ಕಂಪ್ಲಿಯ 6 ತಿಂಗಳ ಮಗು ‘ದ್ವಿತಾ’ಗೆ ವರ್ಲ್ಡ್ ವೈಡ್ ಬುಕ್ ಆಫ್ ರೆಕಾರ್ಡ್: ದಾಖಲೆಯ 44 ನಿಮಿಷ ನಿರಂತರವಾಗಿ ಕುಳಿತು ಸಾಧನೆ!

ಕಂಪ್ಲಿ: ಯಾವುದೇ ಸಹಾಯ, ಬಾಹ್ಯ ಬೆಂಬಲವಿಲ್ಲದೆ ಅತಿ ಹೆಚ್ಚು ಸಮಯ ಕುಳಿತುಕೊಳ್ಳುವ ಮೂಲಕ 6 ತಿಂಗಳ ಮಗು ವರ್ಲ್ಡ್ ವೈಡ್ ಬುಕ್ ಆಫ್ ರೆಕಾರ್ಡ್ ಮಾಡಿದೆ.

ಸ್ಥಳೀಯ ನಿವಾಸಿ, ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯ ಮೋಹನ್ ಕುಮಾರ್ ದಾನಪ್ಪ – ಸೌಮ್ಯಶ್ರೀ ದಂಪತಿಯ ದ್ವಿತೀಯ ಪುತ್ರಿ ದ್ವಿತಾ ದಾಖಲೆ ಮಾಡಿದ ಮಗು.
ದ್ವಿತಾ ಜೂನ್ 28ರಂದು ಬೆಂಗಳೂರಿನಲ್ಲಿ ಯಾವುದೇ ಬಾಹ್ಯ ಬೆಂಬಲ ಇಲ್ಲದೆ 44 ನಿಮಿಷ ಮತ್ತು 8 ಸೆಕೆಂಡ್ ಕಾಲ ಕುಳಿತು ಗಮನಾರ್ಹ ಸಮತೋಲನ ಮತ್ತು ಶಕ್ತಿ ಪ್ರದರ್ಶಿಸಿದೆ.
ಇದು ಅಧಿಕೃತವಾಗಿ ಹೊಸ ದಾಖಲೆ ಸ್ಥಾಪಿಸಿದೆ ಎಂದು ವರ್ಲ್x ವೈಡ್ ಬುಕ್ ಆಫ್ ರೆಕಾರ್ಡ್ ಸಂಪಾದಕೀಯ ವಿಭಾಗ ದವರು ತಿಳಿಸಿರುವುದಾಗಿ ಮೋಹನ್ ಕುಮಾರ್ ದಾನಪ್ಪ ಹೇಳಿದ್ದಾರೆ.
ಕುಟುಂಬಕ್ಕಿದೆ ದಾಖಲೆ ಹಿನ್ನೆಲೆ
ಈ ಹಿಂದೆ ಮೋಹನ್ ಕುಮಾರ್ ದಾನಪ್ಪ ಅವರು ರಾಷ್ಟ್ರಮಟ್ಟದಲ್ಲಿ ಮ್ಯಾರಥಾನ್ ಮಾಡಿ ದಾಖಲೆ ಮಾಡಿದ್ದಾರೆ. ಇವರ ಹಿರಿಯ ಪುತ್ರಿ ದಿಶಾ ಮೋಹನ್ ಫ್ಯಾನ್ಸಿ ಡ್ರೆಸ್ ಮತ್ತು ಭರತನಾಟ್ಯದಲ್ಲಿ ದಾಖಲೆ ಮಾಡಿದ್ದರು.