Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಅಬಕಾರಿ ಹಗರಣ: ನ್ಯಾಯಾಲಯದಿಂದ ಅರವಿಂದ್ ಕೇಜ್ರಿವಾಲ್‌ಗೆ ಕ್ಲೀನ್ ಚಿಟ್; ಬಿಕ್ಕಿ ಬಿಕ್ಕಿ ಅತ್ತ ಮಾಜಿ ಸಿಎಂ

Spread the love

ಹೊಸದಿಲ್ಲಿ: ದಿಲ್ಲಿ ಅಬಕಾರಿ ನೀತಿ ಪ್ರಕರಣದಲ್ಲಿ ನ್ಯಾಯಾಲಯ ಖುಲಾಸೆಗೊಳಿಸಿದ ಬೆನ್ನಲ್ಲೆ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರವಾಲ್ ಅವರು ಶುಕ್ರವಾರ ಮಾಧ್ಯಮಗಳ ಮುಂದೆ “ನಾನು ಭ್ರಷ್ಟನಲ್ಲ” ಎಂದು ಭಾವುಕರಾದರು.
“ಕಳೆದ ಕೆಲವು ವರ್ಷಗಳಿಂದ ದಿಲ್ಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ನಮ್ಮ ಮೇಲೆ ಆರೋಪ ಮಾಡುತ್ತಿದೆ. ಇಂದು ನ್ಯಾಯಾಲಯವು ನಮ್ಮವಿರುದ್ಧ ಹೊರಿಸಲಾದ ಎಲ್ಲಾ ಆರೋಪಗಳನ್ನು ತಿರಸ್ಕರಿಸಿದೆ. ಸತ್ಯ ಗೆಲ್ಲುತ್ತದೆ ಎಂದು ನಾವು ಯಾವಾಗಲೂ ಹೇಳುತ್ತಿದ್ದೆವು. ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಆಪ್ ವಿರುದ್ಧ ಪಿತೂರಿ ನಡೆಸಿ ಪಕ್ಷದ ಐವರು ದೊಡ್ಡ ನಾಯಕರನ್ನು ಬಂಧಿಸಿದರು. ಹಾಲಿ ಮುಖ್ಯಮಂತ್ರಿಯನ್ನು ಕೂಡ ಬಂಧಿಸಲಾಯಿತು. ನಮ್ಮ ಮೇಲೆ ಆರೋಪ ಹೊರಿಸಲಾಯಿತು ಮತ್ತು ಪ್ರತಿ ಚಾನೆಲ್‌ನಲ್ಲಿಯೂ ಭ್ರಷ್ಟ ಎಂದು ಕರೆಯಲಾಯಿತು. ಇಂದು ಕೇಜ್ರವಾಲ್, ಮನೀಶ್ ಸಿಸೋಡಿಯಾ ಮತ್ತು ಆಪ್ ಪ್ರಾಮಾಣಿಕರು ಎಂದು ನ್ಯಾಯಾಲಯ ಹೇಳಿದೆ” ಎಂದು ಕಣ್ಣೀರಿಡುತ್ತಾ ಅರವಿಂದ್ ಕೇಜ್ರವಾಲ್ ಹೇಳಿದ್ದಾರೆ.

ದಿಲ್ಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿ ದಿಲ್ಲಿ ನ್ಯಾಯಾಲಯದ ವಿಶೇಷ ನ್ಯಾಯಾಧೀಶರಾದ ಜಿತೇಂದ್ರ ಸಿಂಗ್‌ ಅವರು ಕೇಜ್ರವಾಲ್, ಸಿಸೋಡಿಯಾ ಮತ್ತು ಇತರ 23 ಮಂದಿಯನ್ನು ಸಾಕ್ಷ್ಯಾಧಾರಗಳ ಕೊರತೆ ಉಲೇಖಿಸಿ ಖುಲಾಸೆಗೊಳಿಸಿದಾರೆ.


Spread the love
Share:

administrator

Leave a Reply

Your email address will not be published. Required fields are marked *