Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮಂಗಳೂರು: ಹೆದ್ದಾರಿಯಲ್ಲಿ ಫ್ಲೆಕ್ಸ್‌ ಹಾಕಿದರೆ ಕ್ರಮ; ಪ್ರಾಧಿಕಾರದ ಕಟ್ಟುನಿಟ್ಟಿನ ಎಚ್ಚರಿಕೆ

Spread the love

ಮಂಗಳೂರು: ಕರಾವಳಿಯ ಎರಡೂ ಜಿಲ್ಲೆಗಳಲ್ಲಿ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ಮಾತ್ರವಲ್ಲ, ಡಿವೈಡರ್‌, ಫ್ಲೈ ಓವರ್‌ಗಳನ್ನೂ ಬಿಡದೆ ಫ್ಲೆಕ್ಸ್‌ಗಳನ್ನು ಹಾಕಲಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಹೆದ್ದಾರಿ ಪ್ರಾಧಿಕಾರ, ಇದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.

ಮಂಗಳೂರು ನಗರದಲ್ಲಿ ಮಹಾನಗರ ಪಾಲಿಕೆ ನಡೆಸಿದ ಕಾರ್ಯಾಚರಣೆ, ದಂಡಾಸ್ತ್ರಗಳಿಂದಾಗಿ ಫ್ಲೆಕ್ಸ್‌ ಗಳು ಸ್ವಲ್ಪ ನಿಯಂತ್ರಣಕ್ಕೆ ಬಂದಿವೆ. ಆದರೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಈ ಪ್ರವೃತ್ತಿ ಮುಂದುವರಿದಿದೆ. ಈ ಬಗ್ಗೆ ‘ಉದಯವಾಣಿ ಸುದಿನ’ ಗಮನ ಸೆಳೆದಿತ್ತು. ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಿಗರ ಗಮನ ಬೇರೆಡೆ ಸೆಳೆಯುವ ಫ್ಲೆಕ್ಸ್‌ಗಳಿಂದ ಆಗಬಹುದಾದ ಅಪಾಯಗಳ ಬಗ್ಗೆ ಎಚ್ಚರಿಸಿತ್ತು.

ಈ ಬಗ್ಗೆ ಸುದಿನ ಜತೆ ಮಾತನಾಡಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರಾದ ಅಬ್ದುಲ್‌ ಜಾವೆದ್‌ ಅಝಿ¾ ಅವರು, ಹೆದ್ದಾರಿಯಲ್ಲಿ, ಫ್ಲೈ ಓವರ್‌, ಜಂಕ್ಷನ್‌ಗಳಲ್ಲಿ ಅಳವಡಿಸಲಾಗಿರುವ ಫ್ಲೆಕ್ಸ್‌ಗಳನ್ನು ತೆರವುಗೊಳಿಸಲು ಪೊಲೀಸರಿಗೆ ದೂರು ನೀಡಲಾಗಿದೆ. ಪ್ರಸ್ತುತ ಹೆದ್ದಾರಿಗೆ ಸಂಬಂಧಿಸಿದಂತೆ ಕೆಲವು ಕೆಲಸ ಕಾರ್ಯಗಳ ನಡುವೆಯೂ ದೂರು ನೀಡಲಾಗಿದ್ದು, ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು. ಸಾರ್ವಜನಿಕರು ತಮ್ಮ ಪ್ರಚಾರಕ್ಕಾಗಿ ಹೆದ್ದಾರಿಯ ಜಾಗವನ್ನು ಬಳಸಿಕೊಳ್ಳಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು.

ಮಾರ್ಗಸೂಚಿ ಹೇಳುವುದೇನು?
– ಐಆರ್‌ಸಿ:46-1972ರ ಪ್ರಕಾರ ಯಾವುದೇ ರಸ್ತೆ ಜಂಕ್ಷನ್‌ಗಳಲ್ಲಿ, ನಗರದ ವ್ಯಾಪ್ತಿಯಲ್ಲಿ ಹಾದು ಹೋಗುವ ಹೆದ್ದಾರಿಗಳಲ್ಲಿ, ಸೇತುವೆ ಅಥವಾ ಕ್ರಾಸಿಂಗ್‌ನಿಂದ 100 ಮೀ. ಅಂತರದೊಳಗೆ ಫ್ಲೆಕ್ಸ್‌, ಬ್ಯಾನರ್‌ ಅಳವಡಿಸುವಂತಿಲ್ಲ.
– ಹೆದ್ದಾರಿಗೆ ಸಂಬಂಧಿಸಿದ ಅಗತ್ಯ ಸೈನ್‌ ಬೋರ್ಡ್‌ಗಳ ಮಧ್ಯದಲ್ಲಿ ಫ್ಲೆಕ್ಸ್‌ ಅಳವಡಿಸಲು ಅವಕಾಶವಿಲ್ಲ.
– ಪಾದಚಾರಿಗಳಿಗೆ ತೊಂದರೆಯಾಗುವಂತೆ ಯಾವುದೇ ಫ್ಲೆಕ್ಸ್‌ ಅಳವಡಿಸುವಂತಿಲ್ಲ.
– ರಸ್ತೆ ಡಿವೈಡರ್‌, ಅಂಚಿನಲ್ಲಿ ಫ್ಲೆಕ್ಸ್‌, ಕಟೌಟ್‌, ಬ್ಯಾನರ್‌ಗಳನ್ನು ಅಳವಡಿಸಿದರೆ ಚಾಲಕರ ಗಮನ ಅತ್ತ ಸೆಳೆಯುವ ಸಾಧ್ಯತೆ ಹೆಚ್ಚು.


Spread the love
Share:

administrator

Leave a Reply

Your email address will not be published. Required fields are marked *