ಟ್ರಾಫಿಕ್ ಫೈನ್‌ಗಳಿಂದ ಕೆಎಸ್‌ಆರ್‌ಟಿಸಿ ಕಂಗಾಲು: ₹13 ಕೋಟಿ ದಂಡ ಮನ್ನಾ ಮಾಡುವಂತೆ ಮನವಿ

ಬೆಂಗಳೂರು: ಕೆಎಸ್‌ಆರ್‌ಟಿಸಿ ಬಸ್‌ಗಳ (KSRTC Bus) ಮೇಲೆ ಇರುವ ಟ್ರಾಫಿಕ್ ಫೈನ್‌ಗಳನ್ನ (Traffic Fine) ಮನ್ನಾ ಮಾಡುವಂತೆ ಮನವಿ ಮಾಡಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಅವರು ಗೃಹ ಸಚಿವರಿಗೆ ಪತ್ರ ಬರೆದಿದ್ದಾರೆ.

13 ಕೋಟಿಗೂ ಹೆಚ್ಚು ದಂಡ
ಸದ್ಯದ ಮಾಹಿತಿ ಪ್ರಕಾರ ಸಂಚಾರಿ ನಿಯಮಗಳನ್ನ ಉಲ್ಲಂಘನೆ ಮಾಡಿರುವ ಕಾರಣದಿಂದ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಬರೋಬ್ಬರಿ 13 ಕೋಟಿಗೂ ಹೆಚ್ಚು ದಂಡವನ್ನ ಹಾಕಲಾಗಿದೆ. ಅಲ್ಲದೇ, ಈ ಬಸ್‌ಗಳ ಮೇಲೆ ಸುಮಾರು 2,69,198 ಪ್ರಕರಣಗಳಿದೆ ಎನ್ನಲಾಗುತ್ತಿದೆ. ಅಲ್ಲದೇ, ಬಸಂಚಾರ ಪೊಲೀಸರು ಕೊಟ್ಟಿರುವ ಶೇ.50 ಡಿಸ್ಕೌಂಟ್ ದರದಲ್ಲಿ ನೋಡಲು ಹೋದರೆ ಕೆಎಸ್‌ಆರ್‌ಟಿಸಿ 6,64,96,400 ರೂ ಫೈನ್ ಕಟ್ಟಬೇಕಾಗುತ್ತದೆ. ಆದರೆ ಈಗ ಈ ದಂಡವನ್ನ ಮನ್ನಾ ಮಾಡುವಂತೆ ಆಗ್ರಹಿಸಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪತ್ರ ಬರೆದು ಮನವಿ ಮಾಡಿದ್ದಾರೆ.
ಸಚಿವರು ಬರೆದ ಪತ್ರದಲ್ಲಿ ಏನಿದೆ?
ರಾಜ್ಯದಲ್ಲಿ ಸುಮಾರು 24,000 ಕೆಎಸ್‌ಆರ್‌ಟಿಸಿ ಬಸ್‌ಗಳು ಇದೆ. ಕೆಲವೊಂದು ಸಮಯದಲ್ಲಿ ಸಿಸಿಟಿವಿಯಲ್ಲಿ ತಪ್ಪಾಗಿ ರೆಕಾರ್ಡ್ ಆಗಿರುವುದು ಕಂಡು ಬಂದಿದೆ. ನಾವು ಈಗ ದಾಖಲಾಗಿರುವ ಎಲ್ಲ ಪ್ರಕರಣಗಳನ್ನ ಗಮನಿಸಿದಾಗ ಅದರಲ್ಲಿ 1,95,009 ಪ್ರಕರಣಗಳು Lane Discipline Violationಗೆ ಸಂಬಂಧಪಟ್ಟಿದ್ದಾಗಿದೆ. ಕೆಲವೊಂದು ಸರಿ ಬಸ್‌ಗಳು ಲೇನ್‌ನಲ್ಲಿ ಚಾಲನೆ ಮಾಡುವಾಗ ಸಣ್ಣದಾಗಿ ಲೇನ್ ಪಟ್ಟಿಗೆ ತಾಗಿ ಬಿಡುವುದು ಸಹಜ, ಈ ರೀತಿ ಸ್ವಲ್ಪ ತಾಗಿದರೂ ಸಹ ಆ ಸ್ಥಳಗಳಲ್ಲಿ ಹಾಕಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಲೇನ್ ಉಲ್ಲಂಘಟನೆ ಮಾಡಲಾಗಿದೆ ಎಂದು ದಂಡ ವಿಧಿಸಲಾಗುತ್ತದೆ.
