ಗಲ್ಲಿ ಕ್ರಿಕೆಟ್ನಲ್ಲಿ ವಿಕೆಟ್ ಕೀಪರ್ ಆಗಿ ಮಿಂಚಿದ ಲ್ಯಾಬ್ರಡಾರ್ ಶ್ವಾನ!

ನಾಯಿಗಳು (Dogs) ಮನುಷ್ಯನ ಉತ್ತಮ ಸ್ನೇಹಿತ ಅಂತಾನೇ ಹೇಳಬಹುದು. ಇವುಗಳು ಮನೆಯನ್ನು ಕಾಯಿಯುವುದರ ಜೊತೆಗೆ ಮನೆಯವರೊಂದಿಗೆ ಆಟ ತುಂಟಾಟವನ್ನು ಮಾಡುತ್ತಿರುತ್ತವೆ. ಶ್ವಾನಗಳ ಮುದ್ದು ಮುದ್ದಾದ ಆಟ, ತರ್ಲೆ ತಮಾಷೆಗಳ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ

ಇಲ್ಲೊಂದು ಅಂತಹದ್ದೇ ದೃಶ್ಯ ವೈರಲ್ ಆಗಿದ್ದು, ಶ್ವಾನವೊಂದು ಗಲ್ಲಿ ಕ್ರಿಕೆಟ್ನಲ್ಲಿ (Dog turns wicketkeeper in gully cricket) ಸಖತ್ ಆಗಿ ವಿಕೆಟ್ ಕೀಪಿಂಗ್ ಮಾಡುವ ಮೂಲಕ ಮಿಂಚಿದೆ. ಹೌದು ಎಂ.ಎಸ್ ಧೋನಿ ಅವರಂತೆ ನಾನು ಕೂಡಾ ಒಂದು ಮಟ್ಟಿಗೆ ವಿಕೆಟ್ ಕೀಪಿಂಗ್ ಮಾಡಬಲ್ಲೆ ಎನ್ನುತ್ತಾ, ಭರ್ಜರಿಯಾಗಿ ಆಡಿದ್ದು, ಲ್ಯಾಬ್ರಡಾರ್ ತಳಿಯ ಈ ಶ್ವಾನದ ಕ್ರಿಕೆಟ್ ಆಟಕ್ಕೆ ಕ್ರಿಕೆಟ್ ಪ್ರೇಮಿಗಳಂತೂ ಫಿದಾ ಆಗಿದ್ದಾರೆ.
ಗಲ್ಲಿ ಕ್ರಿಕೆಟ್ನಲ್ಲಿ ವಿಕೆಟ್ ಕೀಪರ್ ಆಗಿ ಮಿಂಚಿದ ಶ್ವಾನ:
ಲ್ಯಾಬ್ರಡಾರ್ ತಳಿಯ ಶ್ವಾನವೊಂದು ವೃತ್ತಿಪರ ಆಟಗಾರರಂತೆ ಸಖತ್ತಾಗಿ ವಿಕೆಟ್ ಕೀಪಿಂಗ್ ಮಾಡುವ ಮೂಲಕ ಸುದ್ದಿಯಲ್ಲಿದೆ. ಈ ಶ್ವಾನ ಗಲ್ಲಿ ಕ್ರಿಕೆಟ್ನಲ್ಲಿ ವಿಕೆಟ್ ಕೀಪರ್ ಆಗಿ ಮಿಂಚಿದ್ದು, ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
ಈ ವಿಡಿಯೋವನ್ನು ಆದಿತ್ಯ ತಿವಾರಿ (Aditya Tiwari) ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇದು ಮಹೇಂದ್ರ ಸಿಂಗ್ ಅವರ ಶ್ವಾನ, ಕ್ರಿಕೆಟ್ ಸಮುದಾಯದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆʼ ಎಂಬ ತಮಾಷೆಯ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
