ಮದ್ಯ ಮಾರಾಟ ಬಂದ್ ಎಚ್ಚರಿಕೆ: ‘ಆಮದು ಇಲ್ಲ, ಮಾರಾಟ ಇಲ್ಲ’ ಎಂದು ವೈನ್ ಶಾಪ್ ಮಾಲೀಕರ ಘೋಷಣೆ

ಬೆಂಗಳೂರು: ಕರ್ನಾಟಕದಲ್ಲಿ ಮದ್ಯದ ಬೆಲೆ ಸತತವಾಗಿ ಏರಿಕೆಯಾಗುತ್ತಿದೆ. ಕರ್ನಾಟಕ ಇದೀಗ ಮದ್ಯ ವಿಚಾರದಲ್ಲಿ ದುಬಾರಿಯಾಗುತ್ತಿದೆ. ಇದರ ನಡುವೆ ವೈನ್ ಶಾಪ್ ಸೇರಿದಂತೆ ಅಬಕಾರಿ ಸಂಬಂಧಿತ ಲೈಸೆನ್ಸ್ ಶುಲ್ಕವನ್ನು ಗಣನೀಯವಾಗಿ ಏರಿಕೆ ಮಾಡಲಾಗಿದೆ. ಕಳದೆರಡು ವರ್ಷದಿಂದ ಮದ್ಯದ ಮೇಲಿನ ಬೆಲೆ ಏರಿಕೆ ಹಾಗೂ ಲೈಸೆನ್ಸ್ ಶುಲ್ಕ ಏರಿಕೆ ವಿರೋಧಿಸಿ ಕರ್ನಾಟಕ ಮದ್ಯ ಮಾರಾಟಗಾರರು ಮೇ.21ಕ್ಕೆ ರಾಜ್ಯಾದ್ಯಂತ ಮದ್ಯ ಮಾರಾಟ ಬಂದ್ ಮಾಡುತ್ತಿದ್ದಾರೆ.

ಪ್ರತಿಭಟನೆ ಕಾರಣದಿಂದ ಮೇ.21ರಂದು ಕರ್ನಾಟಕದಲ್ಲಿ ಮದ್ಯ ಲಭ್ಯವಿಲ್ಲ.
ಮೇ.20 ರಿಂದ ಸರ್ಕಾಕರದ ವಿರುದ್ಧ ಮದ್ಯ ಮಾರಾಟಗಾರರು ಪ್ರತಿಭಟನೆ ಆರಂಭಿಸುತ್ತಿದ್ದಾರೆ. ಮೇ.21ರಂದು ಮಾರಾಟ ಬಂದ್ ಮಾಡಿ ಪ್ರತಿಭಟನೆ ನಡೆಸಲಿದ್ದಾರೆ. ಮೇ.20 ರಿಂದ ಮದ್ಯ ಮಾರಾಟಗಾರರು, ವೈನ್ ಶಾಪ್ ಮಾಲೀಕರು ಮದ್ಯ ಖರೀದಿ ನಿಲ್ಲಿಸಲು ನಿರ್ಧರಿಸಿದ್ದಾರೆ. ಕರ್ನಾಟಕ ವೈನ್ ಮರ್ಚೆಂಟ್ ಅಸೋಸಿಯೇಶನ್, ನ್ಯಾಷನಲ್ ರೆಸ್ಟೋರೆಂಟ್ ಅಸೋಸಿಯೇಶನ್, ಕರ್ನಾಟಕ ಬ್ರೆವರಿ ಆಯಂಡ್ ಡಿಸ್ಟಿಲ್ಲರಿ ಅಸೋಸಿಯೇಶನ್ ಪ್ರತಿಭಟನೆ ನಡೆಸುತ್ತಿದೆ. ಹೀಗಾಗಿ ಈ ಪ್ರತಿಭಟನೆ ತೀವ್ರಗೊಳ್ಳುವ ಸಾಧ್ಯತೆ ಹೆಚ್ಚಿದೆ.
ಲೈಸೆನ್ಸ್ ಶುಲ್ಕ 90 ಲಕ್ಷ ರೂಪಾಯಿಗೆ ಏರಿಕೆ
ಮದ್ಯ ಮಾರಾಟಗಾರರು ಒಂದೆಡೆ ಮದ್ಯದ ಬೆಲೆ ಏರಿಕೆಯಿಂದ ಹೈರಾಣಾಗಿದ್ದರೆ, ಮತ್ತೊಂದೆಡೆ ಲೈಸೆನ್ಸ್ ಶುಲ್ಕವನ್ನು ಭಾರಿ ಪ್ರಮಾಣಧಲ್ಲಿ ಏರಿಕೆ ಮಾಡುವ ಕರಡು ಅಧಿಸೂಚನೆ ಹೊರಡಿಸಲಾಗಿದೆ. ಬ್ರಿವರಿಸ್ ವಾರ್ಷಿಕ ಲೈಸೆನ್ಸ್ ದರವನ್ನು 27 ಲಕ್ಷ ರೂಪಾಯಿಂದ 54 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿದೆ. ಡಿಸ್ಟಲ್ಲರಿಸ್ ಹಾಗೂ ವೇರ್‌ಹೌಸ್ ವಾರ್ಷಿಕ ಶುಲ್ಕವನ್ನು 45 ಲಕ್ಷ ರೂಪಾಯಿಯಿಂದ 90 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿದೆ. ಹೊಸ ಶುಲ್ಕ ನೀತಿ ಜುಲೈ 1 ರಿಂದ ಜಾರಿಗೆ ಬರುತ್ತಿದೆ. ಈ ಎಲ್ಲಾ ಬೆಲೆ ಏರಿಕೆ ವಿರುದ್ದ ಕರ್ನಾಟಕದ ಮದ್ಯ ಮಾರಾಟಗಾರರು, ಮದ್ಯ ಶಾಪ್ ಮಾಲೀಕರು ಪ್ರತಿಭಟನೆ ನಡೆಸುತ್ತಿದ್ದಾರೆ.
