ಮಂಗಳೂರು: ವಿಷ ಪ್ರಾಶನದಿಂದ ಮೂರು ಬೀದಿ ನಾಯಿಗಳ ದಾರುಣ ಮರಣ

ಮಂಗಳೂರು: ಮೇರಿಹಿಲ್‌ನ ಹೆಲಿಪ್ಯಾಡ್ ಬಳಿ ಬೀದಿ ನಾಯಿಗಳಿಗೆ ವಿಷ ಉಣಿಸಲಾಗಿದ್ದು, ನಾಲ್ಕು ನಾಯಿಗಳ ಪೈಕಿ ಮೂರು ನಾಯಿ ಸಾವನ್ನಪ್ಪಿದೆ.
ಹೆಲಿಪ್ಯಾಡ್ ಪರಿಸರದಲ್ಲಿ ಓಡಾಡಿಕೊಂಡಿದ್ದ ನಾಯಿಗಳಿಗೆ ಎ. 6ರಂದು ಸಂಜೆ ವೇಳೆ ಯಾರೋ ಅಪರಿಚಿತರು ಆಹಾರದಲ್ಲಿ ವಿಷ ಹಾಕಿದ್ದು, ಎರಡು ನಾಯಿ ಸ್ಥಳದಲ್ಲೇ ಸತ್ತಿವೆ.
ವಿಷಯ ತಿಳಿದ ಸ್ಥಳೀಯ ಪ್ರಾಣಿ ಪ್ರಿಯರು ಉಳಿದ ಎರಡು ಶ್ವಾನವನ್ನು ಶಕ್ತಿನಗರ ಎನಿಮಲ್ ಕೇರ್ ಟ್ರಸ್ಟ್‌ಗೆ ರವಾನಿಸಿ ಚಿಕಿತ್ಸೆ ಕೊಡಿಸಿದ್ದು, ಅದರಲ್ಲಿ ಒಂದು ನಾಯಿ ಸಾವನ್ನಪ್ಪಿದೆ. ಸದ್ಯ ಉಳಿದಿರುವ ಒಂದು ನಾಯಿ ಕೂಡಾ ಚಿಂತಾಜನಕ ಸ್ಥಿತಿಯಲ್ಲಿದೆ. ಈ ಬಗ್ಗೆ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಯಿಗಳಿಗೆ ವಿಷ ಹಾಕಿದ ಆರೋಪಿಗಳನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪ್ರಾಣಿ ಪ್ರಿಯರು ಆಗ್ರಹಿಸಿದ್ದಾರೆ.