ರಶ್ಮಿಕಾ ಮಂದಣ್ಣ ತಲೆಯನ್ನೇ ಬೋಳಿಸಿದಂತಹ ವೈರಲ್ ವಿಡಿಯೋ

ಸೋಷಿಯಲ್ ಮೀಡಿಯಾದಲ್ಲಿ ಪ್ರತಿನಿತ್ಯ ಹಲವಾರು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಅವುಗಳಲ್ಲಿ ಕೆಲವೊಂದು ದೃಶ್ಯಗಳು ನಮ್ಮನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತವೆ. ಇದೀಗ ಅಂತಹದ್ದೊಂದು ವಿಡಿಯೋ ಹರಿದಾಡುತ್ತಿದ್ದು, ಮ್ಯಾಜಿಕ್ ಶೋ ಒಂದರಲ್ಲಿ ಪ್ರಖ್ಯಾತ ಜಾದೂಗಾರ ಕುದ್ರೋಳಿ ಗಣೇಶ್ ರಶ್ಮಿಕಾ ಮಂದಣ್ಣ ತಲೆಯನ್ನೇ ಬೋಳಿಸಿದ್ದಾರೆ. ಮ್ಯಾಜಿಕ್ ಶೋನಲ್ಲಿ ನಡೆದ ಈ ಕಾಮಿಡಿಯನ್ನು ನೋಡಿ ನೋಡುಗರಂತೂ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.
ಜಾದು ಎನ್ನುವುದು ಎಲ್ಲರ ಕಣ್ಸೆಳೆಯುವ ಒಂದು ಅದ್ಭುತ ಕಲೆ. ಇಂತಹ ಅದ್ಭುತ ಕಲೆಯ ಮೂಲಕವೇ ವಿಶ್ವ ಮಟ್ಟದಲ್ಲಿ ಹೆಸರು ಮಾಡಿದವರು ಜಾದೂಗಾರ ಕುದ್ರೋಳಿ ಗಣೇಶ್ . ತಮ್ಮ ವಿಶಿಷ್ಟ ಜಾದೂ ಕಲೆಯಿಂದಲೇ ಮನೆ ಮಾತಾಗಿರುವ ಇವರು ಇದೀಗ ರಶ್ಮಿಕಾ ಮಂದಣ್ಣ ತಲೆಯನ್ನು ಬೋಳಿಸಿದ್ದಾರೆ. ಹೌದು ಮ್ಯಾಜಿಕ್ ಶೋ ಒಂದರಲ್ಲಿ ರಶ್ಮಿಕಾ ಮಂದಣ್ಣ ಶ್ರೀವಲ್ಲಿ ಪಾತ್ರದ ಫೋಟೋದಲ್ಲಿನ ಕೂದಲನ್ನೇ ಮಾಯ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದ್ದು, ಮ್ಯಾಜಿಕ್ ಶೋನಲ್ಲಿ ನಡೆದ ಈ ಕಾಮಿಡಿಯನ್ನು ನೋಡಿ ನೋಡುಗರು ಈ ಮ್ಯಾಜಿಕ್ ಅಂತೂ ತುಂಬಾ ಮಜವಾಗಿದೆ ಎಂದು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.
ಕೆಲವೊಂದು ಮ್ಯಾಜಿಕ್ಗಳು ನಮ್ಮನ್ನು ನಿಬ್ಬೆರಗಾಗಿಸುವಂತೆ ಮಾಡಿದರೆ, ಕೆಲವೊಂದು ಜಾದೂಗಳು ನಮ್ಮನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತವೆ. ಇದೀಗ ಪ್ರಖ್ಯಾತ ಜಾದೂಗಾರ ಕುದ್ರೋಳಿ ಗಣೇಶ್ ಅವರು ರಶ್ಮಿಕಾ ಮಂದಣ್ಣ ತಲೆಗೂದಲನ್ನು ಮಾಯ ಮಾಡುವ ಜಾದೂ ಮೂಲಕ ಎಲ್ಲರನ್ನು ನಗೆಗಡಲಲ್ಲಿ ತೇಲಿಸಿದ್ದಾರೆ.