ಮಂಗಳೂರು ತ್ಯಾಜ್ಯ ಕಾರ್ಮಿಕರ ಬೇಡಿಕೆ ನಿರ್ಲಕ್ಷ್ಯ: ಪಾಲಿಕೆಯ ಜಾಣ ಕುರುಡುತನಕ್ಕೆ ಅಸಂಘಟಿತ ಕಾರ್ಮಿಕರ ಒಕ್ಕೂಟ ಉಗ್ರಹೋರಾಟದ ಎಚ್ಚರಿಕೆ

ಮಂಗಳೂರು :ದಿನಾಂಕ 17-07-2025 ರಂದು ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕ ಒಕ್ಕೂಟದ ಸಭೆ ನಡೆದಿದ್ದು, ಈ ಸಭೆಯಲ್ಲಿ ಮಹಾನಗರ ಪಾಲಿಕೆಯ ತ್ಯಾಜ್ಯ ವಿಲೇವಾರಿ ಕಾರ್ಯಕರ್ತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆ ನಡೆದಿದೆ. ತ್ಯಾಜ್ಯ ವಿಲೇವಾರಿ ಹೊರ ಗುತ್ತಿಗೆ ನಿರ್ವಹಿಸುವಂತಹ ‘ಅಂಟೋನಿ ವೇಸ್ಟ್ ಮ್ಯಾನೇಜ್ಮೆಂಟ್’ ಸಂಸ್ಥೆಯಲ್ಲಿ ಕಳೆದ ಹತ್ತು ವರ್ಷಗಳಿಂದ ಕಾರ್ಯಕರ್ತ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದು, ಕಾರ್ಮಿಕರಿಗೆ ಯಾವುದೇ ಪೂರ್ವ ಮಾಹಿತಿ ಇಲ್ಲದೇ ಹಾಗೂ ಕಾರ್ಮಿಕರ ಹಕ್ಕು ರಕ್ಷಣೆ ಮಾಡುವಂತಹ “ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕ ಒಕ್ಕೂಟಕ್ಕೂ ಯಾವುದೇ ಸರಿಯಾದ ಮಾಹಿತಿಯನ್ನು ನೀಡದೆ ತರಾತುರಿಯಲ್ಲಿ”ಸಮೃದ್ಧಿ ಫೆಡಲಿಟಿ ಸರ್ವಿಸಸ್” ಸಂಸ್ಥೆಗೆ ವಿಲೇವಾರಿ ಹೊರಗುತ್ತಿಗೆ ನೀಡಿದ್ದು, ಕಾರ್ಯಕರ್ತರ ಕಾರ್ಯಕರ್ತರ ಕಾರ್ಮಿಕ ಗ್ರಾಚ್ಯುಟಿ ಮೊತ್ತವನ್ನು ಮತ್ತು ಬೋನಸ್, ಸರ್ವಿಸ್ ಅನ್ನು ಅಂಟೋನಿ ವೇಸ್ಟ್ ಮ್ಯಾನೇಜ್ಮೆಂಟ್ ನೀಡದೆ ಗ್ರಾಚ್ಯುಟಿ ಮೊತ್ತವನ್ನು ಮಹಾನಗರ ಪಾಲಿಕೆಯಿಂದ ಪಡೆಯಲು ಸೂಚಿಸಿದ್ದು, ಮಹಾನಗರ ಪಾಲಿಕೆ ಗ್ರಾಚ್ಯುಟಿ ಮೊತ್ತ ತಮಗೆ ಸಂಭಂದ ಪಟ್ಟದಲ್ಲ ಎಂದು ಮೌನವಹಿಸಿದೆ.


