ಅಂಗಡಿ ಮುಂದೆ ಕುಳಿತಲ್ಲೇ ಹೃದಯಾಘಾತದಿಂದ ವ್ಯಕ್ತಿ ಸಾವು!
ಹಾಸನ:ಮನೆ ಬಳಕೆ ಸಾಮಾಗ್ರಿ ಖರೀದಿಸಲು ಬಂದಿದ್ದ ವ್ಯಕ್ತಿಯೊಬ್ಬರು ಅಂಗಡಿ ಮುಂದೆ ಕೂತಲ್ಲೇ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಬೇಲೂರು ತಾಲೂಕಿನ ಹಗರೆಯಲ್ಲಿ ಶುಕ್ರವಾರ ನಡೆದಿದೆ

ಅಡವಿಬಂಟೇನಹಳ್ಳಿ ಗ್ರಾಮದ ನಿರ್ವಾಣಿಯಣ್ಣ (59) ಮೃತಪಟ್ಟ ವ್ಯಕ್ತಿ. ಮನೆಗೆ ಅಡುಗೆ ಸಾಮಾನುಗಳನ್ನು ತೆಗೆದುಕೊಂಡು ಹೋಗಲು ಊರಿನಿಂದ ಬಂದಿದ್ದ ಅವರು ನ್ಯಾಯಬೆಲೆ ಅಂಗಡಿ ಸಮೀಪದ ಒಂದು ಅಂಗಡಿ ಮುಂದೆ ಕೂತಿದ್ದರು.
ಮಧ್ಯಾಹ್ನ 1 ಗಂಟೆ ಸುಮಾರಿಗೆ ಇದ್ದಕ್ಕಿದಂತೆ ಕೂತಲ್ಲೆ ಪಕ್ಕಕ್ಕೆ ವಾಲಿದ್ದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
