Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಹಿಂದೂ ಮುಖಂಡರ ಮೇಲೆ ತಡರಾತ್ರಿ ಪೋಲಿಸ್ ದೌರ್ಜನ್ಯ- ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ಆಕ್ರೋಶ

Spread the love

ಮಂಗಳೂರು: ಮಂಗಳೂರಿನಲ್ಲಿ ಪೊಲೀಸ್ ಇಲಾಖೆಯ ಕೆಲ ಸಿಬ್ಬಂದಿ ತಡ ರಾತ್ರಿ ಬಡ ಹಿಂದೂಗಳ ಮನೆಗಳಿಗೆ ಹೋಗಿ ಅವರ ಫೋಟೋ ತೆಗೆದು ಕಿರುಕುಳ ನೀಡುತ್ತಿರುವ ವರದಿಗಳನ್ನು ತೀವ್ರವಾಗಿ ಖಂಡಿಸಿ, ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ನೇತೃತ್ವದಲ್ಲಿ ದಕ್ಷಿಣ ವಲಯ ಡಿಜಿಪಿ ಹಾಗೂ ದ.ಕ ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ಪ್ರತಿಭಟನೆ ವ್ಯಕ್ತಪಡಿಸಲಾಯಿತು.

ಈ ಪ್ರತಿಯೂಕ್ತ ಕ್ರಮವನ್ನು ಖಂಡಿಸಿ ಹಲವಾರು ಹಿಂದೂ ಸಂಘಟನೆಗಳ ಪ್ರಮುಖರು ಪಾಲ್ಗೊಂಡಿದ್ದು, ಈ ಸಮಯದಲ್ಲಿ ಹಿಂದೂ ಮಹಾಸಭಾ ರಾಜ್ಯಾಧ್ಯಕ್ಷರಾದ ಡಾ. ಎಲ್ ಕೆ ಸುವರ್ಣ ಅವರು ಪ್ರಮುಖವಾಗಿ ಭಾಗವಹಿಸಿದ್ದರು. ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿ,ಈ ಕ್ರಮ ಸರಿಯಲ್ಲ ಎಂದು ಅಗ್ರಹಪಡಿಸಿ ಕಿರುಕುಳ ಕೊಡುವ ಅಧಿಕಾರಿಗಳ ವಿರುದ್ಧ ದೂರು ನೀಡಲಾಯಿತು.

ಓಂ ಶ್ರೀ ಮಠ ದ ಸಂತ ಸಮಿತಿ ಕರ್ನಾಟಕ ರಾಜ್ಯ ಅಧ್ಯಕ್ಷರು, ಶ್ರೀ ಅಳಿಕೆ ಮಠ ಶ್ರೀ ಶಿವಾನಂದ ಸರಸ್ವತಿ ಸ್ವಾಮೀಜಿ ಹಿಂದೂ ಯುವ ಸೇನೆ ಕೇಂದ್ರೀಯ ಮಂಡಳಿ ಗೌರವ ಅಧ್ಯಕ್ಷ ಭಾಸ್ಕರ್ ಚಂದ್ರ ಶೆಟ್ಟಿ, ಹಿಂದೂ ಮಹಾ ಸಭಾ- ಕರ್ನಾಟಕ ರಾಜ್ಯ ಅಧ್ಯಕ್ಷ ಡಾ. ಎಲ್. ಕೆ ಸುವರ್ಣ, ರಾಜ್ಯ ಖಜಾಂಚಿ ಲೋಕೇಶ್ ಉಳ್ಳಾಲ್, ಹಿಂದೂ ಜಾಗರಣ ವೇದಿಕೆ ಮುಖಂಡ ಜಗದೀಶ್ ಸೇನವ,ಹಿಂದೂ ಜನಜಾಗೃತಿ ಸಮಿತಿ ಮುಖಂಡರಾದ ಚಂದ್ರ ಮೊಗೇರ, ಉಪೇಂದ್ರ ಆಚಾರ್ಯ ಹಾಗೂ ವಿವಿಧ ಹಿಂದೂ ಸಂಘಟನೆ ಯಾ ಪ್ರಮುಖರು ಭಾಗವಹಿಸಿದರು.


Spread the love
Share:

administrator

Leave a Reply

Your email address will not be published. Required fields are marked *