ಇನ್ನು 58,499 ಪ್ರಕರಣಗಳನ್ನ ಸೀಟ್ ಬೆಲ್ಟ್ ಧರಿಸಿಲ್ಲ ಎಂದು ದಾಖಲು ಮಾಡಲಾಗಿದೆ. ಅದರ ಬಗ್ಗೆ ಸಹ ಪರಿಶೀಲನೆ ಮಾಡಲಾಗಿದೆ. ಸೀಟ್ ಬೆಲ್ಟ್ ಹಾಕಿದ್ದರೂ ಸಹ ಪ್ರಕರಣಗಳನ್ನ ದಾಖಲು ಮಾಡಲಾಗಿದೆ. ಇನ್ನು ನಿಯಮಗಳ ಪ್ರಕಾರ, ಒಂದು ಅಪರಾಧಕ್ಕೆ ಸಂಬಂಧಿಸಿದಂತೆ 24 ಗಂಟೆ ಸಮಯದಲ್ಲಿ ಒಂದು ಬಾರಿ ದಂಡ ವಿಧಿಸಿ ಅದಕ್ಕೆ ರಶೀದಿ ಪಡೆದುಕೊಂಡಿದ್ದರೆ, ಮತ್ತೊಂದು ಕಡೆ ಅದೇ ರಶೀದಿಯನ್ನ ತೋರಿಸಿದರೆ ಮತ್ತೆ ದಂಡ ಹಾಕಲು ಸಾಧ್ಯವಿರಲಿಲ್ಲ. ಆದರೆ, ಈಗ ಹೈವೇಯಲ್ಲಿ ಜಿಲ್ಲಾವಾರು ಪ್ರಕರಣಗಳನ್ನ ದಾಖಲು ಮಾಡಲಾಗುತ್ತದೆ. ಒಂದೇ ದಿನದಲ್ಲಿ ರಾಮನಗರ, ಮಂಡ್ಯ, ಮೈಸೂರು ಹೀಗೆ ಒಂದೇ ವಾಹನಕ್ಕೆ ವಿವಿಧ ಜಿಲ್ಲೆಗಳಲ್ಲಿ ಒಂದೇ ಉಲ್ಲಂಘನೆಗೆ ದಂಡ ಹಾಕಲಾಗುತ್ತದೆ. ಹಾಗಾಗಿ ಈ ಒಟ್ಟು 2,69,198 ಪ್ರಕರಣಗಳಲ್ಲಿ ಸುಮಾರು 2,53,508 ಪ್ರಕರಣಗಳು ಈ ರೀತಿ ತಪ್ಪಿನಿಂದ ದಾಖಲು ಮಾಡಲಾಗಿರುವ ಪ್ರಕರಣಗಳಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಹಾಗಾಗಿ ಈ ಎಲ್ಲಾ ವಿಚಾರಗಳನ್ನ ಗಮನದಲ್ಲಿಟ್ಟುಕೊಂಡು ದಂಡವನ್ನ ಮನ್ನಾ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಬೆಂಗಳೂರು ಸಂಚಾರ ಪೊಲೀಸ್ ಇಲಾಖೆಗೆ ಬರುವ ವಾಹನಗಳಿಗೆ ಈ ಹಿಂದೆ ಟ್ರಾಫಿಕ್ ಫೈನ್‌ನಲ್ಲಿ ಡಿಸ್ಕೌಂಟ್ ನೀಡಲಾಗಿತ್ತು. 50% ಡಿಸ್ಕೌಂಟ್ ಆಫರ್ ಟೃಆಫಿಕ್ ಸಿಗ್ನಲ್ ಉಲ್ಲಂಘನೆ ಮಾಡಿರುವವರಿಗೆ ಹಾಗೂ ಮಿತಿ ಮೀರಿದ ವೇಗದ ಚಾಲನೆ, ಹೆಲ್ಮೆಟ್ ಧರಿಸದೇ ಚಾಲನೆ ಮಾಡುವುದು, ಕಾರಿನಲ್ಲಿ ಸೀಟ್ ಬೆಲ್ಟ್ ಬಳಕೆ ಮಾಡದಿರುವುದು, ಗಾಡಿ ಚಾಲನೆ ಮಾಡುವಾಗ ಮೊಬೈಲ್ ಫೋನ್ ಬಳಕೆ ಮಾಡುವುದು ಹಾಗೂ ನೋ ಪಾರ್ಕಿಂಗ್ ಜಾಗದಲ್ಲಿ ಪಾರ್ಕ್ ಮಾಡುವುದು ಹೀಗೆ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದವರಿಗೆ ಈ ಡಿಸ್ಕೌಂಟ್ ಕೊಡಲಾಗಿತ್ತು.
