ಮಂಗಳೂರು ಸಂಚಾರ ನಿಯಮ ಉಲ್ಲಂಘನೆ: ಜುಲೈ 15ರೊಳಗೆ ದಂಡ ಪಾವತಿಸದವರಿಗೆ ನ್ಯಾಯಾಲಯದ ಕ್ರಮ ಎಚ್ಚರಿಕೆ

ಮಂಗಳೂರು ಜೂನ್ 25: ಮಂಗಳೂರು ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆ ಕುರಿತು ದಂಡ ಪಾವತಿಗೆ ಈಗಾಗಲೇ ನೋಟಿಸ್ ನೀಡಲಾಗಿದ್ದು,. ಅಂತವರು ಜುಲೈ 15 ರೊಳಗೆ ದಂಡ ಪಾವತಿಸಲು ವಿಫಲರಾದರೆ ಅಂತವರ ವಿರುದ್ದ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಲಾಗುವುದು ಎಂದು ಪೊಲೀಸ್ ಆಯುಕ್ತರ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡಿರುವಂತಹ ವಾಹನಗಳ ಮೇಲೆ ಸ್ಥಳದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ತೆಗೆದಿರುವ ಭಾವಚಿತ್ರಗಳನ್ನು ಮತ್ತು ಟ್ರಾಫಿಕ್ ಕಂಟ್ರೋಲ್ & ಕಮಾಂಡ್ ಸೆಂಟರ್‌ನಲ್ಲಿ ಸಿಸಿಟಿವಿ ಯಲ್ಲಿ ಸೆರೆಯಾಗಿರುವ ವಾಹನ ಚಾಲಕ/ಸವಾರರ ಸಂಚಾರ ನಿಯಮ ಉಲ್ಲಂಘನೆಯ ಐಎಂವಿ ಪ್ರಕರಣಗಳನ್ನು ದಾಖಲು ಮಾಡಲಾಗಿರುತ್ತದೆ.
ವಾಹನ ಚಾಲಕರು/ಸವಾರರು ಸಂಚಾರ ನಿಯಮ ಉಲ್ಲಂಘನೆ ಮಾಡಿರುವ ಕುರಿತು ಅಂಚೆ ಮೂಲಕ ನೋಟಿಸುಗಳನ್ನು ನೋಂದಣಿ ಸಂಖ್ಯೆಯ ಮಾಲಕರಿಗೆ ಈಗಾಗಲೇ ಕಳುಹಿಸಲಾಗಿದ್ದು, ದಂಡವನ್ನು ಕಟ್ಟದೇ ಹಲವಾರು ಪ್ರಕರಣಗಳು ಬಾಕಿ ಇರುತ್ತದೆ.

ಸಂಚಾರ ನಿಯಮ ಉಲ್ಲಂಘನೆಯ ಕುರಿತು ದಂಡ ಪಾವತಿಸದೇ ಇರುವವರ ವಿರುದ್ದ ಕಾನೂನು ಅಡಿಯಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಿದ್ದು, ಪ್ರಥಮ ಹಂತವಾಗಿ ದಂಡ ಪಾವತಿ ಮಾಡಲು ವಾಹನ ನೋಂದಣಿ ಮಾಲಿಕರಿಗೆ ನೋಟಿಸ್ ಈಗಾಗಲೇ ಅಂಚೆ ಮೂಲಕ ನೋಟಿಸ್ ಕಳುಹಿಸಲಾಗಿದ್ದು, ದಿನಾಂಕ 15-07-2025 ರ ಒಳಗಾಗಿ ದಂಡ ಪಾವತಿಸಲು ವಿಫಲರಾದ್ದಲ್ಲಿ, ಸಂಚಾರ ನಿಯಮ ಉಲ್ಲಂಘನೆಯ ಕುರಿತು ನೋಂದಣಿ ಮಾಲಕರ ವಿರುದ್ದ ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಲಾಗುವುದು. ನಂತರ ನ್ಯಾಯಾಲಯದಿಂದ ಹೊರಡಿಸುವ ಸಮನ್ಸ್/ವಾರಂಟು ಪ್ರಕ್ರಿಯೆಗಳು ಮುಂದುವರೆಯುತ್ತದೆ.
ಆದುದ್ದರಿಂದ ನೋಟಿಸ್ ಸ್ವೀಕೃತಿಯಾಗಿರುವ ವಾಹನದ ನೋಂದಣಿ ಮಾಲಕರು ದಂಡವನ್ನು ಪಾವತಿ ಮಾಡಿ, ಮುಂದೆ ಆಗುವ ಪರಿಣಾಮಗಳಿಗೆ ಅವಕಾಶವನ್ನು ನೀಡದಂತೆ ಕೋರಲಾಗಿದೆ.
ನಿಮ್ಮ ವಾಹನವು ಮಂಗಳೂರು ನಗರದಲ್ಲಿ ಸಂಚಾರ ನಿಯಮವನ್ನು ಉಲ್ಲಂಘನೆ ಮಾಡಿದೆಯೇ ಎಂದು ಪರಿಶೀಲಿಸಲು ಮತ್ತು ದಂಡ ಪಾವತಿಸಲು ಅನುಸರಿಸ ಬೇಕಾದ ವಿಧಾನಗಳು:-
ಗಿಫ್ಟ್ ಕಾರ್ಡ್‌ಗಳು
ಕೆಳಕಂಡ ಸಂಚಾರ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ ಅಥವಾ ದೂರವಾಣಿ ಕರೆ ಮಾಡಿ ವಿಚಾರಿಸಲು, ಪರಿಶೀಲಿಸಲು ಮತ್ತು ದಂಡ ಪಾವತಿಸಲು ಅವಕಾಶವಿರುತ್ತದೆ.
Traffic East Police Station
Kadri, Mangaluru
0824-2220523
Traffic West Police Station
Pandeshwara, Mangaluru
0824-2220524
Traffic North Police Station
Baikampady, Mangaluru
0824-2220833
Traffic South Police Station
Jeppinamogeru, Mangaluru
0824-2220850
ACP Traffic Office
Pandeshwar, Mangaluru
0824-2220823