Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಯುವತಿಯ ಕಿರುಕುಳ ತಾಳಲಾರದೆ ವಿಡಿಯೋ ಮಾಡಿ ವಿಷ ಸೇವಿಸಿದ ಯುವಕ

Spread the love

ದೊಡ್ಡಬಳ್ಳಾಪುರ:ದೊಡ್ಡಬಳ್ಳಾಪುರದಲ್ಲಿ ಘೋರ ಘಟನೆ ನಡೆದಿದ್ದು, ಯುವಕನೊಬ್ಬ ಯುವತಿ‌ ಕಿರುಕುಳ ತಾಳಲಾರದೆ ವಿಷ ಸೇವಿಸಿ ಸೆಲ್ಫಿ ವಿಡಿಯೋ‌ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೊಡ್ಡಬಳ್ಳಾಪುರದ‌ ರಾಜಘಟ್ಟ ಕೆರೆಯ ಬಳಿ ನಡೆದಿದೆ.

ಮೃತ ಯುವಕನನ್ನು ಮಂಜುನಾಥ್ ಎಂದು ತಿಳಿದುಬಂದಿದೆ.

ಸಾವಿಗೆ ಗಗನ ಎಂಬ ಯುವತಿ ಕಾರಣ ಎಂದು ಜೂ 13ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಯುವತಿ ನಂಬಿಸಿ ಮೋಸ ಮಾಡಿದ್ದಾಳೆ. ಆಕೆಗೆ ಬೇರೋಬ್ಬನ‌ ಜೊತೆಯಲ್ಲಿ ಸಂಬಂಧವಿತ್ತು. ಆದ್ರೂ ಕೂಡ ನಾನು ಮದುವೆ ಆಗಲು ತೀರ್ಮಾನ‌ ಮಾಡಿದ್ದೆ. ಆದರೆ ಆಕೆ‌ ನನ್ನನ್ನು ಜೈಲಿಗೆ ಕಳಿಸಿದ್ದಳು. ಕಳೆದ ಫೆಬ್ರವರಿಯಲ್ಲಿ ಕುಂಬಳಗೋಡು ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು.

ಅದಲ್ಲದೆ ಬೇಲ್‌ ವಿಚಾರವಾಗಿ ಹಣ ಪಡೆದಿದ್ದಳು. ಹಣಕ್ಕೆ ಹೆಚ್ಚು ಬೇಡಿಕೆ‌ ಇಟ್ಟು ಕಿರುಕುಳ ನೀಡಿದ್ದಾಳೆ ಎಂದು ವಿಡಿಯೋದಲ್ಲಿ ಆತ್ಮಹತ್ಯೆಗೆ ಶರಣಾದ ಮಂಜುನಾಥ್ ಆರೋಪ ಮಾಡಿದ್ದಾನೆ. ವಿಷದ ಮಾತ್ರೆಗಳನ್ನು ಸೇವಿಸಿದ ಮಂಜುನಾಥ್ ನ್ನು ದೊಡ್ಡಬಳ್ಳಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು.ಆದ್ರೆ ಚಿಕಿತ್ಸೆ ಫಲಕಾರಿ ಆಗದೆ ಸಾವನ್ನಪ್ಪಿದ್ದು, ಮಂಜುನಾಥ್ ಕುಟುಂಬಸ್ಥರಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಯುವತಿ‌ ಗಗನ ಮೇಲೆ ದೂರು ನೀಡಲಾಗಿದೆ ಎಂದು ತಿಳಿದುಬಂದಿದೆ.


Spread the love
Share:

administrator

Leave a Reply

Your email address will not be published. Required fields are marked *