ದಿಲ್ಲಿ ಕೋರ್ಟ್‌ನಲ್ಲಿ ತೀರ್ಪಿಗೆ ಕೋಪಗೊಂಡ ವ್ಯಕ್ತಿಯಿಂದ ಮಹಿಳಾ ನ್ಯಾಯಾಧೀಶೆಗೆ ಜೀವ ಬೆದರಿಕೆ!

ನವದೆಹಲಿ: ವ್ಯಕ್ತಿಯೊಬ್ಬ ತನ್ನ ವಿರುದ್ಧ ಕೋರ್ಟ್‌ನಲ್ಲಿ ತೀರ್ಪು ನೀಡಿದ ಕಾರಣ ಮಹಿಳಾ ನ್ಯಾಯಾಧೀಶರೊಬ್ಬರಿಗೆ ಬೆದರಿಕೆ ಹಾಕಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
ಚೆಕ್ ಬೌನ್ಸ್ ಪ್ರಕರಣ ಸಂಬಂಧ ದೆಹಲಿ ಕೋರ್ಟ್‌ನ ನ್ಯಾ.ಶಿವಾಂಗಿ ಮಂಗಳಾ ವ್ಯಕ್ತಿಯೊಬ್ಬರಿಗೆ ಶಿಕ್ಷೆ ಪ್ರಕಟಿಸಿದ್ದರು.
ಈ ತೀರ್ಪಿನಿಂದ ಕೋಪಗೊಂಡ ಆರೋಪಿ ಕೋರ್ಟ್‌ನಲ್ಲಿ ಗಲಾಟೆ ಮಾಡಿದ್ದಲ್ಲದೇ ನ್ಯಾಯಾಧೀಶರಿಗೆ “ನೀನ್ಯಾವ ದೊಡ್ಡ ವ್ಯಕ್ತಿ! ಹೊರಗೆ ಬಾ, ಅದು ಹೇಗೆ ಜೀವಂತವಾಗಿರುವೆ ನೋಡುತ್ತೇನೆ’ ಎಂದು ಬೆದರಿಕೆ ಹಾಕಿದ್ದಾನೆ.