ಅದರೊಂದಿಗೆ ಮೂರು ತಿಂಗಳಿಗೆ ತಾತ್ಕಾಲಿಕ ಟೆಂಡರ್ ಆಗಿ “ಸಮೃದ್ಧಿ ಫೆಡಲಿಟಿ ಸರ್ವಿಸಸ್” ಸಂಸ್ಥೆಗೆ ಹೊರಗುತ್ತಿಗೆ ನೀಡಿದ್ದು ಒಂದು ವರ್ಷದವರೆಗೂ ಟೆಂಡರ್ ಮುಂದುವರಿಸಿದ್ದಾರೆ. ಈ ಸಂಸ್ಥೆಯಿಂದ ನೇಮಕಾತಿ ಪತ್ರ ಗುರುತಿನ ಚೀಟಿ ಮತ್ತು ಮಾಸಿಕ ವೇತನ ವರದಿಯಾಗಲಿ ಇಲ್ಲಿಯವರೆಗೂ ದೊರೆತಿಲ್ಲ. ಹಾಗೆಯೇ ಘನ ತ್ಯಾಜ್ಯ ವಿಲೇವಾರಿ ವಾಹನದ ಟೈಯರ್ ಪಂಚರ್ ಅಥವಾ ಯಾವುದೇ ಬೇರೆ ಸಮಸ್ಯೆಯಾದಾಗ ಬಿಲ್ ಕ್ಲೈಮ್ ಕೂಡ ಮಹಾನಗರ ಪಾಲಿಕೆಯಿಂದ ಆಗುತ್ತಿಲ್ಲ. ಚಾಲಕರು ಇದರ ಖರ್ಚು ಭರಿಸುವಲ್ಲೂ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ವೇತನ ಪಾವತಿಯ ಸಮಯದಲ್ಲೂ ಕೂಡ ವ್ಯತ್ಯಾಸ ವೇತನಗಳನ್ನು ನೀಡುತ್ತಿದ್ದಾರೆ. ಈ ವಿಚಾರಗಳು ಹಲವಾರು ಬಾರಿ ಮಂಗಳೂರು ಮಹಾನಗರ ಪಾಲಿಕೆಯ ಗಮನಕ್ಕೆ ತಂದಿದ್ದು, ಮಂಗಳೂರು ಮಹಾನಗರ ಪಾಲಿಕೆಯಿಂದ ಯಾವುದೇ ಸರಿಯಾದ ಪ್ರತಿಕ್ರಿಯೆ ನೀಡದೆ ದಿವ್ಯ ಮೌನ ಅಥವಾ ಜಾಣ ಕುರುಡಲ್ಲಿದೆ.

ಘನ ತ್ಯಾಜ್ಯ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಸ ಸಾಗಿಸುವ ವಾಹನ ಚಾಲಕರು, ಸ್ಯಾನಿಟರಿ ಸೂಪರ್ವೈಸರ್, ಲೋಡರ್ಸ್ ಕ್ಲೀನರ್ಸ್, ಹೆಲ್ಪರ್ಸ್, ಯುಜಿಡಿ ಕಾರ್ಮಿಕರು ಕಾರ್ಯನಿರ್ವಹಿಸಿ 10 ವರ್ಷಕ್ಕಿಂತ ಹೆಚ್ಚಾಗಿದ್ದರು ಕೆಲಸದಲ್ಲಿ ಭದ್ರತೆ ಇಲ್ಲದಂತಾಗಿದೆ. ಹಾಗಾಗಿ ಕಾರ್ಮಿಕರ ಭದ್ರತೆಗಾಗಿ ನೇರ ನೇಮಕಾತಿ ಮತ್ತು ನೇರ ಪಾವತಿ ಖಾಯಂಗೊಳಿಸಬೇಕಾಗಿದೆ. ಇಲ್ಲದಿದ್ದಲ್ಲಿ ಬೃಹತ್ ಹೋರಾಟ ನಡೆಸುವುದಾಗಿ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕ ಒಕ್ಕೂಟ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕ ಒಕ್ಕೂಟದ ಸಂಸ್ಥಾಪಕರಾದ ಶ್ರೀ ರಾಜೇಶ್ ಪವಿತ್ರನ್ ರವರ ಉಪಸ್ಥಿತಿಯಲ್ಲಿ,ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಸಂದೀಪ್ ಶೆಟ್ಟಿ ಅಡ್ಕರವರ ನೇತೃತ್ವದಲ್ಲಿ ಇಸ್ಮಾಯಿಲ್,ಅಕ್ಟರ್ ಅಲ್ಲಿ ಹುಸೈನ್, ಸಾದಿಕ್,ನಝೀರ್,ರಮೇಶ್,
ಬಾಪು ಗೌಡ,ಸಂತೋಷ್ ಮತ್ತು ಸರ್ವ ಸದಸ್ಯರ ನೇತೃತ್ವದಲ್ಲಿ ಸಭೆ ನಡೆಯಿತು.
