ಒಮಾನ್ ಕರಾವಳಿಯಲ್ಲಿ ಅಮೆರಿಕದ ಮಿಲಿಟರಿ ಹಡಗಿನ ಮೇಲೆ ಇರಾನ್ ಭೀಕರ ದಾಳಿ

ತೆಹ್ರಾನ್: ಒಮಾನ್ ಕರಾವಳಿಯ ಸಮೀಪ ಅಮೆರಿಕದ ಮಿಲಿಟರಿ ಸರಬರಾಜು ಹಡಗನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿರುವುದಾಗಿ ಇರಾನ್ ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್
(IRGC) ತಿಳಿಸಿದೆ.
IRGCಯ ಖತಮ್ ಅಲ್-ಅನ್ದಿಯಾ ಪ್ರಧಾನ ಕಚೇರಿಯ ವಕ್ತಾರರು ಶನಿವಾರ ನೀಡಿದ ಹೇಳಿಕೆಯಲ್ಲಿ “ಒಮಾನ್ ನ ಸಲಾಲಾ ಬಂದರಿನಿಂದ ಸಾಕಷ್ಟು ದೂರದಲ್ಲಿರುವ ಪ್ರದೇಶದಲ್ಲಿ ಅಮೆರಿಕದ ಮಿಲಿಟರಿ ಸರಬರಾಜು ಹಡಗನ್ನು ಇರಾನ್ ಪಡೆಗಳು ಗುರಿಯಾಗಿಸಿಕೊಂಡಿವೆ” ಎಂದು ತಿಳಿಸಿದ್ದಾರೆ.
ಇರಾನಿನ ತಸ್ನಿಮ್ ಸುದ್ದಿ ಸಂಸ್ಥೆಗೆ ನೀಡಿದ ಹೇಳಿಕೆಯಲ್ಲಿ, ಈ ಕ್ರಮದ ನಡುವೆಯೂ ಒಮಾನ್ ನ ಸಾರ್ವಭೌಮತ್ವಕ್ಕೆ ಇರಾನ್ ಗೌರವ ಸೂಚಿಸಿರುವುದಾಗಿ ಸ್ಪಷ್ಟಪಡಿಸಲಾಗಿದೆ. “ನಾವು ಈಗಾಗಲೇ ಘೋಷಿಸಿದಂತೆ, ಸಹೋದರ ಮತ್ತು ಸ್ನೇಹಪರ ರಾಷ್ಟ್ರವಾದ ಒಮಾನ್ ನ ರಾಷ್ಟ್ರೀಯ ಸಾರ್ವಭೌಮತ್ವವನ್ನು ಇರಾನ್ ಇಸ್ಲಾಮಿಕ್ ಗಣರಾಜ್ಯ ಗೌರವಿಸುತ್ತದೆ,’ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
