“ನಾಯಿ-ಬೆಕ್ಕು ಬಿಡುವವರು ನಿಮ್ಮ ಹೆಂಡತಿಯನ್ನು ಬಿಟ್ಟು ಹೋಗಿ!” – ವೈರಲ್ ಆದ ಎಚ್ಚರಿಕೆ ಬ್ಯಾನರ್!

ಎಲ್ಲರ ಮನೆಯಲ್ಲಿ ನಾಯಿ, ಬೆಕ್ಕು ಇದ್ದೆ ಇರುತ್ತದೆ. ಆದರೆ, ಕೆಲವೊಮ್ಮೆ ಈ ಬೆಕ್ಕು ಹಾಗೂ ನಾಯಿ (dog and cat) ಮರಿಗಳಿಟ್ಟಾಗ ಇಷ್ಟು ಮರಿಗಳನ್ನು ಏನು ಮಾಡೋದು ಅನ್ನೋ ಪ್ರಶ್ನೆ ಕಾಡುತ್ತದೆ. ಕೆಲವರು ತಮ್ಮ ಆತ್ಮೀಯರ ಬಳಿ ಹೇಳಿ ನಾಯಿ ಅಥವಾ ಬೆಕ್ಕಿನ ಮರಿಗಳನ್ನು ಬೇರೆಯವರಿಗೆ ಕೊಡುವ ಮೂಲಕ ಕೈ ತೊಳೆದುಕೊಳ್ಳುತ್ತಾರೆ.

ಇಲ್ಲದಿದ್ದರೆ ಕತ್ತಲಾಗುತ್ತಿದ್ದಂತೆ ಇನ್ನು ಕಣ್ಣುಬಿಡದ ಮರಿಗಳನ್ನು ಚೀಲದಲ್ಲಿ ತುಂಬಿಸಿಕೊಂಡು ಯಾರದೋ ಮನೆಯ ಕಾಂಪೌಂಡ್ ಮುಂಭಾಗದಲ್ಲಿಯೋ, ರಸ್ತೆಯಲ್ಲಿ ಬಿಟ್ಟು ಬರುತ್ತಾರೆ. ಆದರೆ ಇದೀಗ ಅಂತಹ ಮಹಾನುಭಾವರಿಗಾಗಿ ವ್ಯಕ್ತಿಯೊಬ್ಬರು ತಮ್ಮ ಮನೆಯ ಕಾಂಪೌಂಡ್ ಮೇಲೆ ವಿಶೇಷವಾದ ಬ್ಯಾನರ್ ಹಾಕಿದ್ದು ಎಚ್ಚರಿಕೆಯ ಸಂದೇಶ ನೀಡಿದ್ದಾರೆ. ಮೊದಲ ಸಾಲುಗಳು ಸಹಜವಾಗಿದ್ದರೂ ಎರಡನೇ ಸಾಲನ್ನು ಓದಿದರೆ ನಗು ಬರುತ್ತದೆ. ನಾಯಿ ಬೆಕ್ಕು ಬಿಡುವವರು ನಿಮ್ಮ ಹೆಂಡತಿಯನ್ನು ಬಿಟ್ಟು ಹೋಗಿ ಎಂದಿದ್ದು, ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ (social media) ವೈರಲ್ ಆಗುತ್ತಿದ್ದಂತೆ ಬಳಕೆದಾರರನ್ನು ನಗೆಗಡಲಿನಲ್ಲಿ ತೇಲಿಸಿದೆ.

@karahovich ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾದ ಪೋಸ್ಟ್‌ನಲ್ಲಿ ಮನೆಯ ಕಾಂಪೌಂಡ್ ಮೇಲೆ ವಿಶೇಷವಾದ ಎಚ್ಚರಿಕೆ ಫಲಕ ಇರುವುದನ್ನು ಕಾಣಬಹುದು. ಈ ಬ್ಯಾನರ್‌ನಲ್ಲಿ ಇಲ್ಲಿ ನಾಯಿ, ಬೆಕ್ಕು ತಂದು ಬಿಡುವವರು, ನಿಮ್ಮ ಹೆಂಡತಿಯನ್ನು ಬಿಟ್ಟು ಹೋಗಿ ಎಂದು ಬರೆಯಲಾಗಿದೆ.
