Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ವಿಮಾನ ನಿಲ್ದಾಣದಲ್ಲಿ ಎಂಜಿನ್ ಗೆ ಸಿಲುಕಿ ವ್ಯಕ್ತಿ ಸಾವು

Spread the love

ರೋಮ್:ಇಟಲಿಯ ಮಿಲನ್‌ನ ಬರ್ಗಾಮೊ ವಿಮಾನ ನಿಲ್ದಾಣ ಎಂದೂ ಕರೆಯಲ್ಪಡುವ ಓರಿಯೊ ಅಲ್ ಸೆರಿಯೊ ವಿಮಾನ ನಿಲ್ದಾಣದಲ್ಲಿ ಇಂದು ಬೆಳಗ್ಗೆ ಭಾರೀ ಅವಘಡವೊಂದು ಸಂಭವಿಸಿದೆ. ವ್ಯಕ್ತಿಯೊಬ್ಬರು ವಿಮಾನದ ಎಂಜಿನ್‌ಗೆ ಸಿಲುಕಿ ಸಾವನ್ನಪ್ಪಿದ ಘಟನೆ ನಡೆದಿರುವುದಾಗಿ ಸ್ಥಳೀಯ ಮಾಧ್ಯಮ ವರದಿ ಮಾಡಿವೆ.
ವರದಿಗಳ ಪ್ರಕಾರ, ಈ ವ್ಯಕ್ತಿ ಪ್ರಯಾಣಿಕನಾಗಲೀ ಅಥವಾ ಸಿಬ್ಬಂದಿಯಾಗಲೀ ಅಲ್ಲ ಅಲ್ಲ ಎನ್ನಲಾಗಿದ್ದು, ಈ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ. ವಿಮಾನವು ಟೇಕ್ ಆಫ್ ಮಾಡಲು ಸಿದ್ಧವಾಗಿತ್ತು. ಇದೇ ವೇಳೆ ವ್ಯಕ್ತಿ ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿ ಉದ್ದೇಶಪೂರ್ವಕವಾಗಿಯೇ ರನ್‌ವೇ ಕಡೆ ಬಂದಿದ್ದಾನೆ. ಈ ವೇಳೆ ಎಂಜಿನ್ ಆತನನ್ನು ತನ್ನ ಕಡೆಗೆ ಎಳೆದುಕೊಂಡಿದೆ ಎಂದು ಹೇಳಲಾಗುತ್ತಿದೆ.

ಅವಘಡದ ಬಳಿಕ ವಿಮಾನ ನಿಲ್ದಾಣವನ್ನು ಸುಮಾರು ಎರಡು ಗಂಟೆಗಳ ಕಾಲ ಸಂಪೂರ್ಣವಾಗಿ ಮುಚ್ಚಲಾಯಿತು. ಈ ಸಮಯದಲ್ಲಿ, ಒಟ್ಟು 9 ವಿಮಾನಗಳನ್ನು ಬೇರೆಡೆಗೆ ತಿರುಗಿಸಬೇಕಾಯಿತು. ವಿಮಾನ ನಿಲ್ದಾಣದಿಂದ ಹೊರಡುವ 8 ವಿಮಾನಗಳನ್ನು ರದ್ದುಗೊಳಿಸಲಾಯಿತು. ಇನ್ನು ಇಳಿಯಬೇಕಿದ್ದ ವಿಮಾನಗಳನ್ನು ಬೊಲೊಗ್ನಾ, ವೆರೋನಾ ಮತ್ತು ಮಿಲನ್ ಮಾಲ್ಪೆನ್ಸಾ ವಿಮಾನ ನಿಲ್ದಾಣಗಳು ಸೇರಿದಂತೆ ಪ್ರದೇಶದ ಇತರ ವಿಮಾನ ನಿಲ್ದಾಣಗಳ ಕಡೆ ತಿರುಗಿಸಲಾಯಿತು.
ಈ ವಿಮಾನವು ಕಡಿಮೆ ವೆಚ್ಚದ ವಿಮಾನಯಾನ ಸಂಸ್ಥೆ ವೊಲೊಟಿಯಾದ ಏರ್‌ಬಸ್ A319 ಆಗಿತ್ತು. ವಿಮಾನವು ಬರ್ಗಾಮೊದಿಂದ ಉತ್ತರ ಸ್ಪೇನ್‌ನ ಆಸ್ಟೂರಿಯಸ್‌ಗೆ ಹಾರುತ್ತಿತ್ತು. ವಿಮಾನವು ಬೋರ್ಡಿಂಗ್ ಪೂರ್ಣಗೊಳಿಸಿ ಟರ್ಮಿನಲ್‌ನಿಂದ ಹೊರಟ ಸ್ವಲ್ಪ ಸಮಯದ ನಂತರ ಈ ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ.

ಘಟನೆಯ ಬಳಿಕ ವಿಮಾನ ನಿಲ್ದಾಣದ ನಿರ್ವಾಹಕ SACBO, ಟ್ಯಾಕ್ಸಿವೇಯಲ್ಲಿ ಘಟನೆ ನಡೆದಿರುವ ಬಗ್ಗೆ ದೃಢಪಡಿಸಿದರು ಮತ್ತು ಅವಘಡದ ಕಾರಣವನ್ನು ಪ್ರಸ್ತುತ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದರು.


Spread the love
Share:

administrator

Leave a Reply

Your email address will not be published. Required fields are marked *