ಕುಂದಾಪುರ ಮೆಡಿಕಲ್ ಶಾಪ್ ಹಲ್ಲೆ ಪ್ರಕರಣ: ಚಿಲ್ಲರೆ ಕೊಡಿ ಎಂದ್ದಕ್ಕೆ ದಲಿತ ಯುವತಿಗೆ ಹಲ್ಲೆ
ಕುಂದಾಪುರ: ಗುಲ್ವಾಡಿ ಗ್ರಾಮದ ಮಾವಿನಕಟ್ಟೆಯ ಮೆಡಿಕಲ್ ಶಾಪ್ನಲ್ಲಿ ದಲಿತ ಯುವತಿಯೊಬ್ಬಳಿಗೆ ಚಿಲ್ಲರೆ ಕೊಡದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಹಿಳೆಯೊಬ್ಬರು ಹಲ್ಲೆಗೈದ ಘಟನೆ ಸೋಮವಾರ ಸಂಭವಿಸಿದೆ. ಲಕ್ಷ್ಮೀ ಹಲ್ಲೆಗೊಳಗಾದ ಯುವತಿ. ಯಾಸ್ಮಿನ್ ಹಲ್ಲೆಗೈದ ಆರೋಪಿ.
ಘಟನೆಯ ವಿವರ
ಮಾವಿನಕಟ್ಟೆಯ ಮೆಡಿಕಲ್ಗೆ ಬಂದಿದ್ದ ಆ ಮಹಿಳೆ ಔಷಧ ಖರೀದಿಸಿ 500 ರೂ. ಕೊಟ್ಟಳು. ಚಿಲ್ಲರೆ ಇಲ್ಲ, ಕೊಡಿ ಎಂದ ಯುವತಿಯ ಮೇಲೆ ಯಾಸ್ಮಿನ್ ಹಲ್ಲೆ ನಡೆಸಿ, ಅವಾಚ್ಯವಾಗಿ ಜಾತಿ ನಿಂದನೆ ನಡೆಸಿದ್ದಾಳೆ ಎನ್ನಲಾಗಿದೆ. ಹಲ್ಲೆಗೊಳಗಾದ ಲಕ್ಷ್ಮೀ ಅವರನ್ನು ಕುಂದಾಪುರದ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ಎಸ್ಪಿ ಭೇಟಿ
ಆಸ್ಪತ್ರೆಗೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ಭೇಟಿ ಚಿಕಿತ್ಸೆ ಪಡೆಯುತ್ತಿದ್ದ ಯುವತಿಯ ಆರೋಗ್ಯ ವಿಚಾರಿಸಿದರು. ಘಟನೆ ನಡೆದ ಔಷಧ ಅಂಗಡಿಗೂ ಭೇಟಿ ಮಾಹಿತಿ ಸಂಗ್ರಹಿಸಿದರು. ಈ ವೇಳೆ ಪತ್ರಕರ್ತರೊಂದಿಗೆ ಮಾತನಾಡಿ, ಘಟನೆ ಕುರಿತಂತೆ ಕುಂದಾಪುರ ಗ್ರಾಮಾಂತರ ಠಾಣೆ ಯಲ್ಲಿ ಕೇಸು ದಾಖಲಾಗಿದೆ. ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆ ನಡೆಯಲಿದೆ. ಆರೋಪಿಯ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.