ಬಸ್ ನಿಲ್ದಾಣದಲ್ಲಿ ರೂಮ್ ಮಾಡ್ತೀನಿ ಬಾ ಎಂದವನಿಗೆ ಚಪ್ಪಲಿ ಯಲ್ಲೇ ಉತ್ತರ ಕೊಟ್ಟ ಮಹಿಳೆ

ಶಿರಸಿ ಬಸ್ ನಿಲ್ದಾಣದಲ್ಲಿ ಮಹಿಳೆಗೆ ಅಸಭ್ಯವಾಗಿ ವರ್ತಿಸಿದ ವ್ಯಕ್ತಿಗೆ ಚಪ್ಪಲಿ ಏಟು. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮಹಿಳೆಯ ಧೈರ್ಯವನ್ನು ಶ್ಲಾಘಿಸಲಾಗುತ್ತಿದೆ. ಮಹಿಳೆಯೊಂದಿಗೆ ಅಸಭ್ಯವಾಗಿ ನಡೆದುಕೊಂಡ ವ್ಯಕ್ತಿಯ ಪರಿಸ್ಥಿತಿ ಏನಾಗಿದೆ ನೋಡಿ..
ಮದ್ಯದ ನಶೆಯಲ್ಲಿ ತೇಲುತ್ತಿದ್ದ ವ್ಯಕ್ತಿಯೊಬ್ಬ, ಬಸ್‌ಗಾಗಿ ಕಾಯುತ್ತಿದ್ದ ಮಹಿಳೆಯೊಂದರ ಬಳಿ ಹೋಗಿ ಅನಾಚಾರವಾಗಿ ವರ್ತಿಸಿದ ಘಟನೆ ಸಾರ್ವಜನಿಕ ಅಸಹ್ಯಕ್ಕೆ ಕಾರಣವಾಗಿದೆ. ಯಕ್ಕಂಬಿ ಗ್ರಾಮದ ದೀಪಾ ಎಂಬ ಮಹಿಳೆ, ಬಸ್ ನಿರೀಕ್ಷಿಸುತ್ತಿದ್ದ ವೇಳೆ ಬಂದ ವ್ಯಕ್ತಿ ‘ರೂಮ್ ಮಾಡ್ತೀನಿ ಬಾ’ ಎಂಬ ಕೀಳಮಟ್ಟದ ಶಬ್ದಗಳಿಂದ ಕೆಣಕಿದ್ದು, ಕೂಡಲೇ ಕೋಪಗೊಂಡ ದೀಪಾ ಚಪ್ಪಲಿಯಿಂದ ಆತನನ್ನು ಚಪ್ಪಲಿಯಿಂದ ಥಳಿಸಿದ್ದು, ಕೆನ್ನೆಗೆ ಹೊಡೆದು ನಶೆ ಇಳಿಸಿರುವ ದೃಶ್ಯ ಹರಿದಾಡುತ್ತಿದೆ.
ಇನ್ನು ಬಸ್ ನಿಲ್ದಾಣದಲ್ಲಿದ್ದ ಇತರ ಪ್ರಯಾಣಿಕರು ಕೂಡ ಮಹಿಳೆಯ ಬೆಂಬಲಕ್ಕೆ ನಿಂತಿದ್ದು, ಹಗಲು ಹೊತ್ತಿನಲ್ಲಿಯೇ ಸಾರ್ವಜನಿಕವಾಗಿ ಮಹಿಳೆಯೊಬ್ಬರನ್ನು ಕೆಣಕಲು ಯತ್ನಿಸಿದ ವ್ಯಕ್ತಿಯ ನಡೆಗೆ ಎಲ್ಲರೂ ಕೆಂಡಾಮಂಡಲವಾಗಿದ್ದಾರೆ. ಸ್ಥಳೀಯ ಮಾಹಿತಿ ಪ್ರಕಾರ, ಈ ವ್ಯಕ್ತಿ ಹಿಂದೆಯೂ ಇಂತಹ ಅನಾಚಾರಗಳಲ್ಲಿ ತೊಡಗಿದ್ದು, ಹಲವಾರು ಬಾರಿ ಮಹಿಳೆಯರನ್ನು ಕೆಣಕಿದ್ದಾನೆ ಎಂಬ ಆರೋಪಗಳಿವೆ. ಈತನಿಗೆ ಪೊಲೀಸರು ಸರಿಯಾಗಿ ಬುದ್ಧಿ ಕಲಿಸಬೇಕು ಎಂದು ಅಲ್ಲಿದ್ದ ಮಹಿಳೆಯರು ಆಗ್ರಹ ಮಾಡಿದ್ದಾರೆ.
ಇಂಥವರಿಗೆ ಗಂಭೀರ ಶಿಕ್ಷೆಯನ್ನು ನೀಡಬೇಕು. ಮನೆಯಲ್ಲಿ ಹೆಂಡತಿ ಪಕ್ಕದಲ್ಲಿ ಮಲಗುವಾಗಲೂ ಈತನಿಗೆ ಭಯ ಉಂಟಾಗುವಂತೆ ಮಾಡಬೇಕು ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ಸಮಾಜದಲ್ಲಿ ಮಹಿಳೆಯರ ಕುರಿತಾಗಿ ಕೆಟ್ಟದಾಗಿ ಆಲೋಚನೆ ಮಾಡುವುದನ್ನು ಬುಡಸಮೇತ ಕಿತ್ತೆಸೆಲು ಇಂತಹ ಘಟನೆಗಳ ವಿರುದ್ಧ ಮಹಿಳೆಯರು ಪ್ರತಿಭಟಿಸುವಂತಹ ವಿಡಿಯೋಗಳು ವೈರಲ್ ಆಗಬೇಕು ಎಂದು ನೆಟ್ಟಿಗರು ತಿಳಿಸಿದ್ದಾರೆ.

