ಅನಾರೋಗ್ಯದಿಂದ ಚೇತರಿಸಿಕೊಂಡು ನಟನೆಗೆ ಮರಳಿದ ಮಮ್ಮುಟ್ಟಿ: ಅಕ್ಟೋಬರ್ 1 ರಿಂದ ‘ಪ್ಯಾಟ್ರಿಯಾಟ್’ ಶೂಟಿಂಗ್

ಎಂಟು ತಿಂಗಳ ನಂತರ ಮಲಯಾಳಂ ನಟ ಮಮ್ಮುಟ್ಟಿ (Mammootty) ನಟನೆಗೆ ಮರಳುತ್ತಿದ್ದಾರೆ. ಮಹೇಶ್ ನಾರಾಯಣನ್ ಅವರ ಬಿಗ್ ಬಜೆಟ್ ಚಿತ್ರ ‘ಪ್ಯಾಟ್ರಿಯಾಟ್’ನಲ್ಲಿ ಮಮ್ಮುಟ್ಟಿ ಮತ್ತೆ ನಟಿಸುತ್ತಿದ್ದಾರೆ. ಚಿತ್ರದ ನಿರ್ಮಾಪಕ ಆ್ಯಂಟೋ ಜೋಸೆಫ್ ಸ್ವತಃ ತಮ್ಮ ಫೇಸ್‌ಬುಕ್ ಅಲ್ಲಿ ಈ ವಿಷಯವನ್ನು ಘೋಷಿಸಿದ್ದಾರೆ. ಅನಾರೋಗ್ಯದ ಕಾರಣ ಮಮ್ಮುಟ್ಟಿ ಹಲವು ತಿಂಗಳಿಂದ ವಿಶ್ರಾಂತಿ ಪಡೆಯುತ್ತಿದ್ದರು. ಈಗ ಅವರು ನಟನೆಗೆ ಮರಳುತ್ತಿರುವ ಬಗ್ಗೆ ಫ್ಯಾನ್ಸ್ಗೆ ಖುಷಿ ಇದೆ.

ಮಮ್ಮುಟ್ಟಿ ಅವರು ಕಳೆದ ಎಂಟು ತಿಂಗಳಿಂದ ನಟನೆಯಿಂದ ದೂರ ಇದ್ದರು. ಅವರು ಎಲ್ಲಿಯೂ ಸಾರ್ವಜನಿಕವಾಗಿ ಕಾಣಿಸಿಕೊಂಡೂ ಇರಲಿಲ್ಲ. ಇದಕ್ಕೆ ಕಾರಣ ಏನು ಎಂಬ ವಿಚಾರ ರಿವೀಲ್ ಆಗಿರಲಿಲ್ಲ. ಕೆಲವರು ಇದನ್ನು ಕ್ಯಾನ್ಸರ್ ಎಂದು ಕೂಡ ಹೇಳಿದ್ದರು. ಅವರು ಇದರಿಂದ ಹೀಲ್ ಆಗಿದ್ದಾರೆ. ಚೆನ್ನೈನಲ್ಲಿ ಟ್ರೀಟ್ಮೆಂಟ್ ಪಡೆದರು. ಅವರು ನಟನೆಗೆ ಮರಳುತ್ತಿರುವುದು ಖುಷಿಯ ವಿಚಾರ.
‘ನನ್ನ ಪ್ರೀತಿಯ ಮಮ್ಮುಟ್ಟಿ ಬರುತ್ತಿದ್ದಾರೆ. ಅವರು ಅಕ್ಟೋಬರ್ 1ರಿಂದ ಮಹೇಶ್ ನಾರಾಯಣನ್ ನಿರ್ದೇಶನದ ಚಿತ್ರದಲ್ಲಿ ನಟಿಸಲಿದ್ದಾರೆ. ಅವರು ತೆಗೆದುಕೊಂಡಿದ್ದು ಒಂದು ಸಣ್ಣ ವಿರಾಮ. ಮಮ್ಮುಟ್ಟಿ ಹೈದರಾಬಾದ್ನಲ್ಲಿ ಶೂಟಿಂಗ್ಗೆ ಸೇರುತ್ತಾರೆ. ಪ್ರಾರ್ಥನೆಯಲ್ಲಿ ಸೇರಿಕೊಂಡು ನಾನು ಕಷ್ಟದಲ್ಲಿದ್ದಾಗ ಸಹಾಯ ಮಾಡಿದವರಿಗೆ ಹೃತ್ಪೂರ್ವಕ ಕೃತಜ್ಞತೆ ಮತ್ತು ಪ್ರೀತಿ’ ಎಂದು ಆಂಟೋ ಜೋಸೆಫ್ ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.
ಪ್ಯಾಟ್ರಿಯಾಟ್’ ಚಿತ್ರವು ಮಮ್ಮುಟ್ಟಿ, ಮೋಹನ್ ಲಾಲ್, ಕುಂಚಾಕೊ ಬೋಬನ್, ಫಹಾದ್ ಫಾಸಿಲ್, ನಯನತಾರಾ ಮತ್ತು ಇತರ ದೊಡ್ಡ ತಾರೆಯರು ನಟಿಸಿರುವ ದೊಡ್ಡ ಬಜೆಟ್ ಚಿತ್ರವಾಗಿದೆ. ಮಮ್ಮುಟ್ಟಿ ಮತ್ತು ಮೋಹನ್ ಲಾಲ್ 16 ವರ್ಷಗಳ ನಂತರ ದೊಡ್ಡ ಪರದೆಯ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಹರಿಕೃಷ್ಣನ್ಸ್ ಚಿತ್ರದ ನಂತರ ಮಮ್ಮುಟ್ಟಿ, ಮೋಹನ್ ಲಾಲ್ ಮತ್ತು ಕುಂಚಾಕೊ ಬೋಬನ್ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವ ಚಿತ್ರವೂ ಇದಾಗಿದೆ. ಈ ಸಿನಿಮಾದ ಶೆ.60ರಷ್ಟು ಶೂಟ್ ಪೂರ್ಣಗೊಂಡಿದೆ.
ಮಮ್ಮುಟ್ಟಿ ಮಲಯಾಳಂನ ಹಿರಿಯ ನಟ. ಅವರು ಕಂಬ್ಯಾಕ್ ಮಾಡುತ್ತಿರುವ ಬಗ್ಗೆ ಫ್ಯಾನ್ಸ್ಗೂ ಖುಷಿ ಇದೆ. ಅವರು ಬರುತ್ತಿರುವುದನ್ನು ಸಂಭ್ರಮಿಸಲಾಗುತ್ತಿದೆ.
