Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಅತ್ಯಾಚಾರಕ್ಕೆ ಯತ್ನಿಸಿದ ಕಾಮೋದ್ರೇಕಿಯ ಹತ್ಯೆ; ತನ್ನನ್ನು ರಕ್ಷಿಸಿಕೊಳ್ಳಲು ಕೊಡಲಿಯಿಂದ (ಫರ್ಸಾ) ಪೆಟ್ಟು ನೀಡಿದ್ದ 18ರ ಯುವತಿ ಬಂಧನ!

Spread the love

ಲಕ್ನೋ: ಅತ್ಯಾಚಾರಕ್ಕೆ ಯತ್ನಿಸಿದ ವ್ಯಕ್ತಿಯಯನ್ನು ಹತ್ಯೆ ಮಾಡಿದ 18 ವರ್ಷದ ಯುವತಿಯೊಬ್ಬಳು ಹತ್ಯೆ ಮಾಡಿರುವುದು ಉತ್ತರ ಪ್ರದೇಶದ ಬಂದಾ ಜಿಲ್ಲೆಯ ಮುರ್ವಾಲ್ ಗ್ರಾಮದಲ್ಲಿ ನಡೆದಿದೆ. ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಸುಖರಾಜ್ ಪ್ರಜಾಪತಿ (50) ಎಂಬಾತ ಯುವತಿಯ ಅತ್ಯಾಚಾರಕ್ಕೆ ಯತ್ನಿಸಿದ್ದ. ಆತನಿಂದ ರಕ್ಷಣೆ ಪಡೆಯಲು ಹರಿತವಾದ ಆಯುಧದಿಂದ ಯುವತಿ ದಾಳಿ ಮಾಡಿದ್ದಳು. ಆತನ ತಲೆಗೆ ಗಂಭೀರವಾಗಿ ಗಾಯವಾಗಿ, ಸ್ಥಳದಲ್ಲೇ ಸಾವಿಗೀಡಾಗಿದ್ದ. ಆತನ ಶವವನ್ನು ವಶಕ್ಕೆ ಪಡೆಯಲಾಗಿದೆ ಎಂದು ಸ್ಟೇಷನ್ ಹೌಸ್ ಆಫೀಸರ್ (ಎಸ್‌ಹೆಚ್‌ಒ) ರಾಜೇಂದ್ರ ಸಿಂಗ್ ರಾಜವತ್ ತಿಳಿಸಿದ್ದಾರೆ.

ಸುಖರಾಜ್ ಪ್ರಜಾಪತಿ ಕುಟುಂಬದ ಸದಸ್ಯರು ನೀಡಿದ ದೂರಿನ ಆಧಾರದ ಮೇಲೆ, ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಿಕೊಂಡು ಯುವತಿಯನ್ನು ಬಂಧಿಸಲಾಗಿದೆ. ಹಲ್ಲೆಗೆ ಬಳಸಿದ ಆಯುಧವನ್ನು ವಶಕ್ಕೆ ಪಡೆಯಲಾಗಿದೆ.

ವಿಚಾರಣೆಯ ಸಮಯದಲ್ಲಿ, ಆ ವ್ಯಕ್ತಿ ತನ್ನ ಮನೆಗೆ ನುಗ್ಗಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ್ದ. ತನ್ನನ್ನು ತಾನು ರಕ್ಷಿಸಿಕೊಳ್ಳುವ ಪ್ರಯತ್ನದಲ್ಲಿ, ಮನೆಯಲ್ಲಿ ಇರಿಸಲಾಗಿದ್ದ ‘ಫರ್ಸಾ’ದಿಂದ ಆತನಿಗೆ ಹೊಡೆದೆ. ಇದರಿಂದಾಗಿ ಆತ ಸಾವನ್ನಪ್ಪಿದ್ದಾನೆ ಎಂದು ಮಹಿಳೆ ಹೇಳಿದ್ದಾಳೆ.


Spread the love
Share:

administrator

Leave a Reply

Your email address will not be published. Required fields are marked *