ಮಡಿಕೇರಿ: ಸಾರ್ವಜನಿಕರಿಗೆ ಕಿರಿಕಿರಿ ನೀಡುತ್ತಿದ್ದ ‘ಜಿಪ್ಸಿ’ ಪೊಲೀಸ್ ವಶಕ್ಕೆ!

ಮಡಿಕೇರಿ: ಅನಧಿಕೃತವಾಗಿ ವಾಹನದ ಸ್ವರೂಪ ಬದಲಾಯಿಸಿಕೊಂಡು ಕರ್ಕಶ ಶಬ್ಧದ ಸೈಲೆನ್ಸರ್ ಅಳವಡಿಸಿ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದ ಹಿನ್ನೆಲೆ ಜಿಪ್ಸಿ ವಾಹನವೊಂದನ್ನ ಮಡಿಕೇರಿ ಸಂಚಾರ ಠಾಣೆ ಪೊಲೀಸರು (Madikeri Traffic Police) ವಶಪಡಿಸಿಕೊಂಡಿದ್ದಾರೆ.

ಮಡಿಕೇರಿ ನಗರದಲ್ಲಿ KA01 NG2730 ಸಂಖ್ಯೆಯ ಜಿಪ್ಸಿಯೊಂದು ರೇಸಿಂಗ್ ಸ್ಪೀಡ್ನಲ್ಲಿ ಸಂಚರಿಸುತ್ತಿರುವುದಾಗಿ ಸಾರ್ವಜನಿಕರಿಂದ ದೂರು ಬಂದಿತ್ತು. ಈ ಬಗ್ಗೆ ಸಂಚಾರ ಪೊಲೀಸರು ಪರಿಶೀಲನೆಗೆ ಮುಂದಾಗಿದ್ದರು

ಜಿಪ್ಸಿ ವಾಹನ ಎಫ್ಎಂಸಿ ಕಾಲೇಜು ಕಡೆಯಿಂದ ಮಡಿಕೇರಿ ನಗರದ ಕಡೆಗೆ ಬರುತ್ತಿದ್ದಾಗ ವಾಹನವನ್ನ ವಶಕ್ಕೆ ಪಡೆದುಕೊಂಡು ಕಲಂ: 281 BNS 2023, . 52, 53(1), 192, 184, 189 2 ಆಕ್ಟ್ ನಡಿ ಪ್ರಕರಣ ದಾಖಲಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.
ಅನಧಿಕೃತವಾಗಿ ವಾಹನಗಳ ಮೂಲ ಸ್ವರೂಪ ಬದಲಾವಣೆ ಮಾಡುವುದು ಅಥವಾ ಕರ್ಕಶ ಶದ್ಧ ಉಂಟುಮಾಡುವ ಸೈಲೆನ್ಸರ್, ಹಾರ್ನ್ಗಳನ್ನ ಅಳವಡಿಸಿಕೊಳ್ಳುವುದು ಆರ್ಸಿ ನಿಯಮ ಉಲ್ಲಂಘನೆ ಮಾಡಿದಂತೆ. ಇದರೊಂದಿಗೆ ವ್ಹೀಲಿಂಗ್ ಮಾಡುವುದು ಸಂಚಾರ ನಿಯಮ ಉಲ್ಲಂಘನೆ ಮಾಡಿದಂತೆ. ಇಂತಹ ಪ್ರಕರಣಗಳು ಕಂಡುಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಕೊಡಗು ಎಸ್ಪಿ ಬಿಂದುಮಣಿ ಮನವಿ ಮಾಡಿದ್ದಾರೆ.