KSRTC ಟ್ರೇಡ್‌ಮಾರ್ಕ್ ವಿವಾದ; ಇನ್ಮೇಲೆ KSRTC ಹೆಸರು ಕೇರಳ ಬಳಸುವಂತಿಲ್ಲ..! ಕರ್ನಾಟಕಕ್ಕೆ ಜಯ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳಿಗೆ KSRTC ಹೆಸರು ಬಳಕೆ ಮಾಡುತ್ತಿರುವುದನ್ನು ಪ್ರಶ್ನಿಸಿ ಕೇರಳ RTC ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದ್ದು, ಹೆಸರು ಬಳಕೆಗೆ ಯಾವುದೇ ಅಭ್ಯಂತರವಿಲ್ಲ ಎಂದು ನ್ಯಾಯಾಲಯ ಹೇಳಿದೆ. ಕರ್ನಾಟಕ ಕೆಣಕಿ ಕೇರಳ ಸೋತಿದ್ದು, KSRTC ಇನ್ಮುಂದೆ ನಮ್ದೇ. KSRTC ಹೆಸರು ಕೇರಳ ಇನ್ಮೇಲೆ ಬಳಸುವಂತಿಲ್ಲ. ಕರ್ನಾಟಕ KSRTC ಟ್ರೇಡ್ ಮಾರ್ಕ್ ಉಳಿಸಿಕೊಂಡಿದೆ.KSRTC ಟ್ರೇಡ್ ಮಾರ್ಕ್ ಬಳಕೆ ಬಗ್ಗೆ ಸಮರ ನಡೆದಿದ್ದು, ಕರ್ನಾಟಕ ಹಾಗೂ ಕೇರಳ ಸಾರಿಗೆ ಸಂಸ್ಥೆಗಳ ನಡುವೆ ಫೈಟ್ ನಡೆದಿತ್ತು. ಕೇರಳ KSRTC ಹೆಸರು ನಮ್ಮದೆಂದು ಕೋರ್ಟ್ ಮೊರೆ ಹೋಗಿತ್ತು. ಮದ್ರಾಸ್ ಹೈಕೋರ್ಟ್‌ನ ಬೌದ್ಧಿಕ ಆಸ್ತಿ ಮೇಲ್ಮನವಿ ಮಂಡಳಿ ಆದೇಶ ನೀಡಿದೆ. ಎರಡೂ ರಾಜ್ಯಗಳ ಸಾರಿಗೆ ಸಂಸ್ಥೆ ಹೆಸರು ಇಂಗ್ಲಿಷ್ನಲ್ಲಿ ಒಂದೇ ಇತ್ತು. 2021ರಲ್ಲಿ ಟ್ರೆಂಡ್ ಮಾರ್ಕ್ ರಿಜಿಸ್ಟ್ರಾರ್ ಕರ್ನಾಟಕ KSRTC ಬಳಸುವಂತಿಲ್ಲ ಎಂದಿತ್ತು. ಕರ್ನಾಟಕ ಈ ಆದೇಶ ಪ್ರಶ್ನೆ ಮಾಡಿ ಕೋರ್ಟ್ ಮೊರೆ ಹೋಗಿತ್ತು.
ಕಳೆದ 27 ವರ್ಷಗಳಿಂದಲೂ KSRTC ಟ್ರೇಡ್ ಮಾರ್ಕ್ ಸಮರ ನಡೆದಿತ್ತು. ಕೇರಳ-ಕರ್ನಾಟಕ ಸಾರಿಗೆ ಸಂಸ್ಥೆಗಳ ನಡುವೆ ಫೈಟ್ ನಡೆದಿತ್ತು. ಕೇಂದ್ರದ ಟ್ರೇಡ್ ಮಾರ್ಕ್ ರಿಜಿಸ್ಟ್ರಿ 2013ರಲ್ಲಿ ಪ್ರಮಾಣ ಪತ್ರ ಪರಿಶೀಲಿಸಿತ್ತು.1973ರಿಂದ ಟ್ರೇಡ್ ಮಾರ್ಕ್ ಬಳಕೆ ಮಾಡ್ತಿರೋದನ್ನು ಪರಿಶೀಲಿಸಿತ್ತು. KSRTC ಲೋಗೋ ಮತ್ತು ‘ಗಂಡಭೇರುಂಡ ಗುರುತು’ ಬಳಕೆಗೆ ಕಾಪಿ ರೈಟ್ ನಡೆದಿದೆ. ಕೇರಳ ಚೆನ್ನೈನ ಬೌದ್ಧಿಕ ಆಸ್ತಿ ಮೇಲ್ಮನವಿ ಮಂಡಳಿಗೆ ಹೋಗಿತ್ತು. ಕರ್ನಾಟಕ 42 ವರ್ಷದಿಂದ KSRTC ಬಳಸ್ತಿರೋದು ಕೇರಳಕ್ಕೆ ಗೊತ್ತು. KSRTC ಪಡೆದಿರುವ ಟ್ರೇಡ್ ಮಾರ್ಕ್ ನೋಂದಣಿ ಅಮಾನ್ಯವಲ್ಲ, ಈ ಬಗ್ಗೆ ಅರ್ಜಿ ಸಲ್ಲಿಸಲು ಕೇರಳ ಅರ್ಹರಾಗಿರುವುದಿಲ್ಲ ಎಂದು KSRTC ವಾದವಾಗಿದೆ. ಕೇರಳ KSRTC ಕೂಡ 2019ರಲ್ಲಿ KSRTC ಸಂಕ್ಷಿಪ್ತ ಹೆಸರು ಬಳಕೆ ನೋಂದಣಿ ಪಡೆದಿತ್ತು. ಕೇಂದ್ರ ಸರ್ಕಾರವು ಆನಂತರ ಐಪಿಎಬಿಯನ್ನು ರದ್ದುಗೊಳಿಸಿತ್ತು. ಐಪಿಎಬಿ ಮುಂದಿದ್ದ ಪ್ರಕರಣ ಮದ್ರಾಸ್ ಹೈಕೋರ್ಟ್‌ಗೆ ವರ್ಗಾಯಿಸಲಾಗಿತ್ತು.
