Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕಳಪೆ ಗುಣಮಟ್ಟದ ಉತ್ಪನ್ನ ದಂಧೆ: ಫಸ್ಟ್‌ಕ್ರೈನ ಗೋದಾಮಿನಲ್ಲಿ BIS ಅಧಿಕಾರಿಗಳ ದಾಳಿ

Spread the love

ಬೆಂಗಳೂರು :ಭಾರತೀಯ ಮಾನದಂಡಗಳ ಬ್ಯೂರೋದ ಬೆಂಗಳೂರು ಶಾಖಾ ಕಚೇರಿಯ ಅಧಿಕಾರಿಗಳು ಬ್ರೈನ್‌ಬೀಸ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ನಿರ್ವಹಿಸುವ ಫಸ್ಟ್‌ಕ್ರೈನ ಗೋದಾಮಿನಲ್ಲಿ ಕಳಪೆ ಗುಣಮಟ್ಟದ ಉತ್ಪನ್ನಗಳನ್ನು ಸಂಗ್ರಹಿಸಿ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪದ ಮೇಲೆ ದಾಳಿ ನಡೆಸಿದ್ದಾರೆ.

ದಾಳಿಯ ಸಮಯದಲ್ಲಿ, ಹಲವಾರು ಉತ್ಪನ್ನ ಮಾದರಿಗಳನ್ನು ಮಾನ್ಯ ಬಿಐಎಸ್ ಪರವಾನಗಿಗಳಿಲ್ಲದೆ ಸಂಗ್ರಹಿಸಿ ಮಾರಾಟ ಮಾಡಲಾಗುತ್ತಿದೆ ಎಂದು ಬಿಐಎಸ್ ಪ್ರಕಟಣೆ ತಿಳಿಸಿದೆ. ಈ ಉತ್ಪನ್ನಗಳು ಐಎಸ್‌ಐ ಮಾರ್ಕ್ ನ್ನು ದುರುಪಯೋಗಪಡಿಸಿಕೊಳ್ಳುತ್ತಿವೆ ಮತ್ತು ಬಿಐಎಸ್ ಪರವಾನಗಿ ಅಡಿಯಲ್ಲಿ ನಿಗದಿಪಡಿಸಿದ ಷರತ್ತುಗಳನ್ನು ಉಲ್ಲಂಘಿಸುತ್ತಿವೆ ಎಂದು ಕಂಡುಬಂದಿದೆ. ಈ ಉತ್ಪನ್ನಗಳಲ್ಲಿ ಹಲವು ಸಂಬಂಧಿತ ಗುಣಮಟ್ಟ ನಿಯಂತ್ರಣ ಆದೇಶಗಳ ಅಡಿಯಲ್ಲಿ BIS ನಿಂದ ಕಡ್ಡಾಯ ಪ್ರಮಾಣೀಕರಣಕ್ಕೆ ಒಳಪಟ್ಟಿರುವ ವರ್ಗಗಳ ಅಡಿಯಲ್ಲಿ ಬರುತ್ತವೆ ಎಂದು BIS ಪ್ರಕಟಣೆ ತಿಳಿಸಿದೆ.


Spread the love
Share:

administrator

Leave a Reply

Your email address will not be published. Required fields are marked *