ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್‌ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ; ನಾಳೆ ಪ್ರದಾನ

ಮಲಯಾಳಂ ಸಿನಿರಂಗದ ದಂತಕಥೆ, ಲಾಲೆಟ್ಟನ್ ಮೋಹನ್ ಲಾಲ್ 2023ರ ಸಾಲಿನ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮಂಗಳವಾರ 71ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿಯನ್ನ ಪ್ರದಾನ ಮಾಡಲಾಗುತ್ತೆ. 400ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿರೋ ಮೋಹನ್ ಲಾಲ್ ಕನ್ನಡ ಚಿತ್ರಗಳಲ್ಲೂ ನಟಿಸಿದ್ದಾರೆ. ಯೆಸ್ 2023ರ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನವಾಗಿರೋ ಮೋಹನ್ ಲಾಲ್ಗೆ ಮಂಗಳವಾರ ನಡೆವ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ನೀಡಲಾಗ್ತಾ ಇದೆ. ಲಾಲೆಟ್ಟನ್ ಮೋಹಲ್ ಲಾಲ್ ಗೆ ಈ ಪ್ರಶಸ್ತಿ ನೀಡಿರೋದು ಅತ್ಯಂತ ಸಮಂಜಸ ಅಂತ ಇಡೀ ಭಾರತೀಯ ಸಿನಿರಂಗ ಸಂಭ್ರಮಿಸ್ತಾ ಇದೆ.

ಮಲಯಾಳಂ ಚಿತ್ರರಂಗದ ದಂತಕತೆ ಅನ್ನಿಸಿಕೊಂಡವರು ಮೋಹನ್ ಲಾಲ್. ಕೇವಲ 18ರ ಹರೆಯದಲ್ಲಿಯೇ ಚಿತ್ರರಂಗಕ್ಕೆ ಬಂದ ಮೋಹನ್ ಲಾಲ್ ಇಲ್ಲಿಯವರೆಗೆ 400ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ತಮ್ಮ ಅಭಿನಯದಿಂದ ಅಸಂಖ್ಯಾತ.. ಅಗಣಿತ.. ಅಭಿಮಾನಿಗಳ ಹೃದಯವನ್ನ ಗೆದ್ದಿದ್ದಾರೆ. ಈ ಕಾಲದಲ್ಲಿ ವರ್ಷಕ್ಕೆ ಒಂದು ಚಿತ್ರ ಮಾಡೊದಕ್ಕೂ ಸ್ಟಾರ್‌ಗಳು ಹಿಂದೆ ಮುಂದೆ ಯೋಚನೆ ಮಾಡ್ತಾರೆ. ಆದ್ರೆ ಮೋಹನ್ ಲಾಲ್ ಕಳೆದ ನಾಲ್ಕು ದಶಕದಿಂದಲೂ ನಿರಂತರ ಸಿನಿಮಾ ಮಾಡ್ತಾನೇ ಬಂದಿದ್ದಾರೆ 26ರ ಹರೆಯದಲ್ಲಿ ಮೋಹಲ್ ಲಾಲ್ ಒಂದೇ ವರ್ಷದಲ್ಲಿ 34 ಚಿತ್ರಗಳಲ್ಲಿ ಅಭಿನಯಿಸಿ ದಾಖಲೆ ಮಾಡಿದ್ರು. ಆ ಪೈಕಿ 25 ಚಿತ್ರಗಳು ಬ್ಲಾಕ್ ಬಸ್ಟರ್ ಆಗಿ ಹೊರ ಹೊಮ್ಮಿದ್ದವು.
ಈಗಲೂ ಮೋಹಲ್ ಲಾಲ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ. ಇಂದಿನ ಯುವನಟರನ್ನೂ ಮೀರಿಸುವಂತೆ ನೂರು ಕೋಟಿ ಕ್ಲಬ್ ನ ಹಿಟ್ ಸಿನಿಮಾಗಳನ್ನೂ ಮಾಡ್ತಾ ಇದ್ದಾರೆ ಲಾಲೆಟ್ಟನ್. ಮೋಹಲ್ ಲಾಲ್ ನಟನೆ ಮಲಯಾಳಂ ಸಿನಿರಂಗಕಷ್ಟೇ ಸೀಮಿತವಾಗಿಲ್ಲ. ಹಿಂದಿ, ತೆಲುಗು, ತಮಿಳು ಚಿತ್ರಗಳಲ್ಲೂ ಮಿಂಚಿದ್ದಾರೆ. ಕನ್ನಡದಲ್ಲಿ ಲವ್ ಸಿನಿಮಾದಲ್ಲಿ ಪುಟ್ಟ ಪಾತ್ರ ಮಾಡಿದ್ದ ಮೋಹನ್ ಲಾಲ್ ಮೈತ್ರಿ ಸಿನಿಮಾದಲ್ಲಿ ಪುನೀತ್ ರಾಜ್ಕುಮಾರ್ ಜೊತೆಗೆ ಸ್ಕ್ರೀನ್ ಶೇರ್ ಮಾಡಿದ್ರು. ಮೋಹನ್ ಲಾಲ್ ನಟನೆ ಅಂದ್ರೆ ಅದೊಂಥರಾ ನಟನಾ ಪಾಠವಿದ್ದಂತೆ. ಸಹಜ ನಟ ಅಂತಲೇ ಕರೆಸಿಕೊಳ್ಳೋ ಈ ಮಹಾನಟನಿಗೆ ದಾದಾ ಸಾಹೇಬ್ ಫಾಲ್ಕೆ ಗೌರವ ಬಂದಿರೋ ನಿಜಕ್ಕೂ ಸೂಕ್ತವಾಗಿದೆ.
