ಆರ್‍ಎಸ್‍ಎಸ್ ಪಥ ಸಂಚಲನ ವಿರುದ್ಧ ಹೋರಾಟ ನಡೆಸಿದ್ದ ಮುಖಂಡ ಟಾರ್ಗೆಟ್: ಮನೆ ಮುಂದೆ ನಿಲ್ಲಿಸಿದ್ದ ಕಾರು ಸುಟ್ಟು ಭಸ್ಮ.

ಕಲಬುರಗಿ : ಕಲಬುರಗಿಯಲ್ಲಿ ಭೀಮ್ ಆರ್ಮಿ ಮುಖಂಡನ ಕಾರಿಗೆ ಬೆಂಕಿ ಹಚ್ಚಿ ಕಿಡಿಗೇಡಿಗಳು ಪರಾರಿಯಾಗಿದ್ದಾರೆ.

ಕಲಬುರಗಿ ನಗರದ ಶಹಾಬಾದ್ ರಿಂಗ್ ರಸ್ತೆ ಬಳಿ ತಡರಾತ್ರಿ ಮನೆಮುಂದೆ ನಿಲ್ಲಿಸಿದ್ದ ಕಾರಿಗೆ ಬೆಂಕಿ ಹಚ್ಚಿ ಕಿಡಿಗೇಡಿಗಳು ಪರಾರಿಯಾಗಿದ್ದಾರೆ.
ಭೀಮ್ ಆರ್ಮಿ ಪ್ರಧಾನ ಕಾರ್ಯದರ್ಶಿ ಸತೀಶ್ ಹುಗ್ಗಿ ಕಾರಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. Rss ಪಥ ಸಂಚಲನದ ವಿರುದ್ಧ ಹೋರಾಟ ಮುಂದಾಳತ್ವ ವಹಿಸಿದ್ದ ಸತೀಶ್ ಕಾರಿಗೆ ಬೆಂಕಿ ಹಚ್ಚಲಾಗಿದೆ. ಗುಲಬರ್ಗಾ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.