ಮದ್ದೂರು ಗಣೇಶೋತ್ಸವ ಗಲಭೆ: ಡಿಕೆಶಿ ಬಿಜೆಪಿ ಶೋಭಾಯಾತ್ರೆಗೆ ಟೀಕೆ

ಬೆಂಗಳೂರು : ಮದ್ದೂರಿನಲ್ಲಿ (Madduru) ಗಣೇಶೋತ್ಸವ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ ಇದೀಗ ರಾಜ್ಯದಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇದರ ನಡುವೆಯೇ ಬಿಜೆಪಿ (BJP) ಮದ್ದೂರಿನಲ್ಲಿ ಶೋಭಾಯಾತ್ರೆ ನಡೆದಿದೆ. ಈ ಬಗ್ಗೆ ಬೆಂಗಳೂರಿನಲ್ಲಿಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು, ಬಿಜೆಪಿಯನ್ನ ಲೇವಡಿ ಮಾಡಿದ್ದಾರೆ.

ಮದ್ದೂರು ಗಲಭೆ-ಡಿಕೆಶಿ ರಿಯಾಕ್ಷನ್
ಈಗಾಗಲೇ ಮುಖ್ಯಮಂತ್ರಿ, ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಹೇಳಿಕೆ ಕೊಟ್ಟಿದ್ದಾರೆ. ನಾನು ಊರಿನಲ್ಲಿ ಇರಲಿಲ್ಲ. ನನಗೆ ಪೂರ್ಣ ಮಾಹಿತಿ ಗೊತ್ತಿಲ್ಲ. ನಾನು ಕೂಡ ಅವರ ಹೇಳಿಕೆಗಳನ್ನು ಪೇಪರ್ ನಲ್ಲಿ ಗಮನಿಸಿದ್ದೇನೆ. ಅದರ ಬಗ್ಗೆ ತಿಳಿಯದೆ ಮಾತನಾಡಲು ಹೋಗಲ್ಲ ಅಂದ್ರು.
‘ಬೆಂಕಿ ಇಡೋ ಕೆಲಸ ಮಾಡ್ತಿದ್ದಾರೆ’
ಬಿಜೆಪಿ ನಾಯಕರ ಮದ್ದೂರಿನ ಭೇಟಿ ಬಗ್ಗೆ ಡಿಕೆ ಶಿವಕುಮಾರ್ ವ್ಯಂಗ್ಯ ಮಾಡಿದ್ದಾರೆ. ಅವರಿಗೆ ಬೇರೆ ಏನೂ ಕೆಲಸ ಇಲ್ಲ. ಜನರನ್ನ ಭಾಗ ಮಾಡುವುದೇ ಅವ್ರ ಕೆಲಸ. ಬೆಂಕಿ ಇಡೋ ಕೆಲಸ ಮಾಡ್ತಿದ್ದಾರೆ. ರಾಜಕೀಯ ಮಾಡೋದಷ್ಟೇ ಅವರ ಕೆಲಸ. ಏನೂ ಅಭಿವೃದ್ದಿ ಮಾಡಲು ಆಗಿಲ್ಲ ಎಂದು ಡಿಸಿಎಂ ಕಿಡಿಕಾರಿದ್ರು.
‘ದೆಹಲಿಗೆ ಹೋಗಿ ಹಣ ತನ್ನಿ’
ದೆಹಲಿಗೆ ಹೋಗಿ ನರೇಗಾ ಹಣವನ್ನು ತರಲಿ. ತೆರಿಗೆ ಹಣವನ್ನು ತನ್ನಿ. ಕಾವೇರಿ, ಮೇಕೆದಾಟು, ಮಹದಾಯಿ ಅನುಮತಿ ಕೊಡಿಸಲಿ. ಇವತ್ತು ಬೆಂಗಳೂರು ನಗರ ಶಾಸಕರ ಸಭೆ ಕರೆದಿದ್ದೇವೆ. ನಿನ್ನೆಗೆ ನಿಗದಿಯಾಗಿತ್ತು. ನಾನು ಊರಿನಲ್ಲಿ ಇರೋದಿಲ್ಲ ಅಂತ ಹೇಳಿದ ನಂತರ ಇವತ್ತಿಗೆ ಹಾಕಿಸಿಕೊಂಡಿದ್ದೇವೆ. ಇವತ್ತು ಸಂಜೆ ಸಭೆ ಇದ್ದು, ಕೆಲ ನೀರಾವರಿ ವಿಚಾರ ಮಾತಾಡೋದಿದೆ ಎಂದು ಹೇಳಿದ್ರು.
ಗ್ರೇಟರ್ ಬೆಂಗಳೂರು ಉಸ್ತುವರಿ ವಿಚಾರ
ಮಂತ್ರಿಗಳು ಅಂದ್ಮೇಲೆ ಕೇವಲ ಕ್ಷೇತ್ರದ ಕೆಲಸ ಮಾಡೋದಲ್ಲ. ಹೆಚ್ಚುವರಿ ಜವಾಬ್ದಾರಿ ಜಿಲ್ಲೆಗಳನ್ನು ಕೂಡ ನೋಡಿಕೊಳ್ಳಬೇಕು. ಅದಕ್ಕೆ ಜಿಲ್ಲೆಗಳಿಗೆ ಜವಾಬ್ದಾರಿ ವಹಿಸಿದ್ದೇವೆ. ಪಕ್ಷದಿಂದ ಕೂಡ ಜವಾಬ್ದಾರಿ ಇನ್ಮುಂದೆ ನೀಡುತ್ತೇವೆ ಎಂದ್ರು.
ಕಾಂಗ್ರೆಸ್ ಶಾಸಕರೇ ಇವರ ಟಾರ್ಗೆಟ್
ಶಾಸಕ ಸತೀಶ್ ಸೈಲ್ ಇಡಿ ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್, ಸತೀಶ್ ಸೈಲ್ ಬಂಧಿಸುವ ಅಗತ್ಯ ಏನಿತ್ತು..? ಕಾಂಗ್ರೆಸ್ ಶಾಸಕರನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ. ನಮ್ಮನ್ನ ಹುಡುಕಿ ಹುಡುಕಿ ಟಾರ್ಗೆಟ್ ಮಾಡ್ತಿದ್ದಾರೆ ಎಂದು ಇಡಿ ಅಧಿಕಾರಿಗಳ ವಿರುದ್ದ ಡಿಕೆಶಿ ಕಿಡಿಕಾರಿದ್ರು.
