಡಿಸಿದ್ದಳು. ನಂತರ ಸಲಾಕೆಯಿಂದ ಕುತ್ತಿಗೆ, ಎದೆ ಭಾಗಕ್ಕೆ ಚುಚ್ಚಿ ಕೊಂದಿದ್ದಳು. ಬಳಿಕ ಶವವನ್ನು SUV-500 ಕಾರಿನಲ್ಲಿರಿಸಿ ಮೊದಲು ರಾಮನಗರಕ್ಕೆ ಕೊಂಡೊಯ್ದರು. ಅಲ್ಲಿ ಜನನಿಬಿಡವಾಗಿದ್ದರಿಂದ ಕೋಟ್‌ದ್ವಾರಕ್ಕೆ ತೆಗೆದುಕೊಂಡು ಹೋದ್ರು. ದುಗಡ್ಡಾದ ಕಾಡುರಸ್ತೆಯ ಬಳಿ ಎಸೆದು ಹೋಗಿದ್ದರು. ಇದಾದ ನಂತರ ನೋಯ್ಡಾಗೆ ಎಸ್ಕೇಪ್‌ ಆಗಿದ್ದ ಕಿಲ್ಲರ್ಸ್‌ ಕೊಲೆಗೆ ಬಳಸಿದ್ದ ಕಾರನ್ನು ಅಲ್ಲೇ ಬಿಟ್ಟು ಮತ್ತೊಂದು ಸ್ಥಳಕ್ಕೆ ಪರಾರಿಯಾಗಿದ್ದರು.

ರೋಗಿಗೆ ʻಲವ್‌ ಟ್ರೀಟ್ಮೆಂಟ್‌ʼ ಕೊಟ್ಟ ರೀನಾ
56 ವರ್ಷದ ರವೀಂದ್ರ ಮೊದಲು ದೋಯಿವಾಲಾ ಪಟ್ಟಣದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದ. ಅಲ್ಲೇ ರೀನಾಳನ್ನ ಭೇಟಿಯಾಗಿದ್ದ, ನಂತರ ಇಬ್ಬರು ಪ್ರೀತಿಸಿ 2011ರಲ್ಲಿ ಮದುವೆಯಾದ್ರು. ರೀನಾ – ರವೀಂದ್ರ ಇಬ್ಬರಿಗೂ ಇದು 2ನೇ ಮದುವೆಯಾಗಿತ್ತು. ರವೀಂದ್ರ 2007ರಲ್ಲಿ ಮೊದಲ ಪತ್ನಿಯನ್ನ ತೊರೆದಿದ್ದ. ನಂತರ ದೆಹಲಿಯ ರಾಜೋಕ್ರಿಯಲ್ಲಿರುವ ತಮ್ಮ ಮನೆತನದ ಆಸ್ತಿಯನ್ನ ಮಾರಿ ಮೊರಾದಾಬಾದ್‌ನಲ್ಲಿ ಮೂರು ಕೋಟಿ ರೂ. ಮೌಲ್ಯದ ಬಂಗಲೆ ಖರೀದಿಸಿದ್ದ. ರೀನಾ ಫಿಸಿಯೋಥೆರಪಿಸ್ಟ್‌ ಆಗಿದ್ದರಿಂದ ಮನೆಯಲ್ಲೇ ಸಣ್ಣದಾಗಿ ಚಿಕಿತ್ಸಾ ಕೇಂದ್ರ ನಡೆಸುತ್ತಿದ್ದಳು. ಆಗಲೇ ಚಿಕಿತ್ಸೆ ಪಡೆಯಲು ಬಂದ ರೋಗಿ ಪಾರಿತೋಷ್‌ನನ್ನ ಭೇಟಿಯಾಗಿ ಲವ್‌ನಲ್ಲಿ ಬಿದ್ದಳು.

ರಹಸ್ಯ ಬಯಲಾಗಿದ್ದು ಹೇಗೆ?
ಇದೇ ಜೂನ್‌ 17ರಂದು ಮೃತ ರವೀಂದ್ರ ಸಹೋದರ ರಾಜೇಶ್‌ ಕುಮಾರ್‌ ಕೋಟ್‌ದ್ವಾರ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ರವೀಂದ್ರ ದೆಹಲಿ ಅಥವಾ ಹರಿಯಾಣದ ಬೊಹ್ರಾ ಕಲಾನ್‌ಗೆ ಬಂದಾಗೆಲ್ಲ ಕುಟುಂಬಸ್ಥರನ್ನ ಭೇಟಿಯಾಗ್ತಿದ್ದ. ಆದ್ರೆ 18 ಲಕ್ಷ ರೂ. ಚೆಕ್ ಬೌನ್ಸ್ ಪ್ರಕರಣದಲ್ಲಿ ಸಿಲುಕಿದ್ದರಿಂದ ರವೀಂದ್ರ ಬಂಧನ ಭೀತಿಯಿಂದ ಮೇ 9 ರಿಂದ ಕಣ್ಮರೆಯಾಗಿದ್ದ. ಸಾಲ ತೀರಿಸೋದಕ್ಕಾಗಿಯೇ ಮನೆ ಮಾರಲು ಬಯಸಿದ್ದ. ಆದ್ರೆ ರೀನಾ ಅದಕ್ಕೆ ವಿರುದ್ಧವಾಗಿದ್ದಳು. ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು.

ಇದಾದ ಬಳಿಕ ಜೂನ್‌ 1 ಮತ್ತು 2ರಂದು ರೀನಾ ಕೋಟ್‌ದ್ವಾರಕ್ಕೆ ಬಂದಿದ್ದಳು ಅದೇ ದಿನ ರವೀಂದ್ರ ಖರೀದಿಸಿದ್ದ ಎಸ್‌ಯುವಿ ಕೂಡ ಕಾಣೆಯಾಗಿತ್ತು. ಬಳಿಕ ನಗೀನಾ ಪಟ್ಟಣಕ್ಕೆ ಪ್ರಿಯಕರನನ್ನ ಕರೆಸಿ ಪತಿಯನ್ನ ಕೊಲ್ಲಿಸಿದ್ದಾಳೆ ಅನ್ನೋ ರಹಸ್ಯ ತನಿಖೆ ವೇಳೆ ತಿಳಿದುಬಂದಿದೆ. ಈಗಾಗಲೇ ಆರೋಪಿಗಳಿಬ್ಬರನ್ನ ಬಂಧಿಸಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *