ಲಾರೆನ್ಸ್ ಬಿಷ್ಣೋಯ್ ಸಹಚರರ ಕೆನಡಾ ಪಲಾಯನ: ಬೆಂಗಳೂರು ಪೊಲೀಸರ ಎಡವಟ್ಟೇ ಕಾರಣ!

ಬೆಂಗಳೂರು: ದೇಶದ ಮೋಸ್ಟ್ ವಾಂಟೆಂಡ್ ಗ್ಯಾಂಗ್‌ಸ್ಟಾರ್ ಲಾರೆನ್ಸ್ ಬಿಷ್ಣೋಯ್‌ನ ಇಬ್ಬರು ಸಹಚರರು ಕೆನಡಾಕ್ಕೆ ಪರಾರಿ ಯಾಗಲು ನಗರ ಪೊಲೀಸರು ಎಡವಟ್ಟು ಕಾರಣ ಎಂಬುದು ಬೆಳಕಿಗೆ ಬಂದಿದೆ.

ಹರಿಯಾಣ, ಪಂಜಾಬ್ ಹಾಗೂ ಉತ್ತರ ಭಾರತದಲ್ಲಿ ಕೊಲೆ, ಸುಲಿಗೆ, ದರೋ ಡೆಯಂತಹ ಗಂಭೀರ ಪ್ರಕರಣ ಗಳಲ್ಲಿ ಭಾಗಿಯಾಗಿದ್ದ ಲಾರೆನ್ಸ್ ಬಿಷ್ಣೋ ಯ್‌ನ ಸಹಚರರಾದ ಮಂಜೋತ್ ಸಿಂಗ್ ಮತ್ತು ಸಾಹಿಲ್ ಚೌಹಾಣ್ ವಿರುದ್ಧ ಅಲ್ಲಿನ ಸ್ಥಳೀಯ ನ್ಯಾಯಾಲಯಗಳಲ್ಲಿ 25ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.
ಈ ಪ್ರಕರಣಗಳಲ್ಲಿ ಜಾಮೀನು ಪೆಡದುಕೊಂಡು ಹೊರ ಬಂದಿದ್ದ ಆರೋಪಿಗಳು, 2024ರಲ್ಲಿ ಬೆಂಗಳೂರಿನ ಹೆಣ್ಣೂರು ಬಳಿ ವಾಸವಾಗಿದ್ದರು. ಬಳಿಕ ಮಧ್ಯವರ್ತಿಯ ಮೂಲಕ ಸ್ಥಳೀಯ ವಿಳಾಸಕ್ಕೆ ಪಾಸ್‌ಪೋರ್ಟ್ ಮಾಡಿಸಿಕೊಂಡಿದ್ದಾರೆ.
ಮತ್ತೂಂದೆಡೆ ಆರೋಪಿ ಗಳು ಹರಿಯಾಣದ ಸ್ಥಳೀಯ ನ್ಯಾಯಾಲ ಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮ ರೆಸಿ ಕೊಂಡಿದ್ದು, ಈ ಬಗ್ಗೆ ಅಲ್ಲಿನ ಎಟಿಎಸ್ ಅಧಿಕಾರಿಗಳು ಇಬ್ಬರಿಗಾಗಿ ಶೋಧ ನಡೆಸಿದಾಗ ಇಬ್ಬರು ಕೆನಾಡಕ್ಕೆ ಹೋಗಿದ್ದಾರೆ ಎಂಬ ಮಾಹಿತಿ ಸಿಕ್ಕಿತ್ತು.
ಅಲ್ಲದೆ, ಬೆಂಗಳೂರಿನ ವಿಳಾಸ ನೀಡಿ ಪಾಸ್ ಪೋರ್ಟ್ ಮಾಡಿಸಿಕೊಂಡು ಹೋಗಿರುವುದು ಗೊತ್ತಾಗಿ, ಇಲ್ಲಿಗೆ ಬಂದ ಸ್ಥಳೀಯ ಪೊಲೀಸರ ಜತೆ ಕಾರ್ಯಾಚರಣೆ ನಡೆಸಿ ದಾಗ ಮಧ್ಯವರ್ತಿ ಮೂಲಕ ನಕಲಿ ವಿಳಾಸ ನೀಡಿ ಪಾಸ್‌ಪೋರ್ಟ್ ಪಡೆದುಕೊಂಡಿರುವುದು ಪತ್ತೆಯಾಗಿದೆ. ನಂತರ ಮಧ್ಯವರ್ತಿ ಅಮಿನ್ ಉಸ್ಮಾನ್ ಸೇಠ್ ಎಂಬಾತನನ್ನು ಬಂಧಿಸಲಾಗಿತ್ತು.
ಈತ ಹಣ ಪಡೆದು ಪಾಸ್ ಪೋರ್ಟ್ ಪಡೆದುಕೊಂಡಿದ್ದಾಗಿ ಹೇಳಿಕೆ ನೀಡಿದ್ದ. ಆ ನಂತರ ಮಧ್ಯವರ್ತಿ ಜತೆ ಸೇರಿಕೊಂಡು ಹೆಣ್ಣೂರು ಠಾಣೆಯ ಇಬ್ಬರು ಕಾನ್‌ಸ್ಟೆàಬಲ್‌ಗಳಾದ ಮುರಳಿ ಮತ್ತು ಅಶೋಕ್, ಪಾಸ್‌ಪೋರ್ಟ್‌ನಲ್ಲಿ ಉಲ್ಲೇಖೀಸಿದ ಸ್ಥಳ ಪರಿಶೀಲನೆ ನಡೆ ಸದೆ ಅದಕ್ಕೆ ಅನುಮೊದನೆ ನೀಡಿದ್ದರು. ಬಳಿಕ ಪಾಸ್‌ಪೋರ್ಟ್ ಬರುತ್ತಿದ್ದಂತೆ ಇಬ್ಬರು ಕೆನಡಾಕ್ಕೆ ಪರಾರಿಯಾಗಿದ್ದಾರೆ.
ಹೆಸರು, ವಿಳಾಸ ಇಲ್ಲ: ಮಂಜೋತ್ ಸಿಂಗ್ ಮತ್ತು ಸಾಹಿಲ್ ಚೌಹಾಣ್ ಇಬ್ಬರು ತಮ್ಮ ಹೆಸರಿನ ಒಂದೆರಡು ಅಕ್ಷರಗಳನ್ನಷ್ಟೇ ಬದಲಾಯಿಸಿಕೊಂಡು ಹೆಣ್ಣೂರು ಠಾಣೆ ವ್ಯಾಪ್ತಿ ಸರಾಯಿ ಪಾಳ್ಯದಲ್ಲಿ ಇಲ್ಲದ ವಿಳಾಸ ನೀಡಿ ಪಾಸ್‌ಪೋರ್ಟ್ ಪಡೆದುಕೊಂಡಿ ದ್ದಾರೆ. ಈ ನಡುವೆ ಇಬ್ಬರು ಕಾನ್‌ಸ್ಟೇಬಲ್ ಗಳು ಕೂಡ ನಿರೀಕ್ಷಣಾ ಜಾಮೀನು ಪಡೆದುಕೊಂಡಿರುವುದು ಬೆಳಕಿಗೆ ಬಂದಿದೆ ಎಂದು ಮೂಲಗಳು ತಿಳಿಸಿವೆ.
