ಕಾನೂನು ವಿದ್ಯಾರ್ಥಿ ಮೇಲೆ ಭೀಕರ ಹಲ್ಲೆ, ಹೊಟ್ಟೆ ಸೀಳಿ ಆಂತರಿಕ ಗಾಯ; ಎರಡು ಬೆರಳು ಕತ್ತರಿಸಿದ ದುಷ್ಕರ್ಮಿಗಳು!

ಕಾನ್ಪುರ: ಇವರೇನು ಮನುಷ್ಯರೋ ಅಥವಾ ರಾಕ್ಷಸರೋ ನಡೆದಿದ್ದು ಸಣ್ಣ ವಾಗ್ವಾದ ಆಗಿದ್ದು ಮಾರಣಾಂತಿಕ ಹಲ್ಲೆ. ಮೆಡಿಕಲ್ ಶಾಪ್ನಲ್ಲಿ ಔಷಧದ ಬೆಲೆಗೆ ಸಂಬಂಧಿಸಿದಂತೆ ಕಾನೂನು ವಿದ್ಯಾರ್ಥಿಹಾಗೂ ಔಷಧಂಗಡಿ ಮಾಲೀಕನ ಜತೆ ವಾಗ್ವಾದ ನಡೆದಿದೆ. ಶಾಪ್ ಮಾಲೀಕ ಕೋಪಗೊಂಡು ವಿದ್ಯಾರ್ಥಿಯ ಹೊಟ್ಟೆ ಹಾಗೂ ಕೈಬೆರಳುಗಳನ್ನು ಕತ್ತರಿಸಿರುವ ಭಯಾನಕ ಘಟನೆ ಕಾನ್ಪುರದಲ್ಲಿ ನಡೆದಿದೆ.

ಕಾನ್ಪುರ ವಿಶ್ವವಿದ್ಯಾಲಯದಲ್ಲಿ ಪ್ರಥಮ ವರ್ಷದ ಕಾನೂನು ವಿದ್ಯಾರ್ಥಿ ಅಭಿಜೀತ್ ಸಿಂಗ್ ಚಾಂಡೆಲ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿದ್ಯಾರ್ಥಿಯ ತಲೆಗೆ 14 ಹೊಲಿಗೆಗಳನ್ನು ಹಾಕಲಾಗಿದ್ದು ಅವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಔಷಧಿಯ ಬೆಲೆಯ ಬಗ್ಗೆ ಆರಂಭವಾದ ವಾಗ್ವಾದವು, ಹಿಂಸಾತ್ಮಕ ರೂ ತಾಳಿತ್ತು. ಕಾನೂನು ವಿದ್ಯಾರ್ಥಿ ಮತ್ತು ವೈದ್ಯಕೀಯ ಅಂಗಡಿಯಲ್ಲಿ ಕೆಲಸ ಮಾಡುವ ಅಮರ್ ಸಿಂಗ್ ನಡುವಿನ ಪೂರ್ಣ ಪ್ರಮಾಣದ ಜಗಳಕ್ಕೆ ಕಾರಣವಾಯಿತು. ಅಮರ್ ಸಿಂಗ್ ಅವರ ಸಹೋದರ ವಿಜಯ್ ಸಿಂಗ್ ಮತ್ತು ಪ್ರಿನ್ಸ್ ರಾಜ್ ಶ್ರೀವಾಸ್ತವ ಮತ್ತು ನಿಖಿಲ್ ಎಂಬುವವರು ಅವರೊಂದಿಗೆ ಸೇರಿಕೊಂಡರು.
ನಾಲ್ವರು ವಿದ್ಯಾರ್ಥಿಯ ತಲೆಯ ಮೇಲೆ ಹಲ್ಲೆ ನಡೆಸಿದ್ದು, ಮುಖದಲ್ಲಿ ರಕ್ತ ಸೋರುತ್ತಿರುವಂತೆ ಆತ ನೆಲಕ್ಕೆ ಬಿದ್ದಿದ್ದಾನೆ. ನಂತರ ದಾಳಿಕೋರರು ವಿದ್ಯಾರ್ಥಿಯ ಹೊಟ್ಟೆಗೆ ಹೊಡೆದು, ಹರಿತವಾದ ವಸ್ತುವಿನಿಂದ ಹೊಟ್ಟೆಯನ್ನು ಕತ್ತರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದಾಳಿಯಲ್ಲಿ ಗಾಯಗೊಂಡ ನಂತರ, ಅಭಿಜೀತ್ ಕೂಗುತ್ತಾ ತನ್ನ ಮನೆಯ ಕಡೆಗೆ ಓಡಿದ್ದಾನೆ, ಆದರೆ ದಾಳಿಕೋರರು ಅವನನ್ನು ಮತ್ತೆ ಹಿಡಿದು ಅವನ ಒಂದು ಕೈಯ ಎರಡು ಬೆರಳುಗಳನ್ನು ಕತ್ತರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಭಿಜೀತ್ ನ ಕಿರುಚಾಟ ಕೇಳಿ ಜನರು ಆತನನ್ನು ರಕ್ಷಿಸಲು ಓಡಿ ಬಂದರು. ಈ ಹಂತದಲ್ಲಿ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.