ಬೆಲೆ ಏರಿಕೆಯಿಂದ ಮಾರಾಟ ಕುಸಿತ
ಕರ್ನಾಟಕ ಸರ್ಕಾರ ಮದ್ಯದ ಬೆಲೆ ಏರಿಕೆ ಮಾಡುತ್ತಿದೆ. ಇದರಿಂದ ಕರ್ನಾಟದಲ್ಲಿ ಮದ್ಯ ದುಬಾರಿಯಾಗುತ್ತಿದೆ. ಕಳೆದ ಒಂದು ವರ್ಷದಲ್ಲಿ ಮದ್ಯದ ಬೆಲೆ ಸತತವಾಗಿ ಏರಿಕೆಯಾಗಿದೆ. ಇದರಿಂದ ಮಾರಾಟದಲ್ಲಿ ಭಾರಿ ಕುಸಿತ ಕಾಣುತ್ತಿದೆ ಎಂದು ಮದ್ಯ ಮಾರಾಟಗಾರರು ಅವಲತ್ತುಕೊಂಡಿದ್ದಾರೆ. ಮಾರಾಟ ಕುಸಿತದಿಂದ ನಿರೀಕ್ಷಿತ ಆದಾಯ ಬರುತ್ತಿಲ್ಲ. ಇದರ ಜೊತಗೆ ಸರ್ಕಾರ ಲೈಸೆನ್ಸ್ ವಾರ್ಷಿಕ ಶುಲ್ಕ ಹೆಚ್ಚಿಸಿದೆ. ಇದು ಮಾರಾಟಗಾರರಿಗೆ ಅತ್ಯಂತ ಹೊರೆಯಾಗಿದೆ. ಹೀಗಾಗಿ ಪ್ರತಿಭಟನೆ ಅನಿವಾರ್ಯವಾಗಿದೆ ಎಂದಿದ್ದಾರೆ.
ಶುಲ್ಕ ಹೆಚ್ಚಳದಿಂದ ಬೆಂಗಳೂರಿನ 40 ಪಬ್ ಕಳೆದ ವರ್ಷ ಮುಚ್ಚಿದೆ. ಇದೇ ರೀತಿ ಮುಂದುವರಿದೆ ಕರ್ನಾಟಕದಲ್ಲಿ ಪಬ್, ಬಾರ್ ನಡೆಸುವುದು ಕಷ್ಟವಾಗಲಿದೆ. ಉದ್ಯಮಕ್ಕೆ ತೀವ್ರ ಹೊಡೆತ ಬೀಳಲಿದೆ. ಇದನ್ನೇ ನಂಬಿಕೊಂಡು ಹಲವರು ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ, ಕೆಲಸ ಮಾಡುತ್ತಿದ್ದಾರೆ, ಎಲ್ಲಾ ಕುಟುಬಂಗಳು ಬೀದಿ ಬೀಳುತ್ತದೆ. ಹೀಗಾಗಿ ಶುಲ್ಕ ಏರಿಕೆ ಅಧಿಸೂಚನೆ ವಾಪಸ್ ಪಡೆಯಬೇಕು, ಇತ್ತ ಮದ್ಯದ ಬೆಲೆ ಏರಿಕೆ ಮಾಡದಂತೆ ಬೇಡಿಕೆ ಮುಂದಿಟ್ಟು ಪ್ರತಿಭಟನೆ ನಡೆಯಲಿದೆ.
ಪಬ್ ಆದಾಯ ಎಲ್ಲವೂ ಶುಲ್ಕ ಪಾವತಿಗೆ ಹೋಗುತ್ತಿದೆ
ವಾರ್ಷಿಕ ಶುಲ್ಕ ಡಬಲ್ ಮಾಡಲಾಗಿದೆ. 45 ಲಕ್ಷ ರೂಪಾಯಿಂದ 90 ಲಕ್ಷ ರೂಪಾಯಿ, 27 ಲಕ್ಷ ರೂಪಾಯಿಯಿಂದ 54 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿದೆ. ಇದರಿಂದ ಪಬ್‌ನಲ್ಲಿ ಬರವು ಆದಾಯ ಶುಲ್ಕ ಪಾವತಿಗೆ ಸಾಕಾಗುವುದಿಲ್ಲ. ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಕೋರಮಂಗಲ ಪಬ್ ಮಾಲೀಕ ಹೇಳಿದ್ದಾರೆ.