ಕೋಟ: ಹುಬ್ಬಳ್ಳಿಯಲ್ಲಿ ಬ್ಯುಟಿಕ್ ಸ್ಟುಡಿಯೋ ನೆಪದಲ್ಲಿ ₹6.30 ಲಕ್ಷ ವಂಚನೆ, ಸಂಬಂಧಿ ರಂಜಿತ್ ವಿರುದ್ಧ ದೂರು

ಕೋಟ: ಪಾಲುದಾರಿಕೆ ವ್ಯವಹಾರ ಹೆಸರಲ್ಲಿ ವ್ಯಕ್ತಿಯೊಬ್ಬ ಯುವತಿಗೆ ವಂಚನೆ ನಡೆಸಿದ ಘಟನೆ ಸಾಸ್ತಾನದಲ್ಲಿ ನಡೆದಿದೆ. ರಥಬೀದಿ ನಿವಾಸಿ ಅಶ್ವಿನಿ (29) ಮೋಸಕ್ಕೊಳಗಾದವರು.
ಅಶ್ವಿನಿ ಅವರು ಸಾಸ್ತಾನದಲ್ಲಿ ಬ್ಯುಟಿಕ್ ಡಿಸೈನರ್ ವೃತ್ತಿ ಮಾಡಿಕೊಂಡಿದ್ದು, ದೂರದ ಸಂಬಂಧಿ ರಂಜಿತ್ ಎಂಬಾತ ಪಾಲುದಾರಿಕೆಯಲ್ಲಿ ಹುಬ್ಬಳ್ಳಿಯಲ್ಲಿ ಬ್ಯುಟಿಕ್ ಡಿಸೈನರ್ ಸ್ಟುಡಿಯೋ ಮಾಡುವ ಎಂದು ನಂಬಿಸಿ ಬಾಡಿಗೆಗೆ ಕಟ್ಟಡವನ್ನು ತೋರಿಸಿ ಹಂತ ಹಂತವಾಗಿ 1,96,740 ರೂ.ಗಳನ್ನು ಖಾತೆಗೆ ಹಾಕಿಸಿಕೊಂಡಿದ್ದ.
ಅನಂತರ ತದ್ದ ತಾಯಿಯ ಖಾತೆಗೂ 4,33,250 ರೂ. ಪಾವತಿಸಿಕೊಂಡಿದ್ದಾನೆ. ಹೀಗೆ ಒಟ್ಟು 6,29,990 ರೂ.ಗಳನ್ನು ವಂಚಿಸಿದ್ದಾನೆ ಎಂದು ಕೋಟ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.