ತೆಂಗಿನಕಾಯಿ ನೀರು ಕುಡಿದು ಪ್ರಾಣ ಕಳೆದುಕೊಂಡ ವ್ಯಕ್ತಿ

ಡೆನ್ಮಾರ್ಕ್: 2021ರ ವರದಿಯ ಪ್ರಕಾರ, ಡೆನ್ಮಾರ್ಕ್ನ 69 ವರ್ಷದ ವ್ಯಕ್ತಿ, ತನ್ನ ಮನೆಯಲ್ಲಿದ್ದ ತೆಂಗಿನಕಾಯಿಯನ್ನು ಒಡೆದು ನೀರನ್ನು ಕುಡಿಯಲು ಮುಂದಾದನು. ಆದರೆ ಅದು ಕೊಳೆತ ವಾಸನೆಯಿದ್ದರೂ ಆ ನೀರನ್ನು ಸೇವಿಸಿದ್ದ.
ಡೆನ್ಮಾರ್ಕ್ನ (Denmark) ವ್ಯಕ್ತಿಯೊಬ್ಬ ತೆಂಗಿನ ನೀರನ್ನು (Coconut Water) ಸೇವಿಸಿದ ನಂತರ ಸಾವನ್ನಪ್ಪಿದ್ದಾನೆ. ತೆಂಗಿನ ನೀರು ಕೊಳೆತಿತ್ತು ಮತ್ತು ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳು ಅದರೊಳಗೆ ಬೆಳವಣಿಗೆ ಆಗಿತ್ತು ಎಂದು ವರದಿಗಳಿಂದ ತಿಳಿದು ಬಂದಿದೆ.