Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕೊಣನೂರು: ಆಸ್ಪತ್ರೆ ಆವರಣದಲ್ಲಿ ಮಹಿಳೆ ಶವ ಪತ್ತೆ, ಕೊಲೆ ಶಂಕೆ

Spread the love

ಕೊಣನೂರು: ಗಂಗೂರಿನ ಸರ್ಕಾರಿ ಆಸ್ಪತ್ರೆಯ ಕಾರ್ ಶೆಡ್ಡಿನಲ್ಲಿ ಮಹಿಳೆಯ ಶವ ಸಿಕ್ಕಿದ್ದು, ಅನೇಕ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಶವ ಸೋಂಪುರ ಗ್ರಾಮದ ಜಯಮ್ಮ (40) ಅವರದು ಎಂದು ಗುರುತಿಸಲಾಗಿದೆ. ಕೂಲಿ ಕೆಲಸ ಮಾಡಿಕೊಂಡಿದ್ದ ಜಯಮ್ಮ ಪಿರಿಯಾಪಟ್ಟಣ ತಾಲ್ಲೂಕಿನ ಹಲಗನಹಳ್ಳಿಯ ಸುರೇಶ ಎಂಬುವವನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದರು ಎನ್ನಲಾಗಿದೆ.

ಭಾನುವಾರ ಸಂಜೆ ಸೋಂಪುರದಿಂದ ಬಸ್ ಹತ್ತಿ ಬಂದಿದ್ದ ಜಯಮ್ಮ ಸೋಮವಾರ ಬೆಳಿಗ್ಗೆ ಶವವಾಗಿ ಪತ್ತೆಯಾಗಿದ್ದಾರೆ.

‘ಸುರೇಶ ಜಯಮ್ಮನನ್ನು ಕರೆಸಿಕೊಂಡಿರಬಹುದು. ಮೃತ ಮಹಿಳೆಯ ಮಂಡಿ ಮತ್ತು ಮುಖದಲ್ಲಿ ಗಾಯಗಳಿದ್ದು ಸಾವಿನಲ್ಲಿ ಅನುಮಾನಗಳಿವೆ’ ಎಂದು ಮೈದುನ ನಟರಾಜ್ ಕೊಣನೂರು ಪೊಲೀಸ್ ಠಾಣಿಯಲ್ಲಿ ದೂರು ದಾಖಲಿಸಿದ್ದಾರೆ.

ಪೊಲೀಸ್ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದು, ಮೃತ ದೇಹವನ್ನು ಹಾಸನದ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ.


Spread the love
Share:

administrator

Leave a Reply

Your email address will not be published. Required fields are marked *