ಸಂಸದನಿಗೆ ಹೈಕೋರ್ಟ್ನಿಂದ ಪಾಠ: ನಾಲ್ಕು ಮದುವೆಯಾದ ಸಮಾಜವಾದಿ ಪಾರ್ಟಿಯ ಮೊಹಿಬುಲ್ಲಾ ನದ್ವಿಗೆ ಜೀವನಾಂಶ ಪಾವತಿಗೆ ಆದೇಶ

ಲಖನೌ :ಒಂದಲ್ಲ ಎರಡಲ್ಲ, ಬರೋಬ್ಬರಿ ನಾಲ್ಕು ಮದುವೆ. ನಾಲ್ಕನೆ ಪತ್ನಿಯನ್ನೂ ಮನೆಗೆ ಕಳುಹಿಸಿ ತಿರುಗಿ ನೋಡದ ಸಂಸದನಿಗೆ ಹೈಕೋರ್ಟ್ ಪಾಠ ಕಲಿಸಿದೆ. ಈತ ಸಾಮಾನ್ಯ ವ್ಯಕ್ತಿಯಲ್ಲ, ಉತ್ತರ ಪ್ರದೇಶದ ರಾಂಪುರ ಕ್ಷೇತ್ರದ ಸಮಾಜವಾದಿ ಪಾರ್ಟಿ ಸಂಸದ ಮೊಹಿಬುಲ್ಲಾ ನದ್ವಿ. ನಾಲ್ಕನೇ ಪತ್ನಿ ಮದುವೆಯಾಗಿ ಇವರಿಗೆ ಒಬ್ಬ ಮಗ ಇದ್ದಾನೆ. ಈ ಹಿಂದೆ ಮುದುವೆಯಾಗಿರುವ ಪತ್ನಿಯರಲ್ಲೂ ಮಕ್ಕಳಿದ್ದಾರೆ. ನಾಲ್ಕನೇ ಪತ್ನಿ ಸಾಕು ಎನಿಸಿದಾಗ, ಪತ್ನಿಯನ್ನು ತವರು ಮನೆಗೆ ಕಳುಹಿಸಿ ಸುಮ್ಮನಾಗಿದ್ದಾನೆ. ಕೆಲ ದಿನಗಳ ಬಳಿಕ ನಾಲ್ಕನೇ ಪತ್ನಿ ಹೈಕೋರ್ಟ್ ಮೆಟ್ಟಿಲೇರುವ ಮೂಲಕ ತಿಂಗಳಿಗೆ ಜೀವನಾಂಶ ರೂಪದಲ್ಲ 30,000 ರೂಪಾಯಿ ಪಡೆದುಕೊಂಡಿದ್ದಾಳೆ.

ನಾಲ್ಕನೇ ಪತ್ನಿ ನಡೆಗೆ ನದ್ವಿ ಶಾಕ್
ಈ ಹಿಂದಿನ ಮೂರು ಪತ್ನಿಯರು ಒಂದರ ಮೇಲೊಂದರಂತೆ ಮದುವೆಯಾಗುವ ಯಾವುದೇ ಆಕ್ಷೇಪ, ಅಭ್ಯಂತರ ವ್ಯಕ್ತವಾಗಿಲ್ಲ. ಆದರೆ ನಾಲ್ಕನೇ ಪತ್ನಿ ಮಾತ್ರ ಆಕ್ರೋಶಗೊಂಡಿದ್ದಾರೆ. ಸಂಸದನಾಗಿರುವ ಕಾರಣ ಒಂದರ ಹಿಂದೊರಂತೆ ಮದುವೆಯಾಗಿದ್ದಾನೆ. ಸಮುದಾಯಗ ಪ್ರಬಳ ನಾಯಕನಾಗಿ ಗುರುತಿಸಿಕೊಂಡಿದ್ದ ಮೊಹಿಬುಲ್ಲಾ ನದ್ವಿಗೆ ಹೆಣ್ಣು ಕೊಡಲು ಸಾಲು ಸಾಲು ಕುಟುಂಬಗಳು ನಿಂತಿತ್ತು. ಮದುವೆಯಾಗಿ ಕೆಲ ದಿನಗಳ ಕಾಲ ಸಂಸಾರದಲ್ಲಿ ಮಗನ ಜನನವೂ ಆಗಿದೆ. ಕೆಲ ದಿನಗಳಲ್ಲೇ ಮೊಹಿಬುಲ್ಲಾ ನದ್ವಿಗೆ ನಾಲ್ಕನೇ ಪತ್ನಿ ಸಾಕಾಗಿದೆ. ಹೀಗಾಗಿ ಭಾರಿ ತಂತ್ರಗಾರಿಗೆ ಮಾಡಿದ್ದಾನೆ. ವಕ್ಫ್ ಬೋರ್ಡ್ ವಿಚಾರವಾಗಿ ಹೋರಾಟ ನಡೆಯುತ್ತಿದೆ. ಸಂಸದನಾಗಿ ತಾನು ನಮ್ಮ ಸಮುದಾಯದ ನಾಯಕರ ಮಾತಿನಂತೆ ಮುಂದಾಳತ್ವ ವಹಿಸಿ ಹೋರಾಟ ಮಾಡಬೇಕಿದೆ. ಜಿಲ್ಲೆಯಲ್ಲಿ ಸಮುದಾಯವರನ್ನು ಸಂಘಟಿಸಬೇಕಿದೆ. ಹೀಗಾಗಿ ಕುಟುಂಬಕ್ಕೆ ಸಮಯ ಕೊಡಲ ಸಾಧ್ಯವಾಗದೇ ಇರಬಹುದು. ಕೆಲ ದಿನಗಳ ಕಾಲ ತವರು ಮನೆಗೆ ಹೋಗು ಎಂದು ಹೇಳಿದ್ದಾನೆ. ಇದೇ ಮಾತನ್ನು ನಾಲ್ಕನೇ ಪತ್ನಿ ತಂದೆ ಬಳಿಯೂ ಹೇಳಿದ್ದಾನೆ.
ವಕ್ಫ್ ಹೋರಾಟದ ಕಾರಣ ಎಲ್ಲರೂ ಒಪ್ಪಿಕೊಂಡರು. ನಮ್ಮ ವಕ್ಫ್ ಆಸ್ತಿ ಕಬಳಿಸಲಾಗುತ್ತದೆ ಅನ್ನೋ ಸುಳ್ಳು ಮಾಹಿತಿಗಳನ್ನು ಹಬ್ಬಿಸಲಾಗಿತ್ತು. ಹೀಗಾಗಿ ಹೋರಾಟದ ತೀವ್ರತೆ ಅರಿತುಕೊಂಡು ನದ್ವಿ ಮಾತಿಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ನಾಲ್ಕನೇ ಪತ್ನಿಯನ್ನು ತವರು ಮನೆಗೆ ಬಿಟ್ಟ ನದ್ವಿ ಬಳಿಕ ಆ ಕಡೆ ತಿರುಗಿ ನೋಡಿಲ್ಲ. ಸಂಪರ್ಕಿಸಲು ಪ್ರಯತ್ನಿಸಿದರೆ ಸಿಗುತ್ತಲೇ ಇರಲಿಲ್ಲ. ತಿಂಗಳುಗಳು ಕಳೆದರೂ ನದ್ವಿ ಪತ್ತೆ ಇಲ್ಲ. ಇದರ ನಡುವೆ ನದ್ವಿ ಕಡೆಯಿಂದ ಮೂರನೇ ವ್ಯಕ್ತಿಯೊಬ್ಬರು ಆಗಮಿಸಿ ಸೆಟ್ಲೆಮೆಂಟ್ ಮಾಡಲು ಆಫರ್ ನೀಡಿದ್ದಾರೆ. ಆಘಾತಗೊಂಡ ನಾಲ್ಕನೇ ಪತ್ನಿ ಹೈಕೋರ್ಟ್ ಮೆಟ್ಟೇಲೇರಿದ್ದಳು.
ಸಂಸದ ನದ್ವಿ ವಾದ ತಿರಸ್ಕರಿಸಿದ ಹೈಕೋರ್ಟ್
ಅಲಹಾಬಾದ್ ಹೈಕೋರ್ಟ್ನಲ್ಲಿ ಪ್ರಕರಣ ವಿಚಾರಣೆ ನಡೆದಿತ್ತು. ಇಬ್ಬರ ವಾದ ಆಲಿಸಿದ ಕೋರ್ಟ್ ಕೊನೆಗೆ ನಾಲ್ಕನೇ ಪತ್ನಿ ಪರವಾಗಿ ತೀರ್ಪು ನೀಡಿದೆ. ಪ್ರತಿ ತಿಂಗಳು 30,000 ರೂಪಾಯಿ ಜೀವನಾಂಶ ನೀಡಲು ಕೋರ್ಟ್ ಸೂಚಿಸಿದೆ. ಹಲವು ರೀತಿಯಿಂದ ಈ ಜೀವನಾಂಶ ಪಾವತಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದರೂ ನದ್ವಿಗೆ ಯಶಸ್ಸು ಸಿಗಲಿಲ್ಲ.