Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಶಾಲೆಯ ಪಠ್ಯದಲ್ಲಿ ‘M’ ಮಸೀದಿ, ‘N’ ನಮಾಜ್ ವರ್ಣಮಾಲೆ ವಿವಾದ

Spread the love

ಮಧ್ಯಪ್ರದೇಶ: ಖಾಸಗಿ ಶಾಲೆಯೊಂದರಲ್ಲಿ ಘೋರ (Shocking) ಘಟನೆಯೊಂದು ನಡೆದಿದೆ. ನರ್ಸರಿ ವಿದ್ಯಾರ್ಥಿಗಳಿಗೆ ನೀಡಲಾಗಿದ್ದ ಪಠ್ಯ ಪುಸ್ತಕದಲ್ಲಿ (text book) ಎಡವಟ್ಟೊಂದು ನಡೆದಿದ್ದು, M ಎಂದರೆ ಮಸೀದಿ, N ಎಂದರೆ ನಮಾಜ್ (namaz) ಎಂದು ಉಲ್ಲೇಖಿಸಲಾಗಿದೆ.

ಸಾಮಾನ್ಯವಾಗಿ ಶಾಲಾ ಪಠ್ಯದಲ್ಲಿ ಯಾವುದೇ ಜಾತಿ ಧರ್ಮದ ಬಗ್ಗೆ ತಿಳಿಸುವಂತೆ ಇಲ್ಲ ಎಂದು ಆದೇಶವಿದ್ದರು ಕೂಡ ಮಧ್ಯಪ್ರದೇಶದ ರೈಸನ್ ಜಿಲ್ಲೆಯಲ್ಲಿ, ಖಾಸಗಿ ಶಾಲೆಯಲ್ಲಿ ನೀಡಿದ ವರ್ಣಮಾಲೆಯ ಪುಸ್ತಕದಲ್ಲಿ ಮುಸ್ಲಿಂ ಸಮುದಾಯದ ಬಗ್ಗೆ ಉಲ್ಲೇಖಿಸಿರುವುದು ವಿವಾದಕ್ಕೆ ಕಾರಣವಾಗಿದೆ.

ಸಾಮಾನ್ಯವಾಗಿ ವರ್ಣಮಾಲೆಯಲ್ಲಿ A ಆಪಲ್, B ಬಾಲ್, ಎಂದು ಇರುತ್ತದೆ. ಆದರೆ ಮಧ್ಯಪ್ರದೇಶದ ಖಾಸಗಿ ಶಾಲೆಯಲ್ಲಿ ನೀಡಿದ ವರ್ಣಮಾಲೆ ಪಟ್ಟಿಯಲ್ಲಿ K ಅಂದರೆ ಕಾಬಾ, M ಫಾರ್ ಮಚ್ಲಿ ಬದಲಿಗೆ ಮಸೀದಿ, ಹಾಗೂ N ಫಾರ್ ನೆಸ್ಟ್ ಬದಲಿಗೆ ನಮಾಜ್ ಎಂದು ಸೇರಿಸಲಾಗಿದೆ.

ಖಾಸಗಿ ಶಾಲೆಯ ಕಲಿಕಾ ಪಟ್ಟಿಯನ್ನು ಮಗುವಿಗೆ ಚಿಕ್ಕಪ್ಪ ಹೇಳಿ ಕೊಡುವ ಸಂದರ್ಭದಲ್ಲಿ ಈ ಘೋರ ಘಟನೆ ಬೆಳಕಿಗೆ ಬಂದಿದೆ. ಕೆ ಫಾರ್ ಕಬೂತರ್ ಅಥವಾ “ಎಂ ಫಾರ್ ಮಚ್ಲಿ” ನಂತಹ ಸಾಮಾನ್ಯ ಉದಾಹರಣೆಗಳ ಬದಲಿಗೆ, ವರ್ಣಮಾಲೆಯ ಪಟ್ಟಿಯಲ್ಲಿ ಇಸ್ಲಾಮಿಕ್ ಉಲ್ಲೇಖಗಳನ್ನು ಪ್ರದರ್ಶಿಸಲಾಗಿದೆ.

ಸದ್ಯ ಇದನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಖಂಡಿಸಿದ್ದು, ಬೇಬಿ ಕಾನ್ವೆಂಟ್ ಶಾಲೆಯ ಹೊರಗೆ ಪ್ರತಿಭಟನೆ ನಡೆಸಿ, ಶಾಲಾ ಆಡಳಿತ ಮಂಡಳಿಯು ತರಗತಿ ಸಾಮಗ್ರಿಗಳಲ್ಲಿ ಧಾರ್ಮಿಕ ಉಲ್ಲೇಖಗಳನ್ನು ಪರಿಚಯಿಸುವ ಮೂಲಕ ಶಿಕ್ಷಣ ಇಲಾಖೆಯ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದರು.

ಇನ್ನು ಈ ಬಗ್ಗೆ ಪ್ರಾಂಶುಪಾಲ ಐಎ ಖುರೇಷಿ ಪ್ರತಿಕ್ರಿಯಿಸಿದ್ದು, ಮಾರಾಟಗಾರನ ತಪ್ಪಿನಿಂದಾಗಿ ಈ ಘಟನೆ ಸಂಭವಿಸಿದೆ. ಈ ಚಾರ್ಟ್ ಅನ್ನು ಭೋಪಾಲ್‌ನಿಂದ ಪಡೆಯಲಾಗಿದೆ ಮತ್ತು ಮಾರಾಟಗಾರನು ಮದರಸಾಗಳಲ್ಲಿ ಬಳಸುವ ಮೂರರಿಂದ ನಾಲ್ಕು ಚಾರ್ಟ್‌ಗಳನ್ನು ಸೇರಿಸಿದ್ದಾನೆ ಎಂದು ಹೇಳಿದ್ದಾರೆ.

ಸದ್ಯ ಪ್ರಾಂಶುಪಾಲರ ನಿರ್ಲಕ್ಷ್ಯದಿಂದಲೇ ಈ ಘಟನೆ ಸಂಭವಿಸಿದೆ. ಈ ಕೂಡಲೇ ಆತನನ್ನು ಅಮಾನತು ಮಾಡಿ ಕಠಿಣ ಶಿಕ್ಷೆ ನೀಡಬೇಕು ಎಂದು ಪ್ರತಿಭಟನಾಕಾರರು, ಪೋಷಕರು ಆಗ್ರಹಿಸಿದ್ದಾರೆ. ಇನ್ನು ಸ್ಥಳಕ್ಕೆ ಸ್ಥಳೀಯ ಪೊಲೀಸರು ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಶಿಕ್ಷಣ ಇಲಾಖೆಯ ಮಾರ್ಗಸೂಚಿಗಳ ಪ್ರಕಾರ, ಯಾವುದೇ ನಿರ್ದಿಷ್ಟ. ನಂಬಿಕೆಯ ಧಾರ್ಮಿಕ ಚಿಹ್ನೆಗಳನ್ನು ಹೊಂದಿರುವ ಅಧ್ಯಯನ ಸಾಮಗ್ರಿಗಳನ್ನು ಶಾಲೆಗಳಲ್ಲಿ ಕಲಿಸಲಾಗುವುದಿಲ್ಲ. ಆದರೆ ಈ ಘಟನೆ ಹೇಗೆ ಸಂಭವಿಸಿದೆ ಎಂದು ಗೊತ್ತಾಗಿಲ್ಲ ಈ ಬಗ್ಗೆ ತನಿಖೆ ನಡೆಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *