Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ವಿಜಯಪುರ – ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ವಿಶೇಷ ರೈಲು ಖಾಯಂ ಆರಂಭ

Spread the love

ಮಂಗಳೂರು: ನೈರುತ್ಯ ರೈಲ್ವೆ ವಲಯವು ರೈಲು ಸಂಖ್ಯೆ 07377/78 ವಿಜಯಪುರ –ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ವಿಶೇಷ ರೈಲನ್ನು ಖಾಯಂಗೊಳಿಸಿ ಓಡಿಸುವ ಬಗ್ಗೆ ಅಧಿಕೃತವಾಗಿ ಪ್ರಕಟನೆಯನ್ನು ಹೊರಡಿಸಿದೆ.

ಇದರ ಅನ್ವಯ ವಿಜಯಪುರದಿಂದ ಸೆಪ್ಟೆಂಬರ್ 1 ಹಾಗೂ ಮಂಗಳೂರು ಸೆಂಟ್ರಲಿನಿಂದ ಸೆಪ್ಟೆಂಬರ್ 2ರಿಂದ ಈ ರೈಲು ಖಾಯಂ ರೈಲಾಗಿ ಓಡಲಿದೆ. ಈ ರೈಲನ್ನು ಖಾಯಂಗೊಳಿಸಲು ಪ್ರಯಾಣಿಕರ ಸಂಘಗಳ ನಿರಂತರ ಹೋರಾಟ,ನಾಗರಿಕರು ಹಾಗೂ ವಿವಿಧ ಸಂಘಟನೆಗಳಿಂದ ನಿರಂತರ ಬೆಂಬಲ ಮತ್ತು ಸತತ ಪ್ರಯತ್ನ , ಸಂಸದರಿಂದ ದೊರೆತ ಬೆಂಬಲ, ರಾಮೇಶ್ ಜಿಗಜಿಣಗಿ ಅವರ ವಿಶೇಷ ಪ್ರಯತ್ನವಿದೆ.ಈ ನಿರ್ಧಾರದಿಂದ ಸುಬ್ರಹ್ಮಣ್ಯ, ಧರ್ಮಸ್ಥಳ, ಬಂತ್ವಾಳ, ಪುತ್ತೂರು ಹಾಗೂ ಇತರ ನಗರಗಳಿಂದ ಹಾಸನ, ಹುಬ್ಬಳ್ಳಿ, ಗದಗ, ವಿಜಯಪುರ ಹಾಗೂ ಇನ್ನಿತರೆ ಕಡೆಗಳಿಗೆ ಹೋಗುವ ಭಕ್ತರು, ವಿದ್ಯಾರ್ಥಿಗಳು ಮತ್ತು ಇತರೇ ಪ್ರಯಾಣಿಕರಿಗೆ ಬಹಳಷ್ಟು ಪ್ರಯೋಜನವಾಗಲಿದೆ ಎಂದು ರೈಲು ಬಳಕೆದಾರರು ಸಂತಸ ವ್ಯಕ್ತಪಡಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *