ಭೂಮಿಯ ಮಧ್ಯಭಾಗದಲ್ಲಿ ಅತ್ಯಧಿಕ ಚಿನ್ನವಿರುವ ಜಾಗ ಪತ್ತೆ

ಜರ್ಮನಿ:ವಿಜ್ಞಾನಿಗಳು ಭೂಮಿಯ ಮಧ್ಯಭಾಗದಲ್ಲಿ ಅಮೂಲ್ಯ ಲೋಹಗಳನ್ನು ಪತ್ತೆಹಚ್ಚಿದ್ದಾರೆ. ರುಥೇನಿಯಮ್-100 ಐಸೊಟೋಪ್ನ ಉಪಸ್ಥಿತಿಯು ಈ ಲೋಹಗಳು ಮ್ಯಾಂಟಲ್ ಪ್ಲೂಮ್ಗಳ ಮೂಲಕ ಮೇಲ್ಮೈಗೆ ಬರುತ್ತಿವೆ ಎಂದು ಸೂಚಿಸುತ್ತದೆ.
ಜರ್ಮನಿಯ ವಿಜ್ಞಾನಿಗಳು ಜಗತ್ತು ಅಚ್ಚರಿಪಡುವಂತಹ ಅವಿಷ್ಕಾರವನ್ನು ಪತ್ತೆ ಮಾಡಿದ್ದಾರೆ.
ಅತ್ಯಧಿನ ಬೆಲೆಬಾಳುವ ಲೋಹಗಳಿರುವ ಪ್ರದೇಶವನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಜರ್ಮನಿಯ ಗೊಟ್ಟಿಂಗನ್ ವಿಶ್ವವಿದ್ಯಾಲಯದ ಭೂರಸಾಯನಶಾಸ್ತ್ರಜ್ಞರ ತಂಡ ಈ ಅವಿಷ್ಕಾರವನ್ನು ಮಾಡಿದೆ.
ಜ್ವಾಲಾಮುಖಿ ಶಿಲೆಗಳಲ್ಲಿ ರುಥೇನಿಯಮ್ -100 ಎಂಬ ಲೋಹವನ್ನು ಜರ್ಮನಿಯ ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಅಮೂಲ್ಯ ಲೋಹಗಳಿರುವ ಭಾಗವನ್ನು ಪತ್ತೆ ಮಾಡಲಾಗಿದೆ. ಈ ಅಮೂಲ್ಯ ಲೋಹಗಳು ಮ್ಯಾಂಟಲ್ ಪ್ಲೂಮ್ಗಳ ಸಹಾಯದಿಂದ ಮೇಲ್ಮೈಗೆ ಬರುತ್ತಿವೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ.
ಹವಾಯಿಯನ್ ದ್ವೀಪಗಳ ಜ್ವಾಲಾಮುಖಿ ಬಂಡೆಗಳಲ್ಲಿ ಅತಿ ಹೆಚ್ಚಿನ ಪ್ರಮಾಣದ ರುಥೇನಿಯಮ್-100 ಐಸೊಟೋಪ್ ಇರೋದನ್ನು ವಿಜ್ಞಾನಿಗಳು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ವರದಿಯಾಗಿದೆ. ರುಥೇನಿಯಮ್-100 ಐಸೊಟೋಪ್ ಭೂಮಿಯ ಮಧ್ಯ ಭಾಗದಲ್ಲಿ ಕಂಡು ಬರುತ್ತದೆ.
ಭೂಮಿಯ ಮೇಲ್ಪದರಿನಲ್ಲಿ ರುಥೇನಿಯಮ್-100 ಐಸೊಟೋಪ್ ಕಂಡು ಬರಲ್ಲ. ಆದರೆ ಭೂ ಭಾಗದಲ್ಲಿ ಹೆಚ್ಚಿನ ಒತ್ತಡದಿಂದಾಗಿ ರುಥೇನಿಯಮ್-100 ಐಸೊಟೋಪ್ ಹೊರ ತೆಗೆದುಕೊಂಡು ಬರುವುದು ಕಠಿಣ ಕೆಲಸ. ಆದ್ರೆ ಈ ಕೆಲಸವನ್ನು ಮ್ಯಾಂಟಲ್ ಪ್ಲೂಮ್ ಮಾಡುತ್ತೆ ಎಂದು ವಿಜ್ಞಾನಿಗಳು ಭರವಸೆ ವ್ಯಕ್ತಪಡಿಸುತ್ತಿದ್ದಾರೆ.
ಭೂಮಿಯ ಮಧ್ಯಭಾಗ ಮತ್ತು ಮೆಟಲ್ ನಡುವಿನ ಭಾಗದಿಂದ ಉಂಟಾಗುವ ಅತಿಯಾದ ಬಿಸಿಯಾದ ಬಂಡೆಯ ಸ್ತಂಭಗಳನ್ನು ಮ್ಯಾಂಟಲ್ ಫ್ಲೋಮ್ ಎಂದು ಕರೆಯಲಾಗುತ್ತದೆ. ಈ ಜ್ವಾಲಾಮುಖಿಗಳು ದ್ವೀಪಗಳಂತೆ ನಿರ್ಮಾಣವಾಗಿರುತ್ತವೆ. ಇಲ್ಲಿಯ ತೀವ್ರವಾದ ಶಾಖ ಮತ್ತು ಒತ್ತಡವನ್ನು ಬಳಸಿಕೊಂಡು ಕೆಳ ಭಾಗದಲ್ಲಿರುವ ರುಥೇನಿಯಮ್-100 ಐಸೊಟೋಪ್ ಮೇಲ್ಭಾಗಕ್ಕೆ ತಳ್ಳಲಾಗುತ್ತದೆ ಎಂಬ ವಿಷಯ ವಿಜ್ಞಾನಿಗಳ ಸಂಶೋಧನೆಯಲ್ಲಿ ಕಂಡು ಬಂದಿದೆ.
ಈ ಮ್ಯಾಂಟಲ್ ಪ್ಲೂಮ್ಗಳು ಚಿನ್ನ, ಪ್ಲಾಟಿನಂ, ಇರಿಡಿಯಮ್ ಮತ್ತು ರುಥೇನಿಯಮ್ನಂತಹ ಮಧ್ಯಭಾಗದಲ್ಲಿ ಸಿಕ್ಕಿಹಾಕಿಕೊಂಡಿರುವ ಲೋಹಗಳನ್ನು ಹೊರಪದರಕ್ಕೆ ತರುತ್ತವೆ. ರುಥೇನಿಯಮ್-100 ರ ಉಪಸ್ಥಿತಿಯು ಭೂರಾಸಾಯನಿಕ ಲಕ್ಷಣವಾಗಿದ್ದು, ಇದು ಪ್ರಾಥಮಿಕವಾಗಿ ಭೂಮಿಯ ಮಧ್ಯಭಾಗದಲ್ಲಿ ಕಂಡುಬರುತ್ತದೆ.
ಈ ಸಂಶೋಧನೆಯ ಪ್ರಮುಖ ವಿಜ್ಞಾನಿಯಾಗಿರುವ ಡಾ. ನಿಲ್ಸ್ ಮೆಸ್ಲಿಂಗ್, ನಾವು ನಿಜವಾಗಿಯೂ ಚಿನ್ನವನ್ನುನ ಕಂಡು ಹಿಡಿದಿದ್ದೇವೆ. ನಮ್ಮ ಈ ಸಾಕ್ಷ್ಯಗಳು ಲೋಹಗಳನ್ನು ಮಧ್ಯಭಾಗದಿಂದ ಮೇಲ್ಮೈ ಕಡೆಗೆ ಮರುಬಳಕೆ ಮಾಡಲಾಗುತ್ತಿರೋದನ್ನು ದೃಢಪಡಿಸುತ್ತವೆ ಎಂದು ಹೇಳಿದ್ದಾರೆ.
ಸುಮಾರು 4.5 ಶತಕೋಟಿ ವರ್ಷಗಳ ಹಿಂದೆ ಭೂಮಿಯ ಮಧ್ಯಭಾಗ ರಚನೆಯಾಗಿದೆ. ಈ ಭಾಗದಲ್ಲಿಯೇ ಭೂಮಿಯ ಶೇ.99.999% ಚಿನ್ನ ಮತ್ತು ಸೈಡೆರೊಫೈಲ್ ಲೋಹವಿದೆ. ಭೂಮಿಯ ಮೇಲ್ಭಾಗದಿಂದ ಸುಮಾರು ನೂರಾರು ಕಿಲೋಮೀಟರ್ ದಪ್ಪವಾದ ಬಂಡೆಗಳಿಂದ ಆವೃತವಾಗಿದೆ. ಇಲ್ಲಿಯವರೆಗೆ ಈ ಪ್ರದೇಶವನ್ನು ತಲುಪಲು ಅಸಾಧ್ಯವೆಂದು ಪರಿಗಣಿಸಲಾಗಿತ್ತು. ಆದ್ರೆ ರುಥೇನಿಯಮ್-100 ಆವಿಷ್ಕಾರವು ಹೊಸ ಮಾರ್ಗ ತೆರೆದಿಟ್ಟಿದೆ.