ಮಾಗಡಿಯಲ್ಲಿ ಗ್ರಾ.ಪಂ ಸದಸ್ಯನ ಮನೆ ದರೋಡೆ: ಇಬ್ಬರ ಬಂಧನ

ರಾಮನಗರ: ಮನೆ ಬಾಗಿಲು ಮುರಿದು ಗ್ರಾ.ಪಂ ಸದಸ್ಯನ ಮನೆ ದರೋಡೆ ಮಾಡಿದ್ದ ಇಬ್ಬರು ಖದೀಮರನ್ನ ಬಂಧಿಸುವಲ್ಲಿ ಮಾಗಡಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಸಾವನದುರ್ಗದ ನರಸಿಂಹ ನಾಯಕ್ (34), ಕೆಬ್ಬೆದೊಡ್ಡಿಯ ಕುಮಾರ್ ನಾಯಕ್ (42) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.ಮಾಗಡಿ ತಾಲೂಕಿನ ಹಂಚಿಕುಪ್ಪೆ ಗ್ರಾಮ ಪಂಚಾಯಿತಿ ಸದಸ್ಯನ ಮನೆಯಲ್ಲಿ ಬಾಗಿಲು ಮುರಿದು ಚಿನ್ನಾಭರಣ ಹಾಗೂ ನಗದು ದೋಚಲಾಗಿತ್ತು. ಈ ಬಗ್ಗೆ ಮನೆ ಮಾಲೀಕ ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಕುರಿತು ತನಿಖೆ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನ ಪತ್ತೆಹಚ್ಚಿದ್ದಾರೆ.
ಬಂಧಿತ ಆರೋಪಿಗಳಿಂದ 13 ಲಕ್ಷ ಮೌಲ್ಯದ 162 ಗ್ರಾಂ ಚಿನ್ನಾಭರಣ ಹಾಗೂ 5.65 ಲಕ್ಷ ರೂ. ನಗದನ್ನು ವಶಪಡಿಸಿಕೊಂಡು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.