Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಅನಾರೋಗ್ಯದಿಂದ ಗಂಡು ಚಿರತೆ ಸಾವು: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದಿಂದ ರಕ್ಷಿಸಲಾಗಿದ್ದ ಚಿರತೆ ನಿಧನ!

Spread the love

ಆನೇಕಲ್: ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ (Bannerghatta National Park) ಅನಾರೋಗ್ಯದಿಂದಾಗಿ ಗಂಡು ಚಿರತೆಯೊಂದು ಸಾವನ್ನಪ್ಪಿದೆ.

2023ರಲ್ಲಿ ಮೂರು ತಿಂಗಳ ಮರಿ ಆಗಿದ್ದಾಗ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದಿಂದ ರಕ್ಷಣೆ ಮಾಡಿ, ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಕರೆತರಲಾಗಿತ್ತು. ಆಗಿನಿಂದ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಆರೋಗ್ಯವಾಗಿ ಓಡಾಡಿಕೊಂಡಿತ್ತು

ಅ.30ರಿಂದ ಚಿರತೆ ಏಕಾಏಕಿ ಆಹಾರ ಸೇವನೆ ಕಡಿಮೆ ಮಾಡಿ, ತೀವ್ರ ಜ್ವರದಿಂದ ಬಳಲೋಕೆ ಶುರುಮಾಡಿತ್ತು. ಬಳಿಕ ಚಿರತೆಯ ರಕ್ತದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳಿಸಲಾಗಿತ್ತು. ಜೊತೆಗೆ ಸೂಕ್ತ ಚಿಕಿತ್ಸೆ ಆರಂಭಿಸಿದ್ದರಿಂದ ಸ್ವಲ್ಪ ಆಹಾರ ಸೇವನೆ ಮಾಡುತ್ತಾ, ಚೇತರಿಕೆ ಕಂಡುಬಂದಿತ್ತು. ಮಾಂಸದಲ್ಲಿಯೇ ಔಷಧಿಯನ್ನು ನೀಡುವ ವ್ಯವಸ್ಥೆಯನ್ನು ಸಹ ಮಾಡಲಾಗಿತ್ತು, ಆದರೆ ಕೆಲವು ದಿನಗಳಿಂದ ಆಹಾರ ಸೇವನೆ ನಿಲ್ಲಿಸಿ, ನಿಯಂತ್ರಣ ಕಳೆದುಕೊಂಡು ಇಂದು ಸಾವನ್ನಪ್ಪಿದೆ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಅಧಿಕಾರಿಗಳು ತಿಳಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *