ಲಿವ್-ಇನ್ ಗೆಳತಿಯ ಕೊಲೆ: ವೇಶ್ಯಾವಾಟಿಗೆ ಒಪ್ಪದಿದ್ದಕ್ಕೆ ಗೆಳೆಯನಿಂದ ಚಾಕು ಹಲ್ಲೆ

ಆಂಧ್ರಪ್ರದೇಶ: ವೇಶ್ಯಾವಾಟಿಕೆ ಮಾಡಲು ಲಿವ್-ಇನ್ ಸಂಗಾತಿ ಒಪ್ಪದಿದ್ದಕ್ಕೆ ಗೆಳೆಯನೇ ಆಕೆಯನ್ನು ಕೊಲೆ ಮಾಡಿರುವ ಘಟನೆ ಆಂದ್ರಪ್ರದೇಶದಲ್ಲಿ ನಡೆದಿದೆ. ಆತನನ್ನು ನಂಬಿ ಬಂದಿದ್ದ ಗೆಳತಿಯನ್ನು ವೇಶ್ಯಾವಾಟಿಕೆ ದಂಧೆಗೆ ತಳ್ಳಲು ಆತ ತುಂಬಾ ಪ್ರಯತ್ನಿಸಿದ್ದ. ಆದರೆ ಮಹಿಳೆ ಒಪ್ಪದ ಕಾರಣ ಆತ ಆಕೆಯನ್ನು ಕೊಲೆ ಮಾಡಿದ್ದಾನೆ.

ರಾಜೋಳು ಮಂಡಲ ವ್ಯಾಪ್ತಿಯ ಬಿ ಸವರಂ ಗ್ರಾಮದ ಸಿದ್ಧಾರ್ಥ ನಗರದಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದೆ. ಪುಷ್ಪಾ ಎಂಬಾಕೆ ಮೃತಳು. ಆಕೆಗೆ ಈ ಹಿಂದೆಯೇ ಬೇರೊಬ್ಬರ ಜತೆ ವಿವಾಹವಾಗಿತ್ತು. ಪತಿಯಿಂದ ಬೇರ್ಪಟ್ಟು ಕಳೆದ ಆರು ತಿಂಗಳಿನಿಂದ ಶೇಖ್ ಶಮ್ಮಾ ಜತೆ ವಾಸಿಸುತ್ತಿದ್ದಳು. ಆ ಗ್ರಾಮದಲ್ಲೇ ಮನೆ ಬಾಡಿಗೆಗೆ ಪಡೆದಿದ್ದರು.
ಬುಧವಾರ ರಾತ್ರಿ 10 ಗಂಟೆ ಸುಮಾರಿಗೆ ಶಮ್ಮಾ ಆಕೆಗೆ ವೇಶ್ಯಾವಾಟಿಕೆಯಲ್ಲಿ ತೊಡಗುವಂತೆ ಒತ್ತಾಯಿಸಿದ್ದಾನೆ. ತನ್ನೊಂದಿಗೆ ತಾನು ಹೇಳಿದ್ದ ಜಾಗಕ್ಕೆ ಬರಬೇಕೆಂದು ಕೇಳಿದ್ದಾನೆ ತೀವ್ರ ವಾಗ್ವಾದ ನಡೆದಿದೆ, ಆಕೆ ನಿರಾಕರಿಸಿದ್ದಾಳೆ. ಬಳಿಕ ಆತ ಆಕೆಯ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ, ಆಕೆಯ ಎದೆಯ ಎಡಭಾಗ ಮತ್ತು ಕಾಲಿಗೆ ಇರಿದಿದ್ದಾನೆ.
ಮತ್ತಷ್ಟು ಓದಿ: ಏನೋ ಕಚ್ಚಿದೆ ಎಂದು ಲಿವ್ ಇನ್ ಸಂಗಾತಿಯನ್ನು ಆಸ್ಪತ್ರೆಗೆ ದಾಖಲಿಸಿ ಪರಾರಿಯಾದ ಗೆಳೆಯ, ಆಕೆ ಸಾವು
ಆತನನ್ನು ತಡೆಯಲು ಯತ್ನಿಸಿದ್ದ ಪುಷ್ಪಾ ತಾಯಿ ಹಾಗೂ ಆಕೆಯ ಸಹೋದರನ ಮೇಲೂ ಶಮ್ಮಾ ಹಲ್ಲೆ ನಡೆಸಿದ್ದಾನೆ.ಅತಿಯಾದ ರಕ್ತಸ್ರಾವದಿಂದ ಪುಷ್ಪಾ ಅಲ್ಲೇ ಕೊನೆಯುಸಿರೆಳೆದಿದ್ದಾರೆ. ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಯ ಹುಡುಕಾಟಕ್ಕೆ ತಂಡ ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಲಿವ್-ಇನ್ ಜೋಡಿ ಯೊಂದು ಹುಟ್ಟಿದ ಮರುಕ್ಷಣವೇ ತಮ್ಮ ಶಿಶುಗಳನ್ನು ಕೊಂದು, ಹೂತು ಹಾಕಿರುವುದಾಗಿ ಒಪ್ಪಿಕೊಂಡಿದ್ದು, ಒಂದು ವರ್ಷದ ಬಳಿಕ ಪೊಲೀಸರು ಎರಡು ಶಿಶುಗಳ ಅವಶೇಷಗಳನ್ನು ವಶಪಡಿಸಿಕೊಂಡಿದ್ದಾರೆ. ಕೇರಳದ ತ್ರಿಶೂರ್ ಜಿಲ್ಲೆಯಲ್ಲಿ ನಡೆದಿದೆ. 25 ವರ್ಷದ ಭವಿನ್ ಎಂಬಾತ ತನ್ನ ನವಜಾತ ಶಿಶುಗಳ ಅವಶೇಷಗಳನ್ನು ಹೊತ್ತುಕೊಂಡು ಪುತ್ತುಕ್ಕಾಡ್ ಪೊಲೀಸ್ ಠಾಣೆಗೆ ಬಂದಿದ್ದ.
ತಾನು ಮತ್ತು ತನ್ನ ಲಿವ್ ಇನ್ ಸಂಗಾತಿ ಅನಿಶಾಗೆ ಬೇರೆಬೇರೆ ವರ್ಷದಲ್ಲಿ ಇಬ್ಬರು ಗಂಡು ಶಿಶುಗಳು ಜನಿಸಿದ್ದು, ಹುಟ್ಟಿದ ಕೂಡಲೇ ಕೊಂದು ಸಮಾಧಿ ಮಾಡಿದ್ದಾಗಿ ಒಪ್ಪಿಕೊಂಡಿದ್ದು, ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ. ಭವಿನ್ ಸುಮಾರು 12.30ರ ಸುಮಾರಿಗೆ ಪೊಲೀಸ್ ಠಾಣೆಗೆ ಬಂದು ಶಿಶುಗಳ ಅವಶೇಷಗಳೆಂದು ಹೇಳಿಕೊಂಡ ಪ್ಯಾಕೆಟ್ ಅನ್ನು ಹಸ್ತಾಂತರಿಸಿದ್ದಾನೆ. ಘಟನೆಗಳ ವಿವರಗಳನ್ನು ಸ್ಟೇಷನ್ ಹೌಸ್ ಅಧಿಕಾರಿ ಮಹೇಂದ್ರ ಸಿಂಹನ್ ಅವರೊಂದಿಗೆ ಹಂಚಿಕೊಂಡರು. ಅವರ ಹೇಳಿಕೆಯ ಆಧಾರದ ಮೇಲೆ, ಅಧಿಕಾರಿಗಳು ಅನಿಶಾ ಅವರನ್ನು ಸಹ ಬಂಧಿಸಿದರು.
