ಮಧ್ಯಪ್ರದೇಶ: ಪತ್ನಿ ಮತ್ತು ಸ್ನೇಹಿತರು ಪತಿಯನ್ನು ಥಳಿಸಿ ಕೊಂದ ಘಟನೆ

ಇಂದೋರ್: 17 ವರ್ಷ ವಯಸ್ಸಿನ ಅಪ್ರಾಪ್ತ ಪತ್ನಿಯೊಬ್ಬಳು ತನ್ನಿಬ್ಬರು ಸ್ನೇಹಿತರ ನೆರವಿನಿಂದ ಪತಿಯನ್ನು 36 ಬಾರಿ ತಿವಿದು ಕೊಂದಿರುವ ಘಟನೆ ಮಧ್ಯಪ್ರದೇಶದ ಬುರ್ಹಾನ್ಪರದಲ್ಲಿ ನಡೆದಿದೆ.
ಏ.12ರಂದು ಈ ಘಟನೆ ನಡೆದಿದ್ದು, ಶಾಪಿಂಗ್ ನೆಪದಲ್ಲಿ ಪತಿ ರಾಹುಲ್(25)ನನ್ನು ಮನೆಯ ಹೊರ ಕರೆತಂದಿದ್ದ ಪತ್ನಿ, ತನ್ನ ಸ್ನೇಹಿತರ ನೆರವಿನಿಂದ ಆತನಿಗೆ ಥಳಿಸಿದ್ದಲ್ಲದೆ, ಒಡೆದ ಬಿಯರ್ ಬಾಟಲಿಯಿಂದ ತಿವಿದು ಕೊಂದಿದ್ದಾಳೆ ಎಂದು ಆರೋಪಿಸಲಾಗಿದೆ.
ಕೃತ್ಯದ ಬಳಿಕ ತನ್ನ ಪ್ರಿಯಕರನಾದ ಯುವರಾಜ್ ಎಂಬುವವನಿಗೆ ವೀಡಿಯೋ ಕರೆ ಮಾಡಿರುವ ಪತ್ನಿ, ಶವವನ್ನು ತೋರಿಸುತ್ತಾ “ಕೆಲಸ ಮುಗಿದಿದೆ” ಎಂದಿದ್ದಾಳೆ. ಕೃತ್ಯದ ಬಳಿಕ ಪರಾರಿಯಾಗಿದ್ದ ಪತ್ನಿ, ಆಕೆಯ ಪ್ರಿಯಕರ, ಕೃತ್ಯಕ್ಕೆ ನೆರವಾಗಿದ್ದ ಬಾಲಕ ಹಾಗೂ ಲಲಿತ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