ಎಸ್ ಬಿಐ ನಲ್ಲಿ 8 ವರ್ಷಗಳಲ್ಲಿ ಒಟ್ಟು 8 ರೂ ಸಂಬಳ ಪಡೆದ ವ್ಯಕ್ತಿ

ಒಂದುವರ್ಷಕ್ಕೆ ಕೇವಲ 1 ರೂ. ಸಂಬಳ ಪಡೆದ ಈತ ಒಟ್ಟು 8 ವರ್ಷಗಳಲ್ಲಿ 8 ರೂ. ಸಂಬಳ ಪಡೆಯುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದಾನೆ. ಅಲ್ಲದೆ, ತಾನು ಪಡೆದ 1 ರೂ. SBI ಚೆಕ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ವೈರಲ್ ಆಗುತ್ತಿದೆ.

ಉದ್ಯಮಿ ಮತ್ತು ಮೈಂಡ್‌ಟ್ರೀ ಸಹ-ಸಂಸ್ಥಾಪಕ ಸುಬ್ರೋಟೊ ಬಾಗ್ಚಿ ಅವರು ಎಸ್‌ಬಿಐನಿಂದ ಪಡೆದ ಕೊನೆಯ ಸಂಬಳದ ಚೆಕ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಒಡಿಸ್ಸಾ ಸರ್ಕಾರದೊಂದಿಗೆ ಸಂಸ್ಥೆ ಸಾಮರ್ಥ್ಯ ವೃದ್ಧಿಯಲ್ಲಿ ಮುಖ್ಯ ಕೆಲಸಗಾರರಾಗಿ ಕಾರ್ಯ ನಿರ್ವಹಿಸುತ್ತಿರುವಾಗ ಅವರು ವರ್ಷಕ್ಕೆ 1 ರೂ. ಸಂಬಳವನ್ನು ಮಾತ್ರ ಪಡಯುತ್ತಿದ್ದರು. ಒಟ್ಟು 8 ವರ್ಷಗಳಲ್ಲಿ 8 ಚೆಕ್ಗಳನ್ನು ಪಡೆದಿದ್ದಾರೆ. ಇದೀಗ ಈ ಕೊನೆಯ ಚೆಕ್ ವಿಶೇಷವಾಗಿದೆ ಎಂದು ಹೇಳಿದ ಬಾಗ್ಚಿ, ನಿಜವಾದ ಸಂಪತ್ತು ಹಣವಲ್ಲ. ಇತರರಿಗೆ ನೀಡುವ ಸೇವೆ ಮತ್ತು ದೇಶಕ್ಕೆ ನೀಡುವ ಕೊಡುಗೆ ಎಂದು ಹೇಳಿದ್ದಾರೆ.

ಇನ್ನು ಈ ಚೆಕ್ ಅನ್ನು ಎಕ್ಸ್ ವೇದಿಕೆಯಲ್ಲಿ ಹಂಚಿಕೊಂಡ ಬಾಗ್ಚಿ, ‘ಈ ಒಂದು ಜೀವನದಲ್ಲಿ ನಾನು ಎಂದಿಗೂ ಬಿಟ್ಟುಕೊಡದ ದೊಡ್ಡ ಸಂಪತ್ತು ಯಾವುದು? ಸರಿ, ನಾನು ಸರ್ಕಾರದೊಂದಿಗೆ ಮಾಡಿದ ಪ್ರತಿ ವರ್ಷ ಕೆಲಸಕ್ಕೆ, ಸಂಭಾವನೆ ಪಡೆದಿದ್ದೇನೆ. ನಾನು ಅಲ್ಲಿ ಕಳೆದ 8 ವರ್ಷಗಳ ಕಾಲ, ನನಗೆ 8 ಚೆಕ್‌ಗಳು ಸಿಕ್ಕವು ಮತ್ತು ಇದು ನನ್ನ ಕೊನೆಯ ಸಂಬಳದ ಚೆಕ್ ಆಗಿತ್ತು’ ಎಂದು ಹೇಳಿದರು.
ಈ ಪೋಸ್ಟ್ ವೈರಲ್ ಆಗಿದ್ದು, ಹಲವರು ಇದನ್ನು ನಿಜವಾದ ನಾಯಕತ್ವದ ಅಪರೂಪದ ಉದಾಹರಣೆ ಎಂದು ಕರೆದಿದ್ದಾರೆ. ಒಬ್ಬ ಬಳಕೆದಾರರು, ‘ಒಡಿಶಾಗೆ ನಿಮ್ಮ ಕೊಡುಗೆ ಅದ್ಭುತವಾಗಿದೆ. ಕಾರ್ಪೊರೇಟ್ ಜಗತ್ತಿನಲ್ಲಿ ನೀವು 8 ವರ್ಷಗಳಲ್ಲಿ 8,000 ಕೋಟಿ ರೂ. ಗಳಿಸಬಹುದಿತ್ತು. ಸೆಲ್ಯೂಟ್!!’ ಎಂದು ಕಾಮೆಂಟ್ ಮಾಡಿದ್ದಾರೆ
