Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮಲಯಾಳಂ ನಟ ವಿನಾಯಕನ್ ಮತ್ತೆ ವಿವಾದದಲ್ಲಿ: ಅಸಭ್ಯ ವರ್ತನೆಗೆ ಕೇರಳದಲ್ಲಿ ಎಫ್ಐಆರ್

Spread the love

ಮಲಯಾಳಂ ನಟ ವಿನಾಯಕನ್  ಅವರು ಮತ್ತೆ ಕಿರಿಕ್ ಮಾಡಿಕೊಂಡಿದ್ದಾರೆ. ಕುಡಿದ ಮತ್ತಿನಲ್ಲಿ ಪುಂಡಾಟಿಕೆ ನಡೆಸಿದ ಅವರನ್ನು ಗುರುವಾರ (ಮೇ 9) ಬಂಧಿಸಲಾಗಿದೆ. ಕೇರಳದ ಅಂಚಲುಮ್ಮೂಡು ಭಾಗದಲ್ಲಿ ಈ ಘಟನೆ ನಡೆದಿದೆ. ‘ಜೈಲರ್’ ರೀತಿಯ ಹಿಟ್ ಚಿತ್ರಗಳನ್ನು ನೀಡಿದವರು ವಿನಾಯಕನ್. ವಿಲನ್ ಪಾತ್ರಗಳ ಮೂಲಕ ಅವರು ಗಮನ ಸೆಳೆದಿದ್ದಾರೆ. ಆದರೆ, ಈ ರೀತಿಯ ಕಿರಿಕ್​ಗಳಿಂದ ಅವರು ಸುದ್ದಿ ಆಗುತ್ತಾರೆ.

ವಿನಾಯಕನ್ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರು ಮಾಡುವ ವಿಲನ್ ಪಾತ್ರಗಳು ಸಖತ್ ಇಷ್ಟ ಆಗುತ್ತದೆ. ರಜನಿಕಾಂತ್, ಶಿವರಾಜ್​ಕುಮಾರ್ ಮೊದಲಾದವರು ನಟಿಸಿದ ‘ಜೈಲರ್’ ಚಿತ್ರದಲ್ಲಿ ಅವರು ಮಾಡಿದ ವರ್ಮ ಹೆಸರಿನ ಪಾತ್ರ ಸಾಕಷ್ಟು ಗಮನ ಸೆಳೆಯಿತು. ಈಗ ಅವರು ಬಂಧನಕ್ಕೆ ಒಳಗಾಗಿ ಸುದ್ದಿ ಆಗಿದ್ದಾರೆ.

ಮೇ 2ರಿಂದ ವಿನಾಯಕನ್ ಅವರು ಅಂಚಲುಮ್ಮೂಡು ಭಾಗದ ಹೋಟೆಲ್​ನಲ್ಲಿ ಉಳಿದುಕೊಂಡಿದ್ದಾರೆ. ಸಿನಿಮಾ ಶೂಟ್ ಹಿನ್ನೆಲೆಯಲ್ಲಿ ಅವರು ಇಲ್ಲಿ ವಾಸವಿದ್ದಾರೆ. ಗುರುವಾರ ಹೋಟೆಲ್​ನಿಂದ ಚೆಕ್​ಔಟ್ ಆಗುವಾಗ ಅವರು ಕಿರಿಕ್ ಮಾಡಿಕೊಂಡಿದ್ದಾರೆ. ಅವರು ಕುಡಿದ ಮತ್ತಿನಲ್ಲಿ ಜಗಳ ಆಡಿದ್ದಾರೆ.

ವಿನಾಯಕನ್ ಅವರನ್ನು ವೈದ್ಯಕೀಯ ಚೆಕಪ್​ಗೆ ಕರೆದುಕೊಂಡು ಹೋಗಲಾಯಿತು. ಈ ವೇಳೆ ಅವರು ಮಿತಿ ಮೀರಿ ಮದ್ಯ ಸೇವನೆ ಮಾಡಿದ್ದು ಸ್ಪಷ್ಟವಾಗಿದೆ. ಸೆಕ್ಷನ್ 118 (ಎ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಕೇರಳ ಪೊಲೀಸರು ಅವರನ್ನು ಬಂಧಿಸಿದ ಬಳಿಕ ಅವರ ವಿರುದ್ಧವೂ ಕೂಗಾಡಿ, ಅವಾಜ್ ಹಾಕಿದ್ದು ಕಂಡು ಬಂದಿದೆ. ಸ್ಟೇಷನ್ ಜಾಮೀನು ನೀಡಿ ಅವರನ್ನು ಕಳುಹಿಸಲಾಗಿದೆ. ಅವರ ಸಹಾಯಕರು ಶ್ಯೂರಿಟಿ ಕೊಟ್ಟಿದ್ದಾರೆ.

ವಿನಾಯಕನ್ ಅವರು ಒಳ್ಳೆಯ ಕಲಾವಿದನಾದರೂ ಕುಡಿತವೇ ಅವರಿಗೆ ವೀಕ್​ನೆಸ್ ಆಗಿದೆ. ಈ ಮೊದಲು ಕೂಡ ಅವರು ಕುಡಿದು ಗಲಾಟೆ ಮಾಡಿಕೊಂಡಿದ್ದರು. ಕೊಚ್ಚಿ-ಹೈದರಾಬಾದ್-ಗೋವಾ ವಿಮಾನದಲ್ಲಿ ಅವರು ಮದ್ಯದ ಅಮಲಿನಲ್ಲಿ ಇದ್ದರು ಮತ್ತು ಜಗಳ ಆಡಿದ್ದರು. 2024ರಲ್ಲಿ ಈ ಘಟನೆ ನಡೆದಿತ್ತು.


Spread the love
Share:

administrator

Leave a Reply

Your email address will not be published. Required fields are marked *