Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮಂಗಳೂರು: ಕೊಂಕಣಿ ಸಂಗೀತ ಕ್ಷೇತ್ರದ ದಿಗ್ಗಜ ಎರಿಕ್ ಒಝಾರಿಯೋ ನಿಧನ

Spread the love

ಮಂಗಳೂರು : ಕೊಂಕಣಿ ಸಂಗೀತ ಕ್ಷೇತ್ರದ ದಿಗ್ಗಜ ಎರಿಕ್ ಒಝಾರಿಯೋ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು.

ಎರಿಕ್ ಒಜಾರಿಯೊ ಎಂದು ಜನಪ್ರಿಯರಾಗಿದ್ದ ಇವರು ಮೇ 18, 1949 ರಂದು ಮಂಗಳೂರಿನ ಜೆಪ್ಪುವಿನಲ್ಲಿ ಜನಿಸಿದರು. ಇವರು ಪ್ರಸಿದ್ಧ ಕೊಂಕಣಿ ಸಂಗೀತ ಸಂಯೋಜಕ, ಸಾಂಸ್ಕೃತಿಕ ಕಾರ್ಯಕರ್ತ ಮತ್ತು ಕೊಂಕಣಿ ಸಮುದಾಯದ ಬಗ್ಗೆ ಅಪಾರ ಕಾಳಜಿಯಿರುವ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದರು. ಹಲವಾರು ದಶಕಗಳಿಂದ, ಅವರು ತಮ್ಮ ಸೃಜನಶೀಲ ಮತ್ತು ಸಾಂಸ್ಥಿಕ ಪ್ರಯತ್ನಗಳ ಮೂಲಕ ಕೊಂಕಣಿ ಭಾಷೆಯನ್ನು ಸಂರಕ್ಷಿಸುವಲ್ಲಿ ಮತ್ತು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಅನಾರೋಗ್ಯದ ಹಿನ್ನೆಲೆಯಲ್ಲಿ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದರೆ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಕೊನೆಯುಸಿರೆಳೆದರು. ಸಾಂಸ್ಕೃತಿಕ ಸಂಘಟನೆ ಮಾಂಡ್ ಸೋಬಾಣ್ ಸಂಸ್ಥೆಯನ್ನು ಸ್ಥಾಪಿಸಿ ಕೊಂಕಣಿ ಪ್ರದರ್ಶನ ಕಲೆಗಳಿಗೆ ಉತ್ತೇಜನ ನೀಡಿದರು. ಕೊಂಕಣಿ ಸಂಸ್ಕೃತಿಯನ್ನು ಕಲಿಸುವ ಮತ್ತು ಉಳಿಸುವ ನಿಟ್ಟಿನಲ್ಲಿ ಶಕ್ತಿನಗರದಲ್ಲಿ ಕಲಾಂಗಣ ಪಾಂರಂಪರಿಕ ಕೇಂದ್ರವನ್ನು ನಿರ್ಮಾಣ ಮಾಡಿದರು. ರಾಜ್ಯದೆಲ್ಲೆಡೆ ಕೊಂಕಣಿಯನ್ನು ಶಾಲೆಗಳಲ್ಲಿ ಐಚ್ಛಿಕ ಭಾಷೆಯಾಗಿ ಅಳವಡಿಕೆಯಾಗುವ ನಿಟ್ಟಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.


Spread the love
Share:

administrator

Leave a Reply

Your email address will not be published. Required fields are marked *