ಯಾದಗಿರಿಯಲ್ಲಿ ಲೋಕಾಯುಕ್ತ ದಾಳಿ: 50 ಸಾವಿರ ಲಂಚ ಪಡೆಯುವಾಗ ತಹಶೀಲ್ದಾರ್ ಕಚೇರಿ ಕೇಸ್ ವರ್ಕರ್ ರೆಡ್‌ಹ್ಯಾಂಡ್ ಬಂಧನ!

ಯಾದಗಿರಿ : ವಡಗೇರಾ ತಹಶೀಲ್ದಾರ್ ಭೂ ವ್ಯಾಜ್ಯದಲ್ಲಿ ಬಾಕಿಯಿದ್ದ ವಿವಾದ ಪ್ರಕರಣವನ್ನು ವಿಲೇವಾರಿ ಮಾಡಿಕೊಡಲು ಲಂಚದ ಬೇಡಿಕೆ ಇಟ್ಟು ಹಣ ಪಡೆಯುತ್ತಿದ್ದ ಸರ್ಕಾರಿ ನೌಕರರೊಬ್ಬರ ಮೇಲೆ ದಾಳಿಯಿಟ್ಟ ಲೋಕಾಯುಕ್ತ ಅಧಿಕಾರಿ ಆತನನ್ನು ತಮ್ಮ ವಶಕ್ಕೆ ಪಡೆದ ಘಟನೆ ನಗರದಲ್ಲಿ ಶುಕ್ರವಾರ ಸಂಜೆ ನಡೆದಿದೆ.

ವಡಗೇರಾ ತಹಶೀಲ್ದಾರ ಕಚೇರಿಯ ಕೇಸ್ ವರ್ಕರ್ ಪ್ರವೀಣಕುಮಾರ ಎಂಬುವವರು50 ಸಾವಿರ ರೂ. ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದಾರೆ.
ದೂರುದಾರ ವಡಗೇರಾದ ಮಹ್ಮದ್ ಸಲಿಂ ಮುಲ್ಲಾ ಎಂಬುವವರು ನೀಡಿದ ದೂರಿನ ಮೇಲೆ ಈ ದಾಳಿ ನಡೆದಿದ್ದು,
ಲೊಕಾಯುಕ್ತ ಎಸ್ ಪಿ ಉಮೇಶ ಮಾರ್ಗದರ್ಶನದಲ್ಲಿ ಡಿವೈಎಸ್ ಪಿ ಜೆ.ಎಚ್ ಇನಾಂದಾರ್, ಪಿಐ ಸಿದ್ದರಾಯ ಬಳೂರ್ಗಿ ಮತ್ತು ಸಿಬ್ಬಂದಿ ದಾಳಿ